Bengaluru 22°C
Ad

ಮಂಗಳೂರು: ಶ್ರೀ ರಾಮಸೇನೆಯ 21 ನೇ ವರ್ಷದ ದತ್ತಮಾಲಾ ಅಭಿಯಾನ

ಶ್ರೀ ರಾಮಸೇನೆ ಮಂಗಳೂರು ಇದರ ವತಿಯಿಂದ 21 ನೇ ವರ್ಷದ ದತ್ತಮಾಲಾ ಅಭಿಯಾನದ ಪ್ರಯುಕ್ತ ೬ ನೇ ವರ್ಷದ ದತ್ತ ದೀಪೋತ್ಸವ ಕಾರ್ಯಕ್ರಮ ಶ್ರೀರಾಮಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ಇವರ ನೇತೃತ್ವದಲ್ಲಿ ಮಂಗಳೂರಿನ ಲಕ್ಷೀಭಾಗ್ ಶೇಡಿಗುಡ್ಡೆಯ ಶ್ರೀ ಲಕ್ಷ್ಮೀ ನಾರಾಯಣೀ ದೇವಸ್ಥಾನದಲ್ಲಿ ನೆರವೇರಿತು.

ಮಂಗಳೂರು: ಶ್ರೀ ರಾಮಸೇನೆ ಮಂಗಳೂರು ಇದರ ವತಿಯಿಂದ 21 ನೇ ವರ್ಷದ ದತ್ತಮಾಲಾ ಅಭಿಯಾನದ ಪ್ರಯುಕ್ತ ೬ ನೇ ವರ್ಷದ ದತ್ತ ದೀಪೋತ್ಸವ ಕಾರ್ಯಕ್ರಮ ಶ್ರೀರಾಮಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ಇವರ ನೇತೃತ್ವದಲ್ಲಿ ಮಂಗಳೂರಿನ ಲಕ್ಷೀಭಾಗ್ ಶೇಡಿಗುಡ್ಡೆಯ ಶ್ರೀ ಲಕ್ಷ್ಮೀ ನಾರಾಯಣೀ ದೇವಸ್ಥಾನದಲ್ಲಿ ನೆರವೇರಿತು.

Ad

ದೀಪೋತ್ಸವವು ಶ್ರೀ ಕಂಬಳಿಗಿರಿ ಮಹಾರಾಜರು ಶ್ರೀ ಕ್ಷೇತ್ರ ಗಾಣಾಗಾಪುರ ಶ್ರೀ ವಿವೇಕ ಚಿಂತಾಮಣಿ ಮಹರಾಜರು ಕಂಬಳಿಬಾಬಾ ವಿಶೇಷ ದಿವ್ಯ ಉಪಸ್ಥಿತಿಯಲ್ಲಿ ಮಾತೆಯರಿಂದ ದೀಪ ಪ್ರಜ್ವಲಿಸಿ ಚಾಲನೆ ನೀಡಲಾಯಿತು.

Ad

ಈ ವೇಳೆ ಶ್ರೀರಾಮಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ಮಾತನಾಡಿ ಕಳೆದ ಆರು ವರ್ಷಗಳಿಂದ ದತ್ತಾತ್ರೇಯನ ಸೇವೆಯನ್ನು ಮಂಗಳೂರಿನಲ್ಲಿ ಮಾಡುತ್ತಿದ್ದು ವರ್ಷದಿಂದ ವರ್ಷಕ್ಕೆ ದತ್ತ ಭಕ್ತರ ಸಂಖ್ಯೆ ಹೆಚ್ಚಳ ಆಗುತ್ತಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಜೃಂಭಣೆಯ ದತ್ತ ದೀಪೋತ್ಸವ ಮಂಗಳೂರಿನಲ್ಲಿ ನಡೆಯಲಿದೆ ಎಂದವರು ಹೇಳಿದರು.

Ad

ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ವಿಭಾಗ ಅಧ್ಯಕ್ಷ ಮಧುಸೂದನ್ ಉರ್ವಸ್ಟೋರ್, ಜಿಲ್ಲಾಧ್ಯಕ್ಷ ಅರುಣ್ ಕದ್ರಿ, ಆಧ್ಯಾತ್ಮಿಕ ಗುರು ಪುರುಷೋತ್ತಮ ಪಾವಂಜೆ ಮತ್ತಿತರರು ಉಪಸ್ಥಿತರಿದ್ದರು.

Ad
Ad
Ad
Nk Channel Final 21 09 2023