Bengaluru 28°C
Ad

ಕೇರಳದ 25 ಕೋಟಿ ರೂಪಾಯಿ ಲಾಟರಿ ಗೆದ್ದ ಕನ್ನಡಿಗ

  ಈ ಬಾರಿ ಕೂಡ ಕೇರಳದ ಲಾಟರಿ ಲಕ್ಷ್ಮೀ ಬಡ ವ್ಯಕ್ತಿಯ ಮನೆಗೆ ಒಲಿದು ಬಂದಿದ್ದಾಳೆ. ಓಣಂ ಹಬ್ಬದ ಹಿನ್ನೆಲೆಯಲ್ಲಿ ಕೇರಳದಲ್ಲಿ ನಡೆಸುವ ಬಂಪರ್ ಲಾಟರಿ ಇದೀಗ ಕನ್ನಡಿಗನಿಗೆ ಒಲಿದಿದೆ.

ಮಂಡ್ಯ:  ಈ ಬಾರಿ ಕೂಡ ಕೇರಳದ ಲಾಟರಿ ಲಕ್ಷ್ಮೀ ಬಡ ವ್ಯಕ್ತಿಯ ಮನೆಗೆ ಒಲಿದು ಬಂದಿದ್ದಾಳೆ. ಓಣಂ ಹಬ್ಬದ ಹಿನ್ನೆಲೆಯಲ್ಲಿ ಕೇರಳದಲ್ಲಿ ನಡೆಸುವ ಬಂಪರ್ ಲಾಟರಿ ಇದೀಗ ಕನ್ನಡಿಗನಿಗೆ ಒಲಿದಿದೆ.

2024ನೇ ಸಾಲಿನ ಓಣಂ ಬಂಪರ್ ಲಾಟರಿಯಲ್ಲಿ ಮೊದಲ ಬಹುಮಾನ 25 ಕೋಟಿ ರೂಪಾಯಿ ಆಗಿತ್ತು. ಹಾಗೇ 2ನೇ ಬಹುಮಾನದ ಮೂಲಕ 20 ಜನರಿಗೆ 1 ಕೋಟಿ ರೂಪಾಯಿ ಬಹುಮಾನದ ಹಣ ನೀಡುತ್ತಾರೆ. ಈ ಪೈಕಿ ಇದೀಗ ನಮ್ಮ ಕನ್ನಡ ನಾಡಿನ ಮೂಲದ ವ್ಯಕ್ತಿಗೆ ಮೊದಲನೇ ಬಹುಮಾನ 25 ಕೋಟಿ ರೂಪಾಯಿ ಒಲಿದು ಬಂದಿದೆ. ಅಲ್ತಾಫ್ ಎಂಬುವವರಿಗೆ ಈ ಲಾಟರಿ ಒಲಿದು ಬಂದಿದೆ.

ಕೇರಳದಲ್ಲಿ ಓಣಂ ಲಾಟರಿಯ ಟಿಕೆಟ್‌ ಬೆಲೆ ಈ ಬಾರಿ 500 ರೂಪಾಯಿಗೆ ಫಿಕ್ಸ್ ಮಾಡಲಾಗಿತ್ತು. ಈ ಮೂಲಕ ಮೊದಲನೇ ಬಹುಮಾನ ಎಂದು 25 ಕೋಟಿ ರೂಪಾಯಿಯ ಬಹುಮಾನ ಮೊತ್ತ ಫಿಕ್ಸ್ ಆಗಿತ್ತು. ಇದೀಗ ಕರ್ನಾಟಕ ಮೂಲದ ವ್ಯಕ್ತಿಗೆ ಈ ಬಹುಮಾನ ಒಲಿದು ಬಂದಿದ್ದು, ಕಳೆದ 15 ವರ್ಷಗಳಿಂದಲು ಲಾಟರಿ ಆಡುತ್ತಿದ್ದ ಕರ್ನಾಟಕ ಮೂಲದ ಅಲ್ತಾಫ್ ಎಂಬುವವರಿಗೆ ಬರೋಬ್ಬರಿ 25 ಕೋಟಿ ರೂಪಾಯಿ ಲಾಟರಿ ಒಲಿದಿದೆ. ಕೇರಳದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಇದೀಗ ಓಣಂ ಲಾಟರಿ ಗೆದ್ದ ನಂಬರ್ ಯಾವುದು ಎಂಬ ವಿಚಾರವನ್ನ ಘೋಷಣೆ ಮಾಡಿದ್ದಾರೆ.

Ad
Ad
Nk Channel Final 21 09 2023