ಹರ್ಷ ಕೊಲೆ ಪ್ರಕರಣ: ಯಾವುದೇ ಸಂಘಟನೆ ಕೈವಾಡ ಇಲ್ಲ- ಆರಗ ಜ್ಞಾನೇಂದ್ರ

ತೀರ್ಥಹಳ್ಳಿ: ಬಜರಂಗದಳದ ಸದಸ್ಯ ಹರ್ಷನ ಹತ್ಯೆಯ ಹಿಂದೆ ಯಾವುದೇ ಸಂಘಟನೆ ಇರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

ಘಟನೆಯ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಜರಂಗದಳ ಸದಸ್ಯ ಕಾರ್ಯಕರ್ತನ ಹತ್ಯೆಯ ಬಳಿಕ ಶಿವಮೊಗ್ಗದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ನಗರದ ವಿವಿಧೆಡೆ ಹಿಂಸಾಚಾರ ವರದಿಯಾಗಿದೆ ಎಂದು ತಿಳಿಸಿದ್ದಾರೆ.

‘ಈ ಕೊಲೆಯ ಹಿಂದೆ ಸಂಘಟನೆಗಳ ಕೈವಾಡವೇನಾದರೂ ಇದೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ನನಗೆ ಯಾವುದೇ ಮಾಹಿತಿ ಲಭಿಸಿಲ್ಲ. ಕೃತ್ಯದಲ್ಲಿ ನಾಲ್ಕೈದು ಯುವಕರ ಗುಂಪು ಭಾಗಿಯಾಗಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, ಜಿಲ್ಲಾಧಿಕಾರಿಯವರ ಆದೇಶದ ಅನ್ವಯ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ತಿಳಿಸಿದ ಅವರು, ಈ ಹತ್ಯೆಗೂ ಹಿಜಾಬ್ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಆರೋಪಿಗಳ ಬಂಧನದ ಬಳಿಕ ಸತ್ಯಾಸತ್ಯತೆ ಬಹಿರಂಗವಾಗಲಿದೆ ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದ್ದರೂ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಮತ್ತು ಆರ್.ಎ.ಎಫ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಫೆಬ್ರವರಿ 7ರಂದು ಶಿವಮೊಗ್ಗದ ಕಾಲೇಜಿನ ಹೊರಗೆ ಹಿಜಾಬ್ಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಹರ್ಷ ಭಾಗವಹಿಸಿದ್ದನು ಎಂದು ಹೇಳಲಾಗಿದೆ. ಹತ್ಯೆಯ ಹಿಂದಿನ ಕಾರಣ ಇನ್ನೂ ಬಹಿರಂಗವಾಗಿಲ್ಲ.

ಅವರ ಸಾವಿನ ಸುದ್ದಿ ತಿಳಿದ ಹಿಂದುತ್ವ ಪರ ಸಂಘಟನೆಗಳ ಸದಸ್ಯರು ಆಸ್ಪತ್ರೆಯ ಹೊರಗೆ ಜಮಾಯಿಸಿ ಪಟ್ಟಣದ ಸೀಗೆಹಟ್ಟಿ ಪ್ರದೇಶದಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ, ಹರ್ಷ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ಕೊಂಡೊಯ್ಯುವ ಸಂದರ್ಭದಲ್ಲಿ ನೂರಾರು ಬಜರಂಗದಳದ ಸದಸ್ಯರು ಪಾಲ್ಗೊಂಡಿದ್ದರು.

ಮೆರವಣಿಗೆ ನಡೆಯುತ್ತಿರುವಾಗ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದ್ದಾರೆ ಎಂಬ ಮಾಹಿತಿಯಿದೆ

Sneha Gowda

Recent Posts

ಕೆಎಸ್ಆರ್​ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ಡಿಕ್ಕಿ: ಓರ್ವ ಸಾವು

ಮಧುಗಿರಿ ತಾಲೂಕಿನ ದಂಡಿಪುರದ ವಿಜಯಾನಂದಿ ಕ್ರಾಸ್ ಬಳಿ  ಕೆಎಸ್ಆರ್​ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ…

11 mins ago

ನಕಲಿ ಮಸಾಲೆ ಪದಾರ್ಥಗಳನ್ನು ತಯಾರಿಕೆ : ಮೂವರ ಬಂಧನ, 15 ಟನ್‌ ವಶ

ನಕಲಿ ಮಸಾಲೆ ಪದಾರ್ಥಗಳ ತಯಾರಿಕೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಅವರಿಂದ 15 ಟನ್​ ನಕಲಿ ಮಸಾಲೆ…

13 mins ago

ಮುಂಬೈ ವಿಮಾನ ನಿಲ್ದಾಣದಲ್ಲಿ 12.47 ಕೆ.ಜಿ ಚಿನ್ನ, 10 ಮಂದಿ ಆರೋಪಿಗಳು ವಶಕ್ಕೆ

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹8.37 ಕೋಟಿ ಮೌಲ್ಯದ 12.47 ಕೆ.ಜಿ ಚಿನ್ನ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳನ್ನು ಕಸ್ಟಮ್ಸ್‌ ಇಲಾಖೆ ಸಿಬ್ಬಂದಿ…

15 mins ago

ಸಮಂತಾ ನಗ್ನ ಫೋಟೋ ವೈರಲ್; ಸ್ವತಃ ಶೇರ್ ಮಾಡಿ ಡಿಲೀಟ್ ಮಾಡಿದ್ರಾ‌

ನಟಿ ಸಮಂತಾ ಬಾತ್‌ಟಬ್‌ನಲ್ಲಿ ಕುಳಿತಿರುವ ನಗ್ನ ಫೋಟೋವೊಂದು ವೈರಲ್ ಆಗಿದ್ದು, ಚಿತ್ರ ಶೇರ್ ಆದ ಕೊಂಚ ಹೊತ್ತಲ್ಲೇ ಡಿಲೀಟ್ ಆಗಿದೆ.…

41 mins ago

ವಿಶ್ವಕಪ್‌ ಗೆದ್ದರೆ, ತಂಡದ ಪ್ರತಿ ಆಟಗಾರನಿಗೆ 1 ಲಕ್ಷ US ಡಾಲರ್‌ ಘೋಷಣೆ ಮಾಡಿದ ಪಾಕ್‌

ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನ ದಯನೀಯ ಸ್ಥಿತಿ ತಲುಪಿದ್ದರು, ಕ್ರಿಕೆಟ್‌ ಆಟಗಾರರಿಗೆ ಬಂಪರ್‌ ಬಹುಮಾನ ಘೋಷಣೆ ಮಾಡಿದೆ. 

42 mins ago

ಸ್ಟೇರಿಂಗ್‌ ಕಟ್ ಆಗಿ ಗದ್ದೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್‌ : 30 ಪ್ರಯಾಣಿಕರಿಗೆ ಗಾಯ

ಕೆಎಸ್‌ಆರ್‌ಟಿಸಿ ಬಸ್‌ವೊಂದರ ಸ್ಟೇರಿಂಗ್‌ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ…

1 hour ago