ಶಿವಮೊಗ್ಗ

ಶಿವಮೊಗ್ಗ: ಮೆಗ್ಗಾನ್ ಹೆರಿಗೆ ವಾರ್ಡ್ ಕಡೆಯಿಂದ ಹೋಗುವ ದಾರಿ ಬಂದ್ ಮಾಡಿದ ಆಡಳಿತ ಮಂಡಳಿ

ಶಿವಮೊಗ್ಗ: ಮೆಗ್ಗಾನ್ ಹೆರಿಗೆ ವಾರ್ಡ್ ಕಡೆಯಿಂದ ಹೋಗುವ  ದಾರಿಯನ್ನ ಮೆಗ್ಗಾನ್ ಆಡಳಿತ ಮಂಡಳಿ ಬಂದ್ ಮಾಡಿದೆ ಯಾಕೆ ಬಂದ್ ಮಾಡಿದೆ ಎಂದರೆ ಸಾರ್ವಜನಿಕರಿಗೆ ಇಲ್ಲಿನ ಅಧಿಕಾರಿಗಳು ಹೇಳೋದು ಏನೆಂದರೆ ಈ ದ್ವಾರದ ಬಳಿ ಅನೈತಿಕ ಚಟುವಟಿಕೆ ನಡೆಯುತ್ತಿರುವುದು ಹೆಚ್ಚಾಗಿದೆ ಎಂಬ ಕಾರಣಕ್ಕೆ ಬಂದ್ ಮಾಡಲಾಗಿದೆ ಎಂದು. ಅನೈತಿಕ ಚಟುವಟಿಕೆ ತಡೆಗೆ ಇದೇನಾ ಕ್ರಮ?

ಬಾಣಂತಿಯರು, ಗರ್ಭಿಣಿಯರಿಗೆ ಹೆರಿಗೆ ವಾರ್ಡ್ ಗೆ ಹೋಗಲು ಈ ರಸ್ತೆಯ ಮೂಲಕವೇ ಅನುಕೂಲಕರವಾಗುತ್ತೆ. ಸದಾ ಮೆಗ್ಗಸನ್ ನಲ್ಲಿ ವೈದ್ಯರು ಬರೆದುಕೊಡುವ ಔಷಧಿಗಳು ಸಿಗುವುದಿಲ್ಲ ಹೆರಿಗೆ ವಾರ್ಡ್ ಗೆ ಹೊರಗಿನ ಮೆಡಿಕಲ್ ಶಾಪ್ ಗೆ ಹೋಗಲು ಇದೇ ದಾರಿ ಹತ್ತಿರವಾಗುತ್ತೆ. ಈ ದಾರಿಯನ್ನೇ ಬಂದ್ ಮಾಡಿಬಿಟ್ರೆ ಅನೈತಿಕ ಚಟುವಟಿಕೆ ನಿಲ್ಲುತ್ತಾ?

ಸೂಕ್ತ ದೂರುಗಳು ದಾಖಲಾಗಬೇಕು, ಹತ್ತಿರದ ಪೊಲೀಸ್ ಠಾಣೆಯಲ್ಲಿ ಒಂದು ದೂರು ಸಹ ಇಲ್ಲಿ ಅನೈತಿಕಚಟುವಟಿಕೆ ನಡೆದಿರುವುದು ದೂರು ದಾಖಲಾಗಿಲ್ಲ. ಒಂದು ವೇಳೆ ನಡೆಯುತ್ತಿದೆ ಎಂದಾದರೆ, ಸಿಸಿ ಟಿವಿ ಕ್ಯಾಮೆರಾ ಮತ್ತು ಪೊಲೀಸ್ ಬೀಟ್ ಹೆಚ್ಚಿಸಬೇಕು. ಇದನ್ನ ಹೊರತು ಪಡಿಸಿ ಬೇರೆ ಮಾರ್ಗವಿಲ್ಲ.

ಹಾಗಂತ ಸಾರ್ವಜನಿಕರನ್ನ ಕಾಂಪೌಂಡ್ ಹಾರುವಂತೆ ಮಾಡಿರುವುದು ಒಪ್ಪಲಾಗದು. ವಾಹನ ಇರುವವರು ಸುತ್ತಾಡಿಕೊಂಡು ಬರಬಹುದು. ಬೇರೆಯವರು ಅಥವಾ ಹಳ್ಳಿಯಿಂದ ಬರುವವರ ಪಾಡೇನು?

Ashika S

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

6 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

7 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

7 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

7 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

8 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

8 hours ago