Bengaluru 22°C
Ad

ಕನ್ನಡ ಪ್ರಚಾರ ರಥಕ್ಕೆ ಹೃದಯಸ್ಪರ್ಶಿ ಸ್ವಾಗತ

ಡಿಸೆಂಬರ್ 20, 21 ಮತ್ತು 22 ರಂದು ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರೂಪಿಸಿರುವ ಪ್ರಚಾರ ರಥವನ್ನು ತಾಲೂಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿ ಸಾಹಿತ್ಯಾಸ್ತರು ಮತ್ತು ತಾಲೂಕು ಕಸಾಪ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದರು.

ಕೃಷ್ಣರಾಜಪೇಟೆ: ಡಿಸೆಂಬರ್ 20, 21 ಮತ್ತು 22 ರಂದು ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರೂಪಿಸಿರುವ ಪ್ರಚಾರ ರಥವನ್ನು ತಾಲೂಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿ ಸಾಹಿತ್ಯಾಸ್ತರು ಮತ್ತು ತಾಲೂಕು ಕಸಾಪ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದರು.

Ad

ನೆರೆಯ ನಾಗಮಂಗಲ ತಾಲೂಕಿನ ಹೊನ್ನಾವರದ ಮೂಲಕ ಗಡಿ ಗ್ರಾಮ ಸಂತೇಬಾಚಹಳ್ಳಿಗೆ ಪ್ರಚಾರ ರಥ ಆಗಮಿಸಿದ್ದು ನ.20ರ ವರೆಗೆ ಪ್ರಚಾರ ರಥ ತಾಲೂಕಿನ ಉದ್ದಗಲಕ್ಕೆ ಸಂಚರಿಸಲಿದೆ. ಸಂತೇಬಾಚಹಳ್ಳಿ ಗ್ರಾಮಕ್ಕೆ ಆಗಮಿಸಿದ ತಾಯಿ ಭುವನೇಶ್ವರಿಯ ಪ್ರಚಾರ ರಥವನ್ನು ಪೂಜೆ ಸಲ್ಲಿಸುವ ಮೂಲಕ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಚ್.ಆರ್.ಪೂರ್ಣಚಂದ್ರ ತೇಜಸ್ವಿ ಬರಮಾಡಿಕೊಂಡರು.

Ad

ಋ

ಕಲಾ ತಂಡಗಳ ಪ್ರದರ್ಶನದೊಂದಿಗೆ ಶಾಲಾ ವಿದ್ಯಾರ್ಥಿಗಳು ಕನ್ನಡ ಧ್ವಜವನ್ನು ಬೀಸುತ್ತಾ ತಾಯಿ ಭುವನೇಶ್ವರಿಯ ಪ್ರಚಾರ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಪ್ರಚಾರ ರಥವನ್ನು ಸ್ವಾಗತಿಸಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, 30ವರ್ಷಗಳ ನಂತರ ಮತೊಮ್ಮೆ ಮಂಡ್ಯ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.

Ad

ಕನ್ನಡ ನುಡಿ ಹಬ್ಬವನ್ನು ಜಿಲ್ಲೆಯ ಜನ ಸಂಭ್ರಮ ಮತ್ತು ಸಡಗರದಿಂದ ಆಚರಿಸಬೇಕು. ಜಿಲ್ಲೆಯ ಸಂಸ್ಕೃತಿ ಮತ್ತು ಹಿರಿಮೆ, ಗರಿಮೆಗಳನ್ನು ಎತ್ತಿಹಿಡಿಯುವ ಮೂಲಕ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಕಾರಣೀಭೂತರಾಗಬೇಕು. ಕನ್ನಡ ನುಡಿ ಜಾತ್ರೆಗೆ ಜಿಲ್ಲೆಯ ಜನರನ್ನು ಆಹ್ವಾನಿಸಲು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಾದ್ಯಂತ ಪ್ರಚಾರ ರಥಯಾತ್ರೆ ನಡೆಸುತ್ತಿದೆ.

Ad
Ad
Ad
Nk Channel Final 21 09 2023