Bengaluru 22°C
Ad

ನಡು ರಸ್ತೆಯಲ್ಲೇ ಹೊತ್ತಿ ಉರಿದ ಐಷಾರಾಮಿ ಬಿಎಂಡಬ್ಲ್ಯು ಕಾರ್

ಹಳೆಯ ಐಷಾರಾಮಿ ಬಿಎಂಡಬ್ಲ್ಯು ನಡು ರಸ್ತೆಯಲ್ಲೇ ಧಗ ಧಗನೆ ಹೊತ್ತಿ ಉರಿದ ಘಟನೆ ಮಂಗಳೂರಲ್ಲಿ ನಡೆದಿದೆ. ಘಟನೆಯಲ್ಲಿ ಚಾಲಕ ಸೇಫ್ ಆಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮಂಗಳೂರು : ಹಳೆಯ ಐಷಾರಾಮಿ ಬಿಎಂಡಬ್ಲ್ಯು ನಡು ರಸ್ತೆಯಲ್ಲೇ ಧಗ ಧಗನೆ ಹೊತ್ತಿ ಉರಿದ ಘಟನೆ ಮಂಗಳೂರಲ್ಲಿ ನಡೆದಿದೆ. ಘಟನೆಯಲ್ಲಿ ಚಾಲಕ ಸೇಫ್ ಆಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮಂಗಳೂರಿನ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಸಮೀಪ ಗುರುದೀಪ್ ಎಂಬಾತ ಕಾರ್ ಡ್ರೈವ್ ಮಾಡಿಕೊಂಡು ಬರುವಾಗ ಹಳೆಯ ಬಿಎಂಡಬ್ಲ್ಯು ಕಾರು ದಿಢೀರನೆ ಬೆಂಕಿ ಹೊತ್ತಿಕೊಂಡಿದೆ. ಕಾರಲ್ಲಿ ಚಾಲಕ ಒಬ್ಬನೇ ಇದ್ದ ಕಾರಣ, ಕೂಡಲೇ ಕಾರಿನಿಂದ ಹೊರಗೆ ಹಾರಿದ್ದಾರೆ.

ದೆಹಲಿ ರಿಜೆಸ್ಟ್ರೇಶನ್ ನ ಹಳೆಯ ಬಿಎಂಡಬ್ಲ್ಯು ಕಾರ್ ಇದಾಗಿದ್ದು , ಸರ್ವಿಸ್ ಮಾಡಿಸಲು ಗ್ಯಾರೇಜ್ ಗೆ ತರುವ ವೇಳೆ ಈ ರೀತಿಯಾಗಿದ್ದು, ಬಹುಶಃ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಾರಿಗೆ ಬೆಂಕಿ ವ್ಯಾಪಿಸಿದೆ ಎಂದು ಶಂಕಿಸಲಾಗಿದೆ.

Ad
Ad
Nk Channel Final 21 09 2023