ಮಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಪೊಳಲಿಯ ಪುರಲ್ದಪ್ಪೆನ ಮೋಕೆದ ಬೊಳ್ಳಿಲು, ಪೊಳಲಿ ಟೈಗರ್ಸ್ ತಂಡದ ವತಿಯಿಂದ ಐದನೇ ವರ್ಷದ ಮೂರು ದಿನಗಳ ದೀಪೋತ್ಸವ ಮತ್ತು ಕುಣಿತ ಭಜನಾ ಕಾರ್ಯಕ್ರಮದ ಮೊದಲ ದಿನದ ಕಾರ್ಯಕ್ರಮ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನೆರವೇರಿತು.
ಕಾರ್ಯಕ್ರಮಕ್ಕೆ ಶಾಸಕರಾದ ರಾಜೇಶ್ ನಾಯ್ಕ್ ಉಳೆಪಾಡಿ ಗುತ್ತು, ಪ್ರಶಾಂತ್ ಕಾಜವ ಸಹಿತ ಇತರ ಗಣ್ಯರು ಸೇರಿ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಈ ವೇಳೆ ಶಾಸಕ ರಾಜೇಶ್ ನಾಯ್ಕ್ ಉಳೆಪಾಡಿ ಗುತ್ತು ಮಾತನಾಡಿ ಕಳೆದ ಐದು ವರ್ಷಗಳಿಂದ ಪೊಳಲಿಯ ಪುರಲ್ದಪ್ಪೆನ ಮೋಕೆದ ಬೊಳ್ಳಿಲು, ಪೊಳಲಿ ಟೈಗರ್ಸ್ ತಂಡದ ಸಂಸ್ಥಾಪಕ ಸಂತೋಷ್ ಪೊಳಲಿ ನೇತೃತ್ವದಲ್ಲಿ ದೀಪಾವಳಿ ಪ್ರಯುಕ್ತ ದೀಪೋತ್ಸವ ಮಾತ್ರವಲ್ಲದೆ ಇತರ ಸಂದರ್ಭದಲ್ಲಿ ಅಶಕ್ತರಿಗೆ ನೆರವಾಗುವಂತಹ ಸಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ನಿಜಕ್ಕೂ ಇದು ಶ್ಲಾಘನೀಯ ಕಾರ್ಯ ಇಂತಹ ಕಾರ್ಯ ಮುಂದಿನ ದಿನಗಳಲ್ಲಿ ಇನ್ನಷ್ಟು ಈ ತಂಡದ ಮೂಲಕ ಆಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಪ್ರಶಾಂತ್ ಕಾಜಾವ, ಪೊಳಲಿಯ ಪುರಲ್ದಪ್ಪೆನ ಮೋಕೆದ ಬೊಳ್ಳಿಲು, ಪೊಳಲಿ ಟೈಗರ್ಸ್ ತಂಡದ ಸಂಸ್ಥಾಪಕ ಸಂತೋಷ್ ಪೊಳಲಿ, ಹಿಂದೂ ಮುಖಂಡ ಸತ್ಯಜೀತ್ ಸುರತ್ಕಲ್, ವಿಜೇಶ್ ನಾಯ್ಕ್ ಮುಡಿಪು, ವೆಂಕಟೇಶ್ ನಾವಡ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಕುಣಿತ ಭಜನೆ ನಡೆಯಿತು.