ಮಂಡ್ಯ: ಜಿಲ್ಲೆಯ ನಾಗಮಂಗಲದ ಬದರಿಕೊಪ್ಪಲಿನಲ್ಲಿ ನಿನ್ನೆ(ಸೆ.11) ರಾತ್ರಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ಮಾಡಿದ್ದರು. ಈ ಹಿನ್ನಲೆ ಪೊಲೀಸ್ ಠಾಣೆ ಎದುರು ಗಣಪತಿ ಮೂರ್ತಿ ನಿಲ್ಲಿಸಿ ಹಿಂದೂಗಳು ಪ್ರತಿಭಟನೆ ಕೂಡ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗಲಭೆ ಸಂಬಂಧ 150 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹೌದು, ಕರ್ತವ್ಯ ನಿರತ ಪಿಎಸ್ಐ B.J.ರವಿ ಅವರ ದೂರು ಆಧರಿಸಿ ಕೇಸ್ ದಾಖಲಾಗಿದೆ.
ಘಟನೆ ಹಿನ್ನಲೆ BNS 2023ರ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿರುವ ಪೊಲೀಸರು, 109, 115(2), 118(1), 121(1), 132, 189(2), 189(3), 189(4), 190,191(1), 191(2), 191(3), 324(4),324(5),326(F),326(G) BNS ಅಡಿಯಲ್ಲಿ ಕರ್ತವ್ಯ ನಿರತ ಪಿಎಸ್ಐ B.J.ರವಿ ದೂರು ಆಧರಿಸಿ ಕೇಸ್ ದಾಖಲು ಮಾಡಲಾಗಿದೆ.
ಎಫ್ಐಆರ್ನಲ್ಲಿ ಏನಿದೆ?
ನಾಗಮಂಗಲ ಟೌನ್ ಸ್ಟೇಷನ್ ಪಿಎಸ್ಐ ರವಿ ಅವರ ಮಾಹಿತಿ ಮೇರೆಗೆ ಎಫ್ಐಆರ್ ದಾಖಲಾಗಿದೆ. ನಾನು ಮತ್ತು ನಮ್ಮ ಸಿಬ್ಬಂದಿ ಗಣೇಶ ಮೆರವಣಿಗೆಯ ಬಂದೋಬಸ್ತ್ ಕರ್ತವ್ಯದಲ್ಲಿದ್ದಾಗ ಮಸೀದಿ ಬಳಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ನೃತ್ಯಮಾಡುತ್ತಿದ್ದರು, ಈ ವೇಳೆ ಮಸೀದಿ ಬಳಿ ಹಾಗೂ ಸುತ್ತಮುತ್ತ ಇದ್ದ ಮುಸ್ಲಿಂ ಕೋಮಿನವರಾದ ಇರ್ಷಾದ್ ಪಾಷ, ಇಮ್ರಾನ್ ಪಾಷ ಸೇರಿದಂತೆ ಸುಮಾರು 100-150 ಜನರು ಏಕಾಏಕಿ ಅಕ್ರಮವಾಗಿ ಗುಂಪುಕಟ್ಟಿಕೊಂಡು ಬಂದರು. ಜೈ ಶ್ರೀರಾಮ್ ಘೋಷಣೆಗೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಿದ್ದಾಗ ನಾನು ಮತ್ತು ನಮ್ಮ ಸಿಬ್ಬಂದಿ ಎರಡೂ ಕೋಮಿನವರಿಗೆ ಸಮಾಧಾನ ಮಾಡುತ್ತಿದ್ದೆವು ಎಂದು ವಿವರಿಸಿದ್ದಾರೆ.
ಘಟನೆ,
ನಾಗಮಂಗಲದ ಗಣಪತಿ ವಿಸರ್ಜನೆಯ ವೇಳೆ ಮಸೀದಿಯತ್ತ ಸಾಗಿ ಹೋಗುವಾಗ ಡ್ಯಾನ್ಸ್ ಘೋಷಣೆ ಕೂಗುತ್ತಿದ್ದಂತೆ ಮಸೀದಿ ಕಡೆಯಿಂದ 40ಕ್ಕೂ ಹೆಚ್ಚು ಯುವಕರು ಸೇರಿಕೊಳ್ಳುತ್ತಾರೆ. ಬಳಿಕ ಕಲ್ಲೆಸೆತವಾಗುತ್ತದೆ. ಸರಿಯಾಗಿ 7.45ಕ್ಕೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ಶುರುಮಾಡಿ, ಬಲವಂತವಾಗಿ ಪೊಲೀಸರು ಗಣೇಶನ ಮೆರವಣೆಗೆಯನ್ನು ಮುಂದಕ್ಕೆ ಸಾಗಿಸುತ್ತಾರೆ. ಈ ವಿರುದ್ಧ ಹಿಂದು ಪ್ರತಿಭಟಿಸುತ್ತಾರೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಾರೆ. ಸ್ವಲ್ಪ ಸಮಯದ ನಂತರ ಬೈಕ್ ಟೈಯರ್ಗೆ ಎರಡು ಕಡೆಗಳಿಂದ ಬೆಂಕಿ ಹಚ್ಚಲು ಪ್ರಾರಂಭವಾಗುತ್ತದೆ.