ಶಿವಮೊಗ್ಗದಲ್ಲಿ ಡಿ.18ರಂದು ಪುರುಷರು ಮತ್ತು ಮಹಿಳೆಯರಿಗಾಗಿ ಫ್ಯಾಷನ್ ಶೋ ಕಾರ್ಯಕ್ರಮ

ಶಿವಮೊಗ್ಗ : ಬೆಂಗಳೂರಿನ ಗ್ರೂಮಿಂಗ್ ಗುರುಕುಲ್ ವತಿಯಿಂದ ರಾಯಲ್ ಆರ್ಕೀಡ್ ಸೆಂಟರ್ ಹೋಟೆಲ್ನಿಲ್ಲಿ ಡಿ.18ರಂದು ಪುರುಷರು ಮತ್ತು ಮಹಿಳೆಯರಿಗಾಗಿ ಫ್ಯಾಷನ್ ಶೋ ಹಂಟ್ ಅಡಿಷನ್ ಬೆಳಿಗ್ಗೆ 10ಗಂಟೆಯಿಂದ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ನಿರಂಜನಿ ರವೀಂದ್ರ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದು ವಿಶೇಷವಾದ ಫ್ಯಾಷನ್ ಶೋನ ಆಯ್ಕೆ ಪ್ರಕ್ರಿಯೆವಾಗಿದೆ. ಡಿ.18ರಂದು ಬೆಳಿಗ್ಗೆ 10ಗಂಟೆಗೆ ಸ್ಥಳದಲ್ಲಿಯೇ ನೊಂದಣಿ ಕೂಡ ಆರಂಭವಾಗುತ್ತದೆ. 18ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರು ಇದರಲ್ಲಿ ಭಾಗವಹಿಸಬಹುದಾಗಿದೆ. ಮಿಸ್ ಮಿಸಸ್ ಮತ್ತು ಮಿಸ್ಟರ್ ಶಿವಮೊಗ್ಗ ಈ 3 ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. 500 ರೂ. ಶುಲ್ಕ ನಿಗದಿಮಾಡಲಾಗಿದ್ದು, ಆಸಕ್ತರು ನಿಯಮಗಳಿಗೆ ಒಳಪಟ್ಟು ಇದರಲ್ಲಿ ಭಾಗವಹಿಸಬಹುದಾಗಿದೆ. ಮಿಸಸ್ ವಿಭಾಗದಲ್ಲಿ ಮದುವೆಯಾದವರಿಗೂ ಅವಕಾಶವಿದೆ ಎಂದರು.

ಈ ಮೇಗ ಅಡಿಷನ್ನಲಲ್ಲಿ ಆಯ್ಕೆಯಾದರು ಜನವರಿ ತಿಂಗಳಿನಲ್ಲಿಯೇ ಶಿವಮೊಗ್ಗಲ್ಲಿಯೇ ನಡೆಯುವ ಗ್ರಾಂಡ್ ಫಿನಾಲೆಯಲ್ಲಿ ಭಾಗವಹಿಸಲು ಅವಕಾಶವಿದೆ. ಡಿ.18ರಂದು ನಡೆಯುವ ಅಡಿಷನ್ ಶೋದ ಉದ್ಘಾಟನೆಯನ್ನು ಧಾರವಾಯಿ ಖ್ಯಾತಿಯ ಹಾಗೂ ಮಿಸ್ಟರ್ ಇಂಡಿಯಾ ಫಸ್ಟ್ ರನ್ನರ್ ಆಪ್ ಆದ ಅಭಿನವ್ ವಿಶ್ವನಾಥನ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಇದರ ಜೊತೆಗೆ ಗ್ರೋಮಿಂಗ್ ಸಂಸ್ಥೆಯ ಗೀತಾಶೆಟ್ಟಿ ಮತ್ತು ಪ್ರೀತಿರಾಜ್ ಕೂಡ ಇರುತ್ತಾರೆ. ಈ ಸದಾವಕಾಶವನ್ನು ಶಿವಮೊಗ್ಗದ ಪುರುಷರು, ಮಹಿಳೆಯರು, ಯುವತಿಯರು ಉಪಯೋಗಿಸಿಕೊಳ್ಳಬೇಕು ಎಂದು ಅವರು ಕೋರಿದರು.ಪತ್ರಿಕಾಗೋಷ್ಠಿಯಲ್ಲಿ ಸೋನಾಲಿ ನರೇಂದ್ರ, ಕ್ರಿಸ್ ಥಾಮಸ್ ಇದ್ದರು.

Gayathri SG

Recent Posts

ಪತ್ನಿಯ ಗುಪ್ತಾಂಗವನ್ನು ಮೊಳೆಗಳಿಂದ ವಿರೂಪಗೊಳಿಸಿ,ಬೀಗ ಹಾಕಿದ ಕ್ರೂರ ಪತಿ

ಪುಣೆಯಲ್ಲಿ ಭೀಕರ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಪತ್ನಿಯ ಜನನಾಂಗವನ್ನು ಕಬ್ಬಿಣದ ಮೊಳೆಗಳಿಂದ ವಿರೂಪಗೊಳಿಸಿದ್ದಾನೆ ಮತ್ತು ಆಕೆಯ ಮೇಲೆ ಸಂದೇಹ ವ್ಯಕ್ತಪಡಿಸಿದ…

9 mins ago

ಬೀದರ್: ಕಾರ್ಮಿಕರ ಮಕ್ಕಳಿಗೆ ‘ಕೂಸಿನ ಮನೆ’ ಆಸರೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಮಹಿಳಾ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆ ಆಸರೆಯಾಗಿದೆ.

15 mins ago

ಬಿಜೆಪಿ ಮುಖಂಡ ಅರೆಸ್ಟ್: ರಾತ್ರೋರಾತ್ರಿ ಠಾಣೆಯಲ್ಲಿ ಧರಣಿ ನಡೆಸಿದ ಶಾಸಕ ಹರೀಶ್ ಪೂಂಜಾ

ಅಕ್ರಮವಾಗಿ ಕಲ್ಲುಕೋರೆ ಗಣಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಿಜೆಪಿ ಯುವಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿಯನ್ನು ಅರೆಸ್ಟ್…

34 mins ago

ತಾಯಿ ಎದುರೇ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ

ತಾಯಿ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಪಾಟ್ನಾದ ನೌಬತ್‌ಪುರ ಪ್ರದೇಶದಲ್ಲಿ ಚಲಿಸುತ್ತಿದ್ದ…

39 mins ago

ರಘುಪತಿ ಭಟ್ ಆರೋಪಕ್ಕೆ ಡಾ. ಧನಂಜಯ ಸರ್ಜಿ ತಿರುಗೇಟು

ಶಿವಮೊಗ್ಗ ಹರ್ಷಾ ಹತ್ಯೆ ವೇಳೆ ಕಮ್ಯುನಿಸ್ಟರ ಜೊತೆ ಸರ್ಜಿ ಪೌಂಡೇಷನ್ ಶಾಂತಿ ನಡಿಗೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ನೈರುತ್ಯ ಪದವೀಧರ…

53 mins ago

ಕುಡಿಯುವ ನೀರಿನ ಸಮಸ್ಯೆ: ಕಲುಷಿತ ನೀರು ಸೇವಿಸಿ 114 ಮಂದಿಗೆ ಕಾಲರಾ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಧಾನಸಭೆ ಕ್ಷೇತ್ರವಾದ ವರುಣದ ತಗಡೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಅಲ್ಲಿನ ಜನ…

60 mins ago