ಮಂಡ್ಯ: ಗಣೇಶ ವಿಸರ್ಜನೆ ವೇಳೆ ನಡೆದ ಹಿಂಸಾಚಾರ ಪ್ರಕರಣದಲ್ಲಿ 52 ಮಂದಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಆಗಿದೆ. ಈ ಕೇಸ್ ಕುರಿತು ವಿಚಾರಣೆ ನಡೆಸಿದ JMFC ಕೋರ್ಟ್ನ ಹಿರಿಯ ನ್ಯಾಯಧೀಶರಾದ ಯೋಗೇಶ್ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. 12 ರಿಂದ 25ನೇ ತಾರೀಕಿನವರೆಗೂ 52 ಮಂದಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಬದರಿಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಸಾಗಿತ್ತು. ದರ್ಗಾ ಎದುರು ಮೆರವಣಿಗೆ ಸಾಗುತ್ತಿದ್ದಂತೆ ಕೆಲ ಕಿಡಿಗೇಡಿಗಳು ಇದ್ದಕ್ಕಿದ್ದಂತೆ ಕಲ್ಲು ತೂರಿದ್ದೇ ಗಲಾಟೆಗೆ ಕಾರಣ ಆಗಿದೆ. ಗಲಭೆ ಪ್ರಕರಣಕ್ಕೆ ಸಂಬಂಧ ಒಟ್ಟು 6 ಎಫ್ಐಎರ್ ದಾಖಲಿಸಲಾಗಿದೆ. ಅಂತೆಯೇ ಈವರೆಗೂ 54 ಮಂದಿಯನ್ನು ಬಂಧಿಸಲಾಗಿದೆ
Ad