ಮಂಗಳೂರು: ವಖ್ಫ್ ಅಂದ್ರೆ ಹಿಂದೂ ಮುಸ್ಲಿಮ್ ಕದನವೋ , ರೈತರ ಭೂಮಿ ಕಬಲಿಸುವ ಹುನ್ನಾರವೋ, ಎಲ್ಲವೂ ಮರೆಮಾಚಿ ಗದ್ದಲ ಎಬ್ಬಿಸಲಾಗಿದೆ. ಅಂಕಿ ಅಂಶ ಇಟ್ಟು 9 ಲಕ್ಷ ಕೋಟಿಯ ವಖ್ಫ್ ಅಸ್ತಿ ದೇಶದಲ್ಲಿ ಇದೆ ಎಂದು ಕೇಂದ್ರ ಕಾನೂನು ಮಂತ್ರಿಯೇ ಹೇಳಿದ್ದಾರೆ.
ಮೋದಿ ಸರಕಾರದ ಸುತ್ತೋಲೆಯತೆಯೇ ರೈತರಿಗೆ ನೋಟಿಸ್ ನೀಡಿದ್ದು, 2019 ರಿಂದ 23ರವರಿಗೆ 128 ರ ಪೈಕಿ 110 ವಖ್ಫ್ ಅಸ್ತಿಯನ್ನು ಹಿಂದಿರುಗಿಸಿದ್ದಾರೆ ಬಸವರಾಜ್ ಪಾಟೀಲ್ ಯತ್ನಾಳ್ ರವರ ಬಿಜೆಪಿ ಸರ್ಕಾರ ಇರುವಾಗಲೇ ಹೀಗೆ ಆಗಿದ್ದು, ಆಗ ಕಂದಾಯ ಸಚಿವರಾಗಿದ್ದವರು ಆರ್ ಅಶೋಕ್. ಜಮೀರ್ ಮತ್ತು ಬೊಮ್ಮಾಯಿ ಮಾತುಗಳಲ್ಲಿ ವ್ಯತ್ಯಾಸ ಏನೂ ಇಲ್ಲ. ವ್ಯತ್ಯಾಸ ಇರುವುದು ಹೆಸರು ಮತ್ತು ಪಕ್ಷದಲ್ಲಿ ಮಾತ್ರ.
ಬಿಜೆಪಿಯ ಪ್ರಣಾಳಿಕೆಯಲ್ಲೂ ಇದೆ, ಖುದ್ದು ಆಗಿನ ಮುಖ್ಯಮಂತ್ರಿಯೇ ಹೇಳಿದ್ದಾರೆ ಈಗ ಅದಕ್ಕೆ ವ್ಯತಿರಿಕ್ತವಾಗಿ ಮಾತನಾಡುತ್ತಿದ್ದಾರೆ. ಸುನ್ನತ್ ಬಾಯಿ ಯಲ್ಲಿ ಹಾಕಿಕೊಳ್ಳಬೇಡಿ ಹರೀಶ್ ಪೂಂಜಾ. ವಖ್ಫ್ ಗೂ ಸುನ್ನತ್ ಗೂ ಏನು ಸಂಬಂಧ. ಕಂದಾಯ ಮಂತ್ರಿ ಆಗಿ ಅವತ್ತು ಆರ್ ಅಶೋಕ್ ರಿಗೆ ಗೊತ್ತಾಗಿಲ್ಲವೇ ಎಂದು ಸಾಹುಲ್ ಹಮೀದ್ ಕಿಡಿಕಾರಿದರು.