ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕುರಿಯ ಗ್ರಾಮದ ಇಡಬೆಟ್ಟು ಎಂಬ ಪ್ರದೇಶದಲ್ಲಿ ಮೆಸ್ಕಾಂ ಗುತ್ತಿಗೆದಾರರು ಹಾಕಿದ ಕಂಬ ಎರಡನೇ ದಿನದಲ್ಲಿ ಧರೆಗೆ ಉರುಳಿದೆ. ಒಂದು ಕಂಬ ತುಂಡಾದರೆ, ಇನ್ನೊಂದು ಧರೆಗೆ ಉರುಳಿದೆ.
ಕೇವಲ ಒಂದೂವರೆ ಅಡಿ ಗುಂಡಿ ತೆಗೆದು ಕಂಬವನ್ನು ಹಾಕಲಾಗಿದೆ. ಸರಿಯಾಗಿ ಗಟ್ಟಿಮಾಡಿ ಕಂಬ ಹಾಕಲಿಲ್ಲ. ಕೇವಲ ಒಂದು ಗಂಟೆ ಮಳೆಗೆ ಕಂಬ ಧರೆಗೆ ಉರುಳಿದರೆ, ಮಳೆಗಾಲದ ಮಳೆಯಲ್ಲಿ ಈ ಕಂಬಗಳ ಪರಿಸ್ಥಿತಿ ಹೇಗಿರಬೇಡ. ಒಂದು ವೇಳೆ ಈ ಕಂಬದಲ್ಲಿ ಕೆಲಸ ಮಾಡವ ವೇಳೆ ಬಿದ್ದಿದರೆ ಅಥವಾ ಬೀಳುವ ವೇಳೆ ಅದರ ಕೆಳಗೆ ಮಾನವ ಇದ್ದಿದ್ದರೆ ಅವರ ಜೀವ ಹಾಕಿಯಾಗಿದ್ದರೆ ಏನು ಗತಿ.
ಅದಲ್ಲದೆ ವಿದ್ಯುತ್ ತಂತಿ ಹಾಕಿದ ಬಳಿಕ, ವಿದ್ಯುತ್ ಇದ್ದ ವೇಳೆ ಧರೆಗೆ ಉರುಳಿಸಿದ್ದರೆ ವಿದ್ಯುತ್ ಶಾಕ್‌ನಿಂದ ಜೀವನ ಹಾಕಿಯಾಗಿದ್ದರೆ, ವಿದ್ಯುತ್ ತಂತಿ ಎಳೆದ ಬಳಿಕ ಕಂಬ ಬೀಳುವ ವೇಳೆ ವಿದ್ಯುತ್ ಶಾರ್ಟ್ ಆಗಿ ಬೆಂಕಿ ಹತ್ತಿ ಆಸ್ತಿ ಪಾಸ್ತಿ ನಷ್ಟವಾಗಿದ್ದರೆ ಯಾರು ಹೊಣೆ. ದೇವರ ದಯೆ ಕಂಬ ಹಾಕಿದ ಮಾರನೇ ದಿನವೇ ಬಿದ್ದಿದೆ. ಈ ಮೂಲಕ ಸಾರ್ವಜನಿಕರ ಹಣದ ದುರುಪಯೋಗ ಮತ್ತು ಜೀವ ಹಾನಿ ತಪ್ಪಿದೆ.
ಗುತ್ತಿಗೆದಾರರ ಮುಖವಾದವೂ ಬಯಲಾಗಿದೆ. ಮೆಸ್ಕಾಂ ಇಲಾಖೆಯು ಗುತ್ತಿಗೆದಾರರನ್ನು ನಂಬಿ ಕೆಲಸ ಮಾಡಿಸಿದರೆ, ಗುತ್ತಿಗೆದಾರ ಈ ರೀತಿ ಜೀವದೊಂದಿಗೆ ಚೆಲ್ಲಾಟ ಮಾಡುತ್ತಿದ್ದಾರೆ. ದುರಂತ ಸಂಭವಿಸಿದ ಬಳಿಕ ನಾವು ದೂರುವುದು ಮೆಸ್ಕಾಂ ಇಲಾಖೆಯನ್ನು. ಅಧಿಕಾರಿಗಳು ಬೇಜವಾಬ್ದಾರಿ ಎಂದು ಆರೋಪಿಸುತ್ತೇವೆ. ಗುತ್ತಿಗೆದಾರರು ಹೆಚ್ಚು ಲಾಭ ಮಾಡಬೇಕು ಎಂದು ಹೇಳಿ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಆರೋಪಿಸುವುದು ಕಡಿಮೆ.