ಮಂಗಳೂರು: ಪ್ರಧಾನಿ ಕಾರ್ಯಾಲಯದಿಂದ ಗುರುತಿಸಲ್ಪಟ್ಟ ಪಂಚಾಯತ್ ಅಧ್ಯಕ್ಷೆಯ ವಿರುದ್ಧ ಅವ್ಯವಹಾರ ಆರೋಪ ಕೇಳಿಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪೆರುವಾಯಿ ಗ್ರಾಮ ಸಭೆಯಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ದೆಹಲಿಯಿಂದ ಅಹ್ವಾನ ಪಡೆದಿದ್ದ ಪಂಚಾಯತ್ ಅಧ್ಯಕ್ಷೆ ನಫಿಸಾ ವಿರುದ್ಧ ಅವ್ಯವಹಾರ ಆರೋಪದ ಬಗ್ಗೆ ಚರ್ಚೆ ನಡೆಯುತ್ತಿದೆ.ದೆಹಲಿಯ ಸ್ವಾತಂತ್ರ್ಯೋತ್ಸವ ಪ್ರಯಾಣ ಖರ್ಚಿನಲ್ಲಿ ಅವ್ಯವಹಾರ ಮಾಡಿದ್ದಾರೆಂದು ಎಂದು ಗ್ರಾಮಸ್ಥರ ಕಿಡಿಕಾರಿದ್ದರು.
ಅಧ್ಯಕ್ಷೆಯ ದೆಹಲಿ ಟೂರ್ ಲೆಕ್ಕದ ವಿಚಾರದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಆದರೆ ಅವ್ಯವಹಾರದ ಆರೋಪ ಮಾಡಿರುವವರ ವಿರುದ್ದ ಪಂಚಾಯತ್ ಅಧ್ಯಕ್ಷೆ ನಫೀಸಾ ಕೆಂಡಾಮಂಡಲವಾಗಿದ್ದಾರೆ. ಸ್ವಾತಂತ್ರ್ಯೋತ್ಸವಕ್ಕೆ ದೆಹಲಿಯಿಂದ ಆಹ್ವಾನ ಸ್ವೀಕರಿಸಿದ್ದ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ದೆಹಲಿಗೆ ತೆರಳಲು ಪಂಚಾಯತ್ ಹಣ ಖರ್ಚು ಮಾಡಿದ್ದಾರೆ ಎಂದು ಕೆಲ ಗ್ರಾಮಸ್ಥರು ಆರೋಪಿಸಿದ್ದಾರೆ.
ಅವರು ದೆಹಲಿಗೆ ಹೋಗುವ ಖರ್ಚನ್ನ ಸರ್ಕಾರ ಭರಿಸಲಿದ್ದು, ಜಿಲ್ಲಾ ಪಂಚಾಯತ್‌ನಿಂದ ಮರುಪಾವತಿಯಾಗಲಿದೆ ಎಂದು ಪಂಚಾಯತ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಇನ್ನು ಸಭೆಯಲ್ಲಿ ಹಂಚಲಾಗಿದ್ದ ಪಂಚಾಯತ್ ಖರ್ಚು ವೆಚ್ಚದ ಪತ್ರದಲ್ಲಿ ಹಲವು ಕ್ರಮ ಸಂಖ್ಯೆ ಮಾಯವಾಗಿದೆ ಎನ್ನಲಾಗಿದೆ. ಗ್ರಾಮಸ್ಥರು ಕೇಳಿದ ಪ್ರಶ್ನೆಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡದ ಕಾರಣ ಸಭೆಯಲ್ಲಿ ಜಟಾಪಟಿ ನಡೆದಿದೆ. ಇನ್ನು ಈ ಬಗ್ಗೆ ಈ ವಿಚಾರವಾಗಿ ಕೆಂಡಾಮಂಡಲರಾದ ಅಧ್ಯಕ್ಷೆ ನಫೀಸಾರಿಂದ ಸಭೆಯಲ್ಲಿ ಉಗ್ರರೂಪ ತಾಳಿದ್ದಾರೆ. “ಒಬ್ಬ ಹೆಣ್ಣು ಅನ್ನೋ ಕಾರಣಕ್ಕೆ ನನ್ನ ತೇಜೋವಧೆ ಮಾಡಲಾಗುತ್ತಿದೆ ಆಕ್ರೋಶ, ಪಂಚಾಯತ್‌ನಲ್ಲಿ ಒಂದು ರೂಪಾಯಿ ಅವ್ಯವಹಾರ ಸಾಬೀತಾದರೂ ರಾಜೀನಾಮೆಯ ಕೊಡುತ್ತೇನೆ ಎಂದು ಸವಾಲ್ ಹಾಕಿದ್ದಾರೆ.
ಸದ್ಯ ಪಂಚಾಯತ್ ಅಧ್ಯಕ್ಷೆಯ ವಿರುದ್ಧ ಅವ್ಯವಹಾರ ಆರೋಪಕ್ಕೆ ಟ್ವಿಸ್ಟ್ ಸಿಕ್ಕಿದೆ. ದ. ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸಾ ವಿರುದ್ಧ ಆರೋಪಕ್ಕೆ ಸಂಬಂಧಿಸಿದಂತೆ, ಪಂಚಾಯತ್ ನಿಧಿಯಿಂದಲೇ ದೆಹಲಿ ಪ್ರವಾಸದ ವೆಚ್ಚ ಭರಿಸಲು ಸುತ್ತೋಲೆ ಹೊರಡಿಸಿದ್ದ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಹೊರಡಿಸಿದ್ದ ಆದೇಶದ ಪ್ರತಿ ಲಭ್ಯವಾಗಿದೆ.
ಇನ್ನೂ ಈ ಸುತ್ತೋಲೆಯಲ್ಲಿ ಮಹಿಳಾ ಅಧ್ಯಕ್ಷೆ ಸಹಿತ ಪತಿ ಹಾಗೂ ಇತರೆ ಸದಸ್ಯರಿಗೂ ಪ್ರಯಾಣ ಹಾಗೂ ವಸತಿಯ ಅವಕಾಶ ಹಾಗೂ ದೆಹಲಿಯ ಕರ್ನಾಟಕ ಭವನದಲ್ಲಿ ವಸತಿ ಲಭ್ಯವಿಲ್ಲದ ವೇಳೆ ಇತರೆಡೆ ವ್ಯವಸ್ಥೆಗೆ ಅವಕಾಶ ಮಾಡಲಾಗುವುದು. ಈ ಎಲ್ಲಾ ವೆಚ್ಚಗಳನ್ನ ಪಂಚಾಯತ್ ನಿಧಿಯಿಂದ ಪಡೆಯಲು ಸೂಚಿಸಿದೆ. ವೆಚ್ಚದ ಬಿಲ್ ದೃಢೀಕರಣದ ಬಳಿಕ ಜಿಲ್ಲಾ ಪಂಚಾಯತ್ ನಿಂದ ಗ್ರಾಮ ಪಂಚಾಯತ್ ಗೆ ಮರು ಪಾವತಿ ಮಾಡಲು ಸೂಚನೆ ನೀಡಲಾಗಿದೆ. ಇದಕ್ಕೆ ಎಲ್ಲಾ ಸದಸ್ಯರ ಅನುಮೋದನೆ ಪಡೆದು ಹಣ ಬಳಕೆ ಮಾಡಿರುವ ಬಗ್ಗೆ ಪಂಚಾಯತ್ ಅಧ್ಯಕ್ಷೆಯ ಸ್ಪಷ್ಟನೆ ನೀಡಿದ್ದರು
ಆದರೆ ಇದೀಗ ಸುತ್ತೋಲೆ ನಿಯಮಾವಳಿಗಳನ್ನ ಮೀರಿ ಹೆಚ್ಚುವರಿ ಖರ್ಚಿನ ಬಗ್ಗೆಯೂ ಅನುಮಾನ ವ್ಯಕ್ತವಾಗಿದ್ದು ಬಿಜೆಪಿ ಕಾರ್ಯಕರ್ತ ಅವ್ಯವಹಾರ ಆರೋಪ ಮಾಡಿದ್ದಾರೆ. ಕೆಂಪು ಕೋಟೆಯ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಲು ದೆಹಲಿಗೆ ಪ್ರಯಾಣ ಬೆಳೆಸಿದ್ದ ಅಧ್ಯಕ್ಷೆ ನಫೀಸಾ ಪ್ರಯಾಣದ ಖರ್ಚು ವೆಚ್ಚದ ವಿರುದ್ಧ ಬಿಜೆಪಿ ಕಾರ್ಯಕರ್ತನ ತಕರಾರು ತೆಗೆದಿದ್ದು ಪೆರುವಾಯಿ ಗ್ರಾಮ ಸಭೆಯಲ್ಲಿ ಪಂಚಾಯತ್ ನಿಧಿಯ ಹಣ ದುರ್ಬಳಕೆ ಆಗಿದೆ ಎಂದು ಆರೋಪಿಸಿದ್ದಾರೆ.