ಶಿವಮೊಗ್ಗ

ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಸೀಟು ಹೆಚ್ಚಿಸಲು ಪ್ರಯತ್ನ: ಡಾ.ಸೆಲ್ವಕುಮಾರ್

ಶಿವಮೊಗ್ಗ : ಜಿಲ್ಲೆಯಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಕ್ಕಾಗಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಂದ ಹೆಚ್ಚಿನ ಬೇಡಿಕೆಯಿರುವ ಹಿನ್ನೆಲೆಯಲ್ಲಿ ಹೊಸ ವಿದ್ಯಾರ್ಥಿ ನಿಲಯಗಳ ಸ್ಥಾಪನೆ ಹಾಗೂ ಅವಕಾಶವಿರುವ ಕಡೆ ಸೀಟು ಹೆಚ್ಚಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ನೋಡಲ್ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಅವರು ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಸಿಕ ಕೆಡಿಪಿ ಸಭೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ತ್ವರಿತಗೊಳಿಸಿ: ಶಿವಮೊಗ್ಗ ನಗರದಲ್ಲಿ ಸ್ಮಾಟ್ ಸಿಟಿ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಮಾರ್ಚ್ ಒಳಗಾಗಿ ಕಾಮಗಾರಿ ಅನುಷ್ಟಾನ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಕೇಂದ್ರದ ಪಾಲಿನ ಅನುದಾನ ಕಡಿತವಾಗಲಿದೆ. ಅನುದಾನ ಕಡಿತವಾದರೆ ಸಂಬAಧಪಟ್ಟ ಅಧಿಕಾರಿಗಳೇ ಜವಾಬ್ದಾರರು. ಯೋಜನೆಯಡಿ ಪಿಪಿಪಿ ಮಾದರಿಯಲ್ಲಿ ಅನುಷ್ಟಾನಗೊಳಿಸಲು ಉದ್ದೇಶಿಸಿರುವ ಕಾಮಗಾರಿಗಳನ್ನು ಆರಂಭಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಕೆಪಿಟಿಸಿಎಲ್, ಜಲ ಮತ್ತು ಒಳಚರಂಡಿ ಮಂಡಳಿಯೊAದಿಗೆ ಹೆಚ್ಚು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸಾಧ್ಯ ಎಂದರು.

ಸ್ಮಾರ್ಟ್ ಸಿಟಿಯ ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಲಾಗುವುದು. ಸ್ಮಾರ್ಟ್ ರಸ್ತೆ ನಿರ್ಮಾಣದ 6ಪ್ಯಾಕೇಜ್‌ಗಳು ಮೇ ಅಂತ್ಯದ ಒಳಗಾಗಿ ಪೂರ್ಣಗೊಳ್ಳಲಿದೆ. ನೆಹರು ಕ್ರೀಡಾಂಗಣದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕಾಮಗಾರಿಗಳು ಈ ತಿಂಗಳಲ್ಲಿ ಪ್ರಾರಂಭವಾಗಲಿದೆ. ಪಿಪಿಪಿ ಮಾದರಿಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕಾಮಗಾರಿಗಳ ರೂಪುರೇಷೆಗಳನ್ನು ಆದಷ್ಟು ಬೇಗನೆ ಅಂತಿಮಗೊಳಿಸಲಾಗುವುದು ಎಂದು ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಅವರು ತಿಳಿಸಿದರು.

ಶಿವಮೊಗ್ಗ ನಗರದಲ್ಲಿ ಪ್ರತಿ ಮನೆಗೆ 24×7 ನೀರು ಒದಗಿಸುವ ಯೋಜನೆಯಡಿ ಮಾರ್ಚ್ ಅಂತ್ಯದ ಒಳಗಾಗಿ ಎಲ್ಲ ಮನೆಗಳಿಗೆ ಸಂಪರ್ಕ ಕಲ್ಪಿಸುವ ಗುರಿಯನ್ನು ನೀಡಲಾಗಿದೆ. ಈ ಯೋಜನೆ ಅನುಷ್ಟಾನವನ್ನು ಸಹ ತ್ವರಿತಗೊಳಿಸಬೇಕು ಎಂದು ಸೆಲ್ವಕುಮಾರ್ ಅವರು ತಿಳಿಸಿದರು.

ನರ್ಸಿಂಗ್ ಕಾಲೇಜು ಮಂಜೂರು: ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ 100 ಸೀಟುಗಳ ಬಿಎಸ್ಸಿ ನರ್ಸಿಂಗ್ ಕೋರ್ಸ್ ಈ ವರ್ಷದಿಂದ ಆರಂಭಿಸಲು ಅನುಮತಿ ದೊರೆತಿದೆ ಎಂದು ಶಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ ಅವರು ಮಾಹಿತಿ ನೀಡಿದರು.

ಸೂಚನೆ: ಜಿಲ್ಲೆಯಲ್ಲಿ ತೋಟಗಾರಿಕಾ ಕ್ಷೇತ್ರ ವಿಸ್ತರಣೆಗೆ ಪ್ರೋತ್ಸಾಹ ನೀಡಬೇಕು. ಜೇನು ಕೃಷಿ ಕುರಿತು ಆಸಕ್ತರಿಗೆ ತರಬೇತಿ ನೀಡುವ ಮೂಲಕ ಜೇನು ಕೃಷಿ ಕಡೆಗೆ ಕೃಷಿಕರನ್ನು ಆಕರ್ಷಿಸಬೇಕು. ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿಗೆ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ವಿಲೇವಾರಿಯನ್ನು ಇನ್ನಷ್ಟು ವ್ಯವಸ್ಥಿತಗೊಳಿಸಬೇಕು. ನಗರ ಮತ್ತು ಗ್ರಾಮೀಣ ವಸತಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಎಲ್ಲಾ ಅಭಿವೃದ್ಧಿ ನಿಗಮಗಳು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಸೆಲ್ವಕುಮಾರ್ ಅವರು ಸೂಚನೆಗಳನ್ನು ನೀಡಿದರು.

ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಎಫ್.ನಾಗೇಂದ್ರ ಹೊನ್ನಳ್ಳಿ, ಎಲ್ಲಾ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Sneha Gowda

Recent Posts

ಮಂಗಳೂರು: ಪಿ.ಎ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ಆಚರಣೆ

“ಅಧ್ಯಾಪಕರುಗಳ ಪ್ರೋತ್ಸಾಹ ಮತ್ತು ಬೆಂಬಲವೇ ಇವತ್ತಿನ ಈ ದಿನದ ಯಶಸ್ಸು ಮತ್ತು ಇಲ್ಲಿಯ ಕಾರ್ಯಕ್ರಮಗಳೇ ಈ ಕಾಲೇಜಿನ ಮಹತ್ವವನ್ನು ಸಾರುತ್ತಿದೆ…

4 mins ago

40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ: ಡಿ.ಕೆ.ಶಿವಕುಮಾರ್

ಉತ್ತರ ಪ್ರದೇಶದಲ್ಲಿ 40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ. ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟದ…

14 mins ago

ಕೇಜ್ರಿವಾಲ್ ನಿವಾಸದಲ್ಲಿ ಸ್ವಾತಿ ಮಲಿವಾಲ್ ಜಗಳದ ವಿಡಿಯೋ ತುಣುಕು ವೈರಲ್

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ನಗರದ ಸಿವಿಲ್ ಲೈನ್ಸ್‌ನಲ್ಲಿರುವ ದೆಹಲಿ…

24 mins ago

ಕೇಜ್ರಿವಾಲ್‌ ನಾಚಿಕೆಯಿಲ್ಲದೇ ಆರೋಪಿ ಬಿಭವ್‌ ಕುಮಾರ್‌ ಜೊತೆ ತಿರುಗಾಟ: ನಿರ್ಮಲಾ ಸೀತಾರಾಮನ್‌

ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆಯನ್ನು ಖಂಡಿಸಿ ಮಾತನಾಡದ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಕೇಂದ್ರ ಹಣಕಾಸು ಸಚಿವೆ…

25 mins ago

ಈಜಲು ಹೋಗಿ‌ದ್ದ ಮೂವರು ನೀರುಪಾಲು: 5 ಜನ ಪ್ರಾಣಾಪಾಯದಿಂದ ಪಾರು

ಈಜಲು ಹೋಗಿ‌ದ್ದ ಮೂವರು ನೀರುಪಾಲಾಗಿರುವ ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ನಡೆದಿದೆ.

48 mins ago

“ಪಟ್ಲ ಸಂಭ್ರಮ” ಯಶಸ್ವಿಗೊಳಿಸಲು ಪಟ್ಲ ಸತೀಶ್ ಶೆಟ್ಟಿ ಕರೆ

ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ "ಪಟ್ಲ ಸಂಭ್ರಮ" ನಮ್ಮೆಲ್ಲರ ಮನೆಯ ಕಾರ್ಯಕ್ರಮ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಟ್ಲ…

58 mins ago