Bengaluru 20°C
Ad

ನಾಗಮಂಗಲ ಗಲಭೆ: ಸಂತ್ರಸ್ತರಿಗೆ ಪರಿಹಾರ ಘೋಷಸಿದ ಹೆಚ್‌ಡಿ ಕುಮಾರಸ್ವಾಮಿ

Hdk

ಮಂಡ್ಯ: ನಾಗಮಂಗಲ ಗಲಭೆ ಸಂತ್ರಸ್ತರಿಗೆ ಎರಡು ಲಕ್ಷ ರೂಪಾಯಿವರೆಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಪರಿಹಾರ ಘೋಷಣೆ ಮಾಡಿದರು. ಇಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಲಭೆ ನಡೆದ ಪ್ರದೇಶಕ್ಕೆ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿದರು. ಈ ಗಲಭೆಯಿಂದ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ವೈಯಕ್ತಿಕ ನೆಲೆಯಿಂದ ಪರಿಹಾರ ವಿತರಣೆ ಮಾಡಿದರು.

ಬುಧವಾರ ರಾತ್ರಿ ನಡೆದ ನಾಗಮಂಗಲ ಗಲಭೆ ಪ್ರಕರಣದಲ್ಲಿ ವಾಹನ ಹಾಗೂ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಇದರಿಂದಾಗಿ ಆಸ್ತಪಾಸ್ತಿ ಕಳೆದುಕೊಂಡವರಿಗೆ ತಲಾ 25 ಸಾವಿರ ರೂಪಾಯಿಂದ 2 ಲಕ್ಷ ರೂಪಾಯಿವರೆಗೂ ಪರಿಹಾರ ವಿತರಣೆ ಮಾಡಿದರು. ಇದೇ ವೇಳೆ ಕಷ್ಟ ಹೇಳಿಕೊಂಡವರಿಗೂ ಹೆಚ್‌ಡಿಕೆ ನೆರವು ನೀಡಿದರು. ಈ ಘಟನೆಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಅವರು ಕಿಡಿ ಕಾರಿದರು.

Ad
Ad
Nk Channel Final 21 09 2023