News Karnataka Kannada
Thursday, April 25 2024
Cricket
ಶಿವಮೊಗ್ಗ

ಇನ್ನೆರಡು ದಿನಗಳಲ್ಲಿ ಚುನಾವಣೆ ನೀತಿ ಸಂಹಿತೆ ಘೋಷಿಸಲಾಗುವುದು: ಮಧು ಬಂಗಾರಪ್ಪ

ಇನ್ನೆರಡು ದಿನಗಳಲ್ಲಿ ಚುನಾವಣೆ ನೀತಿ ಸಂಹಿತೆ ಘೋಷಿಸಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಶಿವಮೊಗ್ಗ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಅವರನ್ನ ಘೋಷಿಸಿತ್ತು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
Photo Credit : News Kannada

ಶಿವಮೊಗ್ಗ: ಇನ್ನೆರಡು ದಿನಗಳಲ್ಲಿ ಚುನಾವಣೆ ನೀತಿ ಸಂಹಿತೆ ಘೋಷಿಸಲಾಗುವುದು ಕಾಂಗ್ರೆಸ್ ಪಕ್ಷದಿಂದ ಶಿವಮೊಗ್ಗ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಅವರನ್ನ ಘೋಷಿಸಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಮಾಧ್ಯಮಗಳಲ್ಲಿ ಮಾತನಾಡಿದ ಅವರು ಈ ಹಿಂದೆ ಕಷ್ಟದ ಕಾಲದಲ್ಲಿ ಗೀತಾ 2014 ರಲ್ಲಿ ಬೇರೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವತ್ತು ಕಾಙಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರೆ ಚುನಾವಣೆಯಲ್ಲಿ ಗೆದ್ದುಬಿಡುತ್ತಿದ್ದರು.

ವಿಧಾನ ಸಭಾ ಚುನಾವಣೆ ವೇಳೆ ಗ್ಯಾರೆಂಟಿಯ ಮೂಲಕ ಮತ ಕೇಳಿದಾಗ ನಮಗೆ ಮತಬಂದಿದೆ. ಮೀಟರ್ ಕಟ್ ಮಾಡಲಾಗುತ್ತಿತ್ತು. ಹಣದುಬ್ಬರದಲ್ಲಿ ಜನ ತತ್ತರಿಸಿ ಹೋಗಿದ್ದರು. ಅನ್ನಭಾಗ್ಯ, ಯುವಕರಿಗೆ ಬೆಂಬಲ ಮಾಡಲಾಗಿದೆ. ಬಿಜೆಪಿ ನಮ್ಮ ಗ್ಯಾರೆಂಟಿಗೆ ಅವಹೇಳನ ಮಾಡಿದ್ದರು. ಇವತ್ತು ಮೋದಿ ಗ್ಯಾರೆಙಟಿ ಎಂದು ಪ್ರಚಾರ ಪಡೆಯುತ್ತಿದ್ದಾರೆ ಎಂದರು.

ಮೋದಿ ಅವರೆ ಖಜಾನೆ ಖಾಲಿ ಮಾಡಿದರು. ಶ್ರೀಮಂತರಿಗೆ ಹಣ ಮನ್ನಾ, ರೈತರ ಮೇಲೆ ಟಿರ್ ಗ್ಯಾಸ್ ಬಿಡಾಗುತ್ತಿದೆ. ಕಳೆದ ಬಾರಿ ಮೋದಿಯ ಹೆಸರಿನಲ್ಲಿ ಬಿಜೆಪಿ ಸಂಸದರಾಗಿ ಗೆದ್ದರು. ಈ ಬಾರಿ ಏನೂ ನಡೆಯೊಲ್ಲ. ರಾಮನನ್ನ ಬೀದಿಗೆ ತಂದರು, ಶಿವಮೊಗ್ಗದಲ್ಲಿ ರಾಗಿಗುಡ್ಡವನ್ನ ರಾಜಕಾರಣದಲ್ಲಿ ಕೋಮುದಳ್ಳುರಿಯಾಗಿ ಮಾಡಲು ಯತ್ನಿಸಲಾಯಿತು. ನಾವು ತಡೆದಿದ್ದೇವೆ ಎಂದರು.

ಸಙಸದರು ಏರ್ ಪೋರ್ಟ, ಜಲ್ ಜೀವನ, ಸೇತುವೆಯ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಏನು ಮಾಡಿದ್ರಿ? 10 ವರ್ಷ ಮಾತನಾಡಲಿಲ್ಲ.‌ ಹಕ್ಕುಪತ್ರ ಕ್ಯಾನ್ಸಲ್ ಮಾಡಲಾಗಿದೆ. ಜಲ್ ಜೀವನ್‌ನಲ್ಲಿ 10% ಹಣ ರಾಜ್ಯ ಸರ್ಕಾರದ್ದು, ಏರ್ ಪೋರ್ಟ್ ನಲ್ಲಿ ಸುರಿದ ಹಣ ರಾಜ್ಯದ್ದೇ? ನೂರರಲ್ಲಿ ಎಷ್ಟು ಕೇಂದ್ರ ಸರ್ಕಾರದ್ದು ಎಂದು ಕೇಳಿದರು.

ಡಿಜಿಟಲ್ ಬ್ಯಾನರ್ ನಲ್ಲಿ ಸಂಸದರು ಪ್ರಚಾರ ಪಡೆಯುತ್ತಿದ್ದಾರೆ. ಅದೇ ಈ ಬಾರಿ‌ಮುಳುವಾಗಲಿದೆ. ಈ ಬಾರಿ ಗೀತಾ ಶಿವರಾಜ್ ಕುಮಾರ್ ಜನಪ್ರತಿನಿಧಿಯಾಗಿ ಜನರ ಧ್ವನಿಯಾಗಲಿದ್ದಾರೆ. ಶಿವಮೊಗ್ಗದ ಧ್ವನಿ ದೆಹಲಿಯಲ್ಲಿ ಮೊಳಗಲಿದೆ ಎಂದರು.

ವಿಧಾನ ಸಭಾ ಚುನಾವಣೆಯಲ್ಲಿಯೂ ಸರ್ವೆಗಳು ಬಿಜೆಪಿ 80-90 ಸ್ಥಾನ ಬರುತ್ತೆ ಎಂದು ನಿರೀಕ್ಷಿಸಲಾಯಿತು. ಫಲಿತಾಂಶ ಬಂದ ವೇಳೆ ಕಾಂಗ್ರೆಸ್ 135 ಬಿಜೆಪಿ 66 ಎಂದು ಬಂತು. ಈ ಬಾರಿಯೂ ಸಮೀಕ್ಷೆ ಮೀರಿ ಫಲಿತಾಂಶ ಬರಲಿದೆ. 15 ವರ್ಷವನ್ನ ಕಳೆದುಕೊಂಡಿರುವ ಶಿವಮೊಗ್ಗ ಸಂಸದರ ಸ್ಥಾನವನ್ನ ಈ ಬಾರಿ ಪಡೆಯುವ ನಿಟ್ಟಿನಲ್ಲಿ ಹೋರಾಡಲಿದ್ದೇವೆ ಎಂದರು.

ಗ್ಯಾರೆಂಟಿಯಿಂದ ಸರ್ಕಾರ ಜನರನ್ನ ಸೋಮಾರಿಯಾಗುತ್ತಾನೆ ಎಂದಿದ್ದರು.‌ ಯಾರೂ ಆಗಿಲ್ಲ. ಅನಂತ ಕುಮಾರ್ ಹೆಗಡೆ ಸಂವಿಧಾನ ಬದಲಿಸಲು ಬಂದಿದ್ದೇವೆ ಎಂದಿದ್ದಾರೆ. ಸಂವಿಧಾನ ಈಗ ಅರ್ಥಾಗುತ್ತಿದೆ. ಸಂಸದ ರಾಘವೇಂದ್ರ ಹಡಬಿಟ್ಟಿ ಹಣ ಬರುವುದು ಬಿಟ್ಟರೆ ಏನು ತಂದಿದ್ದಾರೆ ಎಂದು ಗರಂ ಆದ ಸಚಿಬರು ಸಾಮಾಜಿ ಜಾಲತಾಣದಲ್ಲಿ ಗೀತಾ ಶಿವರಾಜ್ ಕುಮಾರ್‌ಅವರಿಗೆ ಪ್ರಶ್ನಿಸಲಾಗುತ್ತಿದೆ ಎಂದು ಕೇಳುದ ಪ್ರಶ್ಬೆ ಅವರನ್ನ ಕೆರಳಿಸಿತು. ಹರಿದಾಡೋದು, ಸರಿದಾಡೋದೆನ್ನೆಲ್ಲ ಕಸದಬುಟ್ಟಿಗೆ ಹಾಕಿ ಎಂದರು.

ರಾಘವೇಂದ್ರ ಯಾವರೀತಿ ಗೆದ್ದಿದ್ದರು ಎಂಬುದು ಗೊತ್ತಿದೆ. ಬಾರಿ ತಕ್ಕ ಉತ್ತರ ಕೊಡುತ್ತೇವೆ. ನನ್ನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತು. ಚೋಟಾ ಸಹಿ ಬಗ್ಗೆ ಕೇಳಿದಾಗ ಎಲ್ಲ ತಣ್ಣಗಾಯಿತು. ಬಿಜೆಪಿ ಸ್ಪಾನ್ಸರ್ಡ್ ಹರಿದಾಟಕ್ಕೆ ಉತ್ತರಿಸೊಲ್ಲ. ರಾಘವೇಂದ್ರ ಮಾಜಿಮುಖ್ಯಮಂತ್ರಿ ಮಾಗ ಎಂಬುದು ಬಿಟ್ಟರೆ ಏನು ಇದೆ. ಸಾಮಾನ್ಯ ಜನರ ಧ್ಬನಿಯಾಗುವುದೇ ಈ ಬಾರಿಯ ಚುನಾವಣೆಯ ಪ್ರಮುಖ ಅಂಶವಾಗಿದೆ ಎಂದರು.

ನಟ ಶಿವರಾಜ್ ಕುಮಾರ್, ಕಾಂಗ್ರೆಸ್ ನ ನಿಖಿತ್ ಮೌರ್ಯ, ಪ್ರದೀಪ್ ಈಶ್ಬರ್, ಮೊದಲಾದವರು ಪ್ರಚಾರಕ್ಕೆ ಬರ್ತಾರೆ. 400 ಸೀಟು ಬಿಜೆಪಿಗೆ ಬರೋದು ಕಷ್ಟ, ವಿಧಾನಸಭೆಯಲ್ಲಿ ಹನುನಾನನ್ನ ತಂದ್ರು‌ ವರ್ಕೌಟ್ ಆಯಿತಾ? ಬಿಜೆಪಿಗೆ ಮೆಜಾರಿಟಿ ಬರೊಲ್ಲ. ರಾಜ್ಯದಲ್ಲಿ ಬದಲಾವಣೆ ಬಯಿಸಿದ್ದಾರೆ. ಎನ್ ಐ ಎಲ್ಲಿರುತ್ತದೆ. ಪಿಐ(ಪಾಕಿಸ್ಥಾನ್ ಇಂಟನಿಜೆನ್ಸಿನಾ) ಅಥವಾ ಎನ್ಐಎ ನಾ? ಎಂದು ರಾನೇಶ್ವರ್ ಬಾಂಬ್ ಬ್ಲಾಸ್ಟ್ ವಿಚಾರದಲ್ಲಿ ಎನ್ ಐ ಎ ನಬಗ್ಗೆ ಕರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು