ಮಂಗಳೂರು: ಮಿಲಾಗ್ರಿಸ್ ಕಾಲೇಜ್ ಹಂಪನಕಟ್ಟೆ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ 2024-25 ಶೈಕ್ಷಣಿಕ ವರ್ಷದ ಕಾರ್ಯಕ್ರಮ ಉದ್ಘಾಟನಾ ಸಮಾರಂಭವು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ. ಆಲ್ವಿನ್ ಡಿಸೋಜ, ಸಂತ ಆಲೋಶಿಯಸ್ ಡೀಮ್ಡ್ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು, ಸಮುದಾಯ ಸೇವೆಯ ಮಹತ್ವದ ಕುರಿತು ಮಾತನಾಡಿ, ವಿದ್ಯಾರ್ಥಿಗಳು NSS ಚಟುವಟಿಕೆಗಳಲ್ಲಿ
ಸಕ್ರಿಯವಾಗಿ ಭಾಗವಹಿಸಲು ಪ್ರೇರೇಪಿಸಿದರು, ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿ ಸಾಮಾಜಿಕ ಜವಾಬ್ದಾರಿಯನ್ನು ಅರಿಯಲು ಅವರು ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಮೈಕಲ್ ಎಲ್. ಸಂತುಮಯೋರ್ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಲ್ಲಿ ಶಿಸ್ತಿನ ಮಹತ್ವ ಅತ್ಯಗತ್ಯ. ಶಿಸ್ತನ್ನು ಅಳವಡಿಸಿಕೊಂಡಾಗ ಸಾಮಾಜಿಕವಾಗಿ ಬೆಳೆಯುವುದಕ್ಕೆ ಸಹಕಾರಿಯಾಗಿರುತ್ತದೆ ಎಂದರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಶ್ರೀ. ಜೋಯಲ್ ಮಸ್ಕರೆನಸ್ ಮತ್ತು ಸಹಾಯಕ ಅಧಿಕಾರಿ ಶ್ರಾವ್ಯ ಹಾಗೂ ಘಟಕದ ಕಾರ್ಯದರ್ಶಿಗಳಾದ ಅನೂಷಾ ಮತ್ತು ಟೆನ್ಜಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಬ್ದುಲ್ ಕೀಫಾ ನಿರೂಪಿಸಿದರು. ರಾಜೀ ಸಭಿಕರನ್ನು ಸ್ವಾಗತಿಸಿದರು ಮತ್ತು ಜೋಸ್ಲಿನ್ ವಾಲ್ಡರ್
ವಂದಿಸಿದರು.
Ad