ಮಂಡ್ಯ: ಡಿಸೆಂಬರ್ 20 ರಿಂದ 22ರ ವರೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಭಾಗವಹಿಸಿ ವರದಿಗಾರಿಕೆ ಮಾಡಲಿರುವ ಮಾಧ್ಯಮದವರು ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗುತ್ತದೆ.
ಸಮ್ಮೇಳನದಲ್ಲಿ ವರದಿಗಾಗಿ ಹಾಜರಾಗುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾಧ್ಯಮ ಮಾನ್ಯತೆ ಪತ್ರ (Accreditation Card) ಹೊಂದಿದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶವಿದೆ. ವಿದ್ಯುನ್ಮಾನ ಮಾಧ್ಯಮದಿಂದ : 6 ಪ್ರತಿನಿಧಿಗಳು (3 ವರದಿಗಾರರು 3 ವಿಡಿಯೋಗ್ರಾಹಕರು),
ಮುದ್ರಣ ಮಾಧ್ಯಮದಿಂದ : 4 ಪ್ರತಿನಿಧಿಗಳು (3 ವರದಿಗಾರರು 1 ಛಾಯಾಗ್ರಾಹಕ) ) ತಮ್ಮ ಹೆಸರು, ಪದನಾಮ, ದೂರವಾಣಿ ಸಂಖ್ಯೆ, ಕಚೇರಿ ವಿಳಾಸ ಮತ್ತು ಇಮೇಲ್ ವಿಳಾಸದೊಂದಿಗೆ ಇತ್ತೀಚಿನ ಎರಡು ಭಾವಚಿತ್ರಗಳನ್ನು ಒಳಗೊಂಡಂತೆ ಕಡ್ಡಾಯವಾಗಿ ತಮ್ಮ ಸಂಸ್ಥೆಯ ಶಿಫಾರಸ್ಸು ಪತ್ರದೊಂದಿಗೆ ಮಂಡ್ಯ ಜಿಲ್ಲೆಯಲ್ಲಿರುವ ತಮ್ಮ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳ ಮೂಲಕ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಡ್ಯ ಜಿಲ್ಲೆ, ಮಂಡ್ಯ ಇವರಿಗೆ ದಿನಾಂಕ: 30-11-2024ರ ಒಳಗಾಗಿ ತಲುಪಿಸಬೇಕಾಗುತ್ತದೆ.
ನಿಗದಿತ ದಿನಾಂಕದ ನಂತರ ಸಲ್ಲಿಸುವ ಯಾವುದೇ ಮಾಹಿತಿಯನ್ನು ಪರಿಗಣಿಸಲಾಗುವುದಿಲ್ಲ. ನಿಗಧಿಪಡಿಸಿರುವ ಸಂಖ್ಯೆಗಿಂತ ಹೆಚ್ಚಿನ ಮಾಧ್ಯಮ ಪ್ರತಿನಿಧಿಗಳ ಹೆಸರನ್ನು ಸಲ್ಲಿಸಿದಲ್ಲಿ ನಿಗಧಿ ಪಡಿಸಲಾಗಿರುವ ಸಂಖ್ಯೆಗಷ್ಠೇ ಸೀಮಿತಗೊಳಿಸಲಾಗುವುದು ಮಂಡ್ಯ ಜಿಲ್ಲೆಯಲ್ಲಿ ಸ್ಥಳಿಯ ಮಾಧ್ಯಮ ಪ್ರತಿನಿಧಿಗಳು ಹೊಂದಿಲ್ಲದೇ ಇರುವ ರಾಷ್ಟ್ರಮಟ್ಟದ ಮಾಧ್ಯಮಗಳು ಹಾಗೂ ಇತರೆ ಭಾಷೆಯ ಮಾಧ್ಯಮಗಳು ಮಾತ್ರ (ವಿದ್ಯುನ್ಮಾನ ಮಾಧ್ಯಮದಿಂದ : 2 ಪ್ರತಿನಿಧಿಗಳು (1 ವರದಿಗಾರರು 1 ವಿಡಿಯೋಗ್ರಾಹಕರು),
ಮುದ್ರಣ ಮಾಧ್ಯಮದಿಂದ : 2 ಪ್ರತಿನಿಧಿಗಳು (1 ವರದಿಗಾರರು 1 ಛಾಯಾಗ್ರಾಹಕ) ) ತಮ್ಮ ಹೆಸರು, ಪದನಾಮ, ದೂರವಾಣಿ ಸಂಖ್ಯೆ, ಕಚೇರಿ ವಿಳಾಸ ಮತ್ತು ಇಮೇಲ್ ವಿಳಾಸದೊಂದಿಗೆ ಇತ್ತೀಚಿನ ಎರಡು ಭಾವಚಿತ್ರಗಳನ್ನು ಒಳಗೊಂಡಂತೆ ಕಡ್ಡಾಯವಾಗಿ ತಮ್ಮ ಸಂಸ್ಥೆಯ ಶಿಫಾರಸ್ಸು ಪತ್ರದೊಂದಿಗೆ ಕೇಂದ್ರ ಕಚೇರಿಯ ಸುದ್ದಿ ಮತ್ತು ಪತ್ರಿಕಾ ಶಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ, (ಇನ್‍ಫೆಂಟ್ರಿ ರಸ್ತೆ) ಬೆಂಗಳೂರು ಇಲ್ಲಿಗೆ ದಿನಾಂಕ: 30-11-2024ರ ಒಳಗಾಗಿ ತಲುಪಿಸುವುದು.
ನಿಗದಿತ ದಿನಾಂಕದ ನಂತರ ಸಲ್ಲಿಸುವ ಯಾವುದೇ ಮಾಹಿತಿಯನ್ನು ಪರಿಗಣಿಸಲಾಗುವುದಿಲ್ಲ. ನಿಗಧಿಪಡಿಸಿರುವ ಸಂಖ್ಯೆಗಿಂತ ಹೆಚ್ಚಿನ ಮಾಧ್ಯಮ ಪ್ರತಿನಿಧಿಗಳ ಹೆಸರನ್ನು ಸಲ್ಲಿಸಿದಲ್ಲಿ ನಿಗದಿ ಪಡಿಸಲಾಗಿರುವ ಸಂಖ್ಯೆಗಷ್ಠೇ ಸೀಮಿತಗೊಳಿಸಲಾಗುವುದು ಎಂದು ತಿಳಿಸಲಾಗಿದೆ