Bengaluru 22°C
Ad

ಅಶಕ್ತ ಕುಟುಂಬಕ್ಕೆ ಮನೆ ಹಸ್ತಾಂತರ ಮೂಲಕ ಸಾರ್ಥಕ ದೀಪಾವಳಿ : ಕಾಮತ್

ತೀವ್ರ ಆರ್ಥಿಕ ಸಂಕಷ್ಟದ ನಡುವೆ ಯಾವುದೇ ಕ್ಷಣದಲ್ಲಿ ಮುರಿದು ಬೀಳಬಹುದಾಗಿದ್ದ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಬೋಳೂರು ವಾರ್ಡಿನ ಪರಪ್ಪು ಕಾಲೋನಿಯ ಪರಿಶಿಷ್ಟ ಸಮುದಾಯದ ದಿವಂಗತ ರವಿಯವರ ಕುಟುಂಬದವರಿಗಾಗಿ ಶಾಸಕ ಶ್ರೀ ಡಿ.ವೇದವ್ಯಾಸ ಕಾಮತ್ ಹಾಗೂ ಸ್ಥಳೀಯ ಪಾಲಿಕೆ ಸದಸ್ಯ ಶ್ರೀ ಜಗದೀಶ್ ಶೆಟ್ಟಿ ರವರ ನೇತೃತ್ವದಲ್ಲಿ ನಿರ್ಮಿಸಲಾದ ಸುಸಜ್ಜಿತ "ಶ್ರದ್ಧಾ" ಮನೆಯನ್ನು ಹಸ್ತಾಂತರಿಸುವ ಕಾರ್ಯಕ್ರಮವು ನಡೆಯಿತು.

ಮಂಗಳೂರು: ತೀವ್ರ ಆರ್ಥಿಕ ಸಂಕಷ್ಟದ ನಡುವೆ ಯಾವುದೇ ಕ್ಷಣದಲ್ಲಿ ಮುರಿದು ಬೀಳಬಹುದಾಗಿದ್ದ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಬೋಳೂರು ವಾರ್ಡಿನ ಪರಪ್ಪು ಕಾಲೋನಿಯ ಪರಿಶಿಷ್ಟ ಸಮುದಾಯದ ದಿವಂಗತ ರವಿಯವರ ಕುಟುಂಬದವರಿಗಾಗಿ ಶಾಸಕ ಶ್ರೀ ಡಿ.ವೇದವ್ಯಾಸ ಕಾಮತ್ ಹಾಗೂ ಸ್ಥಳೀಯ ಪಾಲಿಕೆ ಸದಸ್ಯ ಶ್ರೀ ಜಗದೀಶ್ ಶೆಟ್ಟಿ ರವರ ನೇತೃತ್ವದಲ್ಲಿ ನಿರ್ಮಿಸಲಾದ ಸುಸಜ್ಜಿತ “ಶ್ರದ್ಧಾ” ಮನೆಯನ್ನು ಹಸ್ತಾಂತರಿಸುವ ಕಾರ್ಯಕ್ರಮವು ನಡೆಯಿತು.

Ad

ಮ

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತರು, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ ತುಂಬುತ್ತಿರುವ ಈ ಸಂಭ್ರಮದ ಹೊತ್ತಿನಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಹ ಗೌರವಯುತ ಜೀವನ ಸಾಗಿಸಬೇಕೆಂಬ ಸಂಘ ಹಾಗೂ ಭಾರತೀಯ ಜನತಾ ಪಾರ್ಟಿಯ ಧ್ಯೇಯ ವಾಕ್ಯದಂತೆ ಈ ನಮ್ಮ ಬಂಧುಗಳಿಗೆ ಸಮಾಜದ ದಾನಿಗಳ ಸಹಯೋಗ, ಸಹಕಾರದಿಂದ ಸುಂದರ ಸೂರೊಂದು ನಿರ್ಮಾಣವಾಗಿದೆ.

Ad

ಸ್ಥಳೀಯ ಮ.ನ.ಪಾ ಸದಸ್ಯ ಶ್ರೀ ಜಗದೀಶ್ ಶೆಟ್ಟಿಯವರಂತೂ ಈ ಬಗ್ಗೆ ಅತ್ಯಂತ ವಿಶೇಷ ಮುತುವರ್ಜಿ ವಹಿಸಿದ್ದರ ಫಲವಾಗಿ ನಮ್ಮೆಲ್ಲರ ಪಾಲಿಗೆ ಇದು ಸಾರ್ಥಕ ದೀಪಾವಳಿಯಾಗಿದೆ. ಇಂತಹ ಮಾದರಿ ಸೇವಾ ಕಾರ್ಯಗಳು ಹಲವರಿಗೆ ಪ್ರೇರಣೆಯಾಗುವ ಮೂಲಕ ಅನೇಕಾರು ಅಶಕ್ತ ಕುಟುಂಬಗಳಿಗೆ ನೆರವಾಗಲಿ ಎಂದು ವಿನಂತಿಸುತ್ತಾ ಈ ಮನೆಯ ಬಾಳಲ್ಲಿ ದೀಪಾವಳಿಯು ಹೊಸ ಬೆಳಕು, ಸುಖ, ಶಾಂತಿ, ನೆಮ್ಮದಿ ಮೂಡಿಸಲಿ ಎಂದು ಹಾರೈಸಿದರು.

Ad

ಹ (1)

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ ಡಾ. ಪಿ ವಾಮನ್ ಶೆಣೈಯವರು ಮನೆಯ ಸದಸ್ಯರಿಗೆ ಕೀಲಿ ಕೈ ಹಸ್ತಾಂತರಿಸಿ ದೀಪಾವಳಿಯ ಶುಭ ಹಾರೈಸಿ ಈ ಸೇವಾ ಕಾರ್ಯಕ್ಕೆ ಕೈಜೋಡಿಸಿದ ದಾನಿಗಳನ್ನು ಸನ್ಮಾನಿಸಿದರು.

Ad

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಉಪ ಮೇಯರ್ ಭಾನುಮತಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಮಹಾನಗರ ಸಂಘಚಾಲಕ್‌ ಡಾ.ಸತೀಶ್‌ ರಾವ್‌, ಅಖಿಲ ಭಾರತ ಮುಂಡಾಲ ಯುವ ವೇದಿಕೆ ಅಧ್ಯಕ್ಷರಾದ ರವಿ ಕಾಪಿಕಾಡ್,

Ad

೨

ಶ್ರೀ ಕಚ್ಚೂರು ಮಾಲ್ತಿದೇವಿ ದೇವಸ್ಥಾನ ಬಬ್ಬುಸ್ವಾಮಿ ಮೂಲ ಕ್ಷೇತ್ರ ಬಾರ್ಕೂರು ಅಧ್ಯಕ್ಷರಾದ ಶಿವಪ್ಪ ನಂತೂರು, ಬಿಜೆಪಿ ಪ್ರಮುಖರಾದ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಪ್ರೇಮಾನಂದ ಶೆಟ್ಟಿ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಮೋನಪ್ಪ ಭಂಡಾರಿ, ರಾಹುಲ್ ಬೋಳೂರು, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪುರುಷೋತ್ತಮ್, ಕಿಶೋರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Ad
Ad
Ad
Nk Channel Final 21 09 2023