Ad

ಮನೆಯಲ್ಲಿ ಮಲಗಿದ್ದ ವೃದ್ಧೆಯ ಕಿವಿಯಿಂದ ಚಿನ್ನಾಭರಣ ಕಳವು

Vitla
ಬಂಟ್ವಾಳ:  ಮನೆಯಲ್ಲಿ ಮಲಗಿದ್ದ ವೇಳೆ ವೃದ್ಧರೊಬ್ಬರ ಕಿವಿಯಿಂದ ಚಿನ್ನಾಭರಣ ಕಳವುಗೈದ ಘಟನೆ ವಿಟ್ಲ ಪಡ್ನೂರು ಗ್ರಾಮದಲ್ಲಿ ನಡೆದಿದೆ.  ವಿಟ್ಲ ಪಡ್ನೂರು ಗ್ರಾಮದ ಪಳ್ಳಿಗದ್ದೆ ನಿವಾಸಿ  ಬಿ ಎಂ ಇಬ್ರಾಹಿಂ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Ad
300x250 2
ದೂರದಾರ ಇಬ್ರಾಹಿಂ ಅವರ  ಸಹೋದರನ ಮನೆಯ ಹಿಂಬಾಗಿಲ ಕಿಟಕಿಯ ಸರಳನ್ನು, ಯಾರೋ ಕಳ್ಳರು ಯಾವುದೋ ಸಾಧನದಿಂದ ಮುರಿದು, ನಂತರ ಅದೇ ಕಿಟಕಿಯ ಮೂಲಕ ಯಾವುದೋ ಸಾಧನದಿಂದ ಮನೆಯ ಹಿಂಬದಿಯ ಬಾಗಿಲನ್ನು ತೆರೆದು, ಮನೆಯ ಒಳಗೆ ಪ್ರವೇಶಿಸಿ, ಮನೆಯ ಕೋಣೆಯಲ್ಲಿ  ಮಲಗಿದ್ದ ತಾಯಿ ಐಸಮ್ಮರವರು ಧರಿಸಿದ್ದ, ಅಂದಾಜು 8 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿರುತ್ತಾರೆ.

ಕಳ್ಳತನವಾಗಿರುವ ಆಭರಣಗಳ ಅಂದಾಜು ಮೌಲ್ಯ ಸುಮಾರು 48 ಸಾವಿರ ರೂ.  ಎಂದು ಅಂದಾಜಿಸಲಾಗಿದೆ. ಮನೆಗೆ ನುಗ್ಗಿದ ಕಳ್ಳರು ವೃದ್ಧ ಮಹಿಳೆಯ ಬಾಯಿಯನ್ನು ಮುಚ್ಚಿ, ಕಿವಿಯಿಂದ ಚಿನ್ನವನ್ನು ಕಿತ್ತು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ವೃದ್ಧ ಪ್ರಜ್ಞೆ ತಪ್ಪಿ ಬಿದ್ದಿದ್ದರು ಎನ್ನಲಾಗಿದೆ.  ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ವೃದ್ಧೆಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad
Ad
Nk Channel Final 21 09 2023
Ad