Bengaluru 22°C
Ad

ಕಾಂಪೌಂಡ್ ಗೇಟ್ ಬಿದ್ದು ಬಾಲಕ ಸಾವು

ಹುಂಜನಕೆರೆ ಗ್ರಾಮದ ಚನ್ನಕೇಶವ ದೇವಾಲಯದಲ್ಲಿ ಕಾರ್ತಿಕ ಮಾಸದ ಪೂಜೆಗೆ ಪೋಷಕರ ಜೊತೆ ತೆರಳಿದ್ದ ಐದು ವರ್ಷದ ಬಾಲಕನ ಮೇಲೆ ದೇವಾಲಯದ ಗೇಟ್ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಹುಂಜನ ಕೆರೆ ಗ್ರಾಮದಲ್ಲಿ ನಡೆದಿದೆ.

ಮಂಡ್ಯ: ಹುಂಜನಕೆರೆ ಗ್ರಾಮದ ಚನ್ನಕೇಶವ ದೇವಾಲಯದಲ್ಲಿ ಕಾರ್ತಿಕ ಮಾಸದ ಪೂಜೆಗೆ ಪೋಷಕರ ಜೊತೆ ತೆರಳಿದ್ದ ಐದು ವರ್ಷದ ಬಾಲಕನ ಮೇಲೆ ದೇವಾಲಯದ ಗೇಟ್ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಹುಂಜನ ಕೆರೆ ಗ್ರಾಮದಲ್ಲಿ ನಡೆದಿದೆ.

Ad

ಗ್ರಾಮದ ಹೆಚ್.ಟಿ ಸಿದ್ದರಾಜು -ಸುಮಿತ್ರ ದಂಪತಿಗಳ ಪುತ್ರ 5 ವರ್ಷದ ಜಿಷ್ಣು ಹೆಚ್.ಎಸ್ ಸಾವನ್ನಪ್ಪಿದ ದುರ್ದೈವಿ ಬಾಲಕ. ಈತ ಚಿನ್ಮಯ ವಿದ್ಯಾಲಯದಲ್ಲಿ ಎಲ್ ಕೆ ಜಿ ಓದುತ್ತಿದ್ದ ಜಿಷ್ಣು ಹೆಚ್.ಎಸ್ ಸ್ವಗ್ರಾಮ ಹುಂಜನ ಕೆರೆಯ ಚೆನ್ನಕೇಶವ ದೇವಾಲಯದಲ್ಲಿ ಎರಡನೇ ಕಾರ್ತಿಕ ವಿಶೇಷ ಪೂಜೆ ಇದ್ದುದ್ದರಿಂದ ಪೋಷಕರ ಜೊತೆ ದೇವಾಲಯಕ್ಕೆ ತೆರಳಿ ದೇವಾಲಯದ ಆವರಣ ಗೋಡೆಯ ಕಬ್ಬಿಣದ ಗೇಟ್ ಶಿಥಿಲಾವಸ್ಥೆ ಗೊಂಡಿದ್ದು ದುರಸ್ಥಿ ಮಾಡದ ಹಿನ್ನೆಲೆ ಮಗು ಗೇಟ್ ಬಳಿ ಆಟವಾಡುವ ವೇಳೆ ಮಗುವಿನ ಮೇಲೆ ಕಬ್ಬಿಣದ ಗೇಟ್ ಬಿದ್ದಿದ್ದು,ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ,

Ad

ಗೇಟಿನ ಕೆಳಗಡೆ ಮಗು ಸಿಲುಕಿರುವುದು ಕಂಡು ಬಂದಿದ್ದು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಅರಕೆರೆ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Ad
Ad
Ad
Nk Channel Final 21 09 2023