ಮಂಡ್ಯ : ಮಹಿಳೆ ಮೇಲಿನ ಅತ್ಯಾಚಾರ ಆರೋಪದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರು ಈಗಾಗಲೇ ಜೈಲು ಸೇರಿದ್ದಾರೆ. ಮುನಿರತ್ನ ವಿರುದ್ಧ ಸಂತ್ರಸ್ತೆ ಮಾಡಿರುವ ಆರೋಪಗಳು ಸದ್ಯ ಸಂಚಲನ ಸೃಷ್ಟಿಸುತ್ತಿವೆ. ಮುನಿರತ್ನ ತಮ್ಮ ಮೇಲೆ ಅತ್ಯಾಚಾರ ನಡೆಸಿದ ಜಾಗಗಳನ್ನೂ ಪಟ್ಟಿ ಮಾಡಿ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.
‘ಈ ಹಿಂದೆ ತೋಟಗಾರಿಕೆ ಇಲಾಖೆ ಸಚಿವರಾಗಿದ್ದ ಮುನಿರತ್ನ ಅವರಿಗೆ ನೀಡಲಾಗಿದ್ದ ಸರ್ಕಾರಿ ಕಾರಿನಲ್ಲಿ, ತನ್ನ ವಿಕಾಸೌಧದ ತಮ್ಮ ಕಚೇರಿಯಲ್ಲಿ ಹಾಗೂ ಗೋಡೌನ್‌ನಲ್ಲಿಯೂ ಮುನಿರತ್ನ ನನ್ನನ್ನು ಅತ್ಯಾಚಾರ ಮಾಡಿದ್ದರು’ ಎಂಬ ಶಾಕಿಂಗ್ ವಿಚಾರವನ್ನು ಸಂತ್ರಸ್ತೆ ಬಹಿರಂಗಪಡಿಸಿದ್ದಾರೆ.
‘ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್ ಹಾಗೂ ಪೊಲೀಸ್ ಅಧಿಕಾರಿಗಳ ಅಶ್ಲೀಲ ವಿಡಿಯೋಗಳನ್ನು, ಫೋಟೋಗಳನ್ನು ನನ್ನಿಂದ ಮುನಿರತ್ನ ಸಂಗ್ರಹಿಸಿದ್ದರು. ಅದನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಕೂಡ ಮಾಡಿದ್ದರು’ ಎಂದು ಆರೋಪಿಸಿದ್ದಾರೆ.
Ad