ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ- ಶಿವಮೊಗ್ಗದಲ್ಲಿ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ

 ಶಿವಮೊಗ್ಗ: ದಿನನಿತ್ಯ ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಜನವಿರೋಧಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ- “ಬಿಜೆಪಿ ಹಠಾವೋ ದೇಶ್ ಬಚಾವೋ” ಎಂಬ ಘೋಷಣೆಯೊಂದಿಗೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ.

ದಿನನಿತ್ಯ ಅಡುಗೆ ಅನಿಲ ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡುತ್ತಿರುವ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಕಡಿಮೆ ಇದ್ದರೂ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ, ಮಾಡಿ ದೇಶದ ಜನತೆಗೆ ದಿನನಿತ್ಯ ಬರೆ ಹಾಕುತ್ತಿರುವ ಜನವಿರೋಧಿ ಬಿಜೆಪಿ ಸರ್ಕಾರದ ನೀತಿಯನ್ನು ಖಂಡಿಸಿ ಮಹಾವೀರ ವೃತ್ತ ದಲ್ಲಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸೌದೆ ಒಲೆ ಹಚ್ಚಿ , ಪ್ರಧಾನಿ ಮೋದಿಯ ,ಅಣಕು ಪ್ರತಿಕೃತಿಗೆ ಮಸಿಬಳಿಯುವ ಮುಖಾಂತರ ಪ್ರತಿಭಟಿಸಲಾಯಿತು.

ದೇಶಕ್ಕೆ ಅಚ್ಚೇ ದಿನ್ ತರುತ್ತೇನೆಂದು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಡುಗೆ ಅನಿಲದ ಪೆಟ್ರೋಲ್, ಡೀಸೆಲ್ , ರಸಗೊಬ್ಬರ , ಔಷಧಿ ಹಾಗೂ ಕರ್ನಾಟಕದ ರಾಜ್ಯ ಬಿಜೆಪಿ ಸರ್ಕಾರ ವಿದ್ಯುತ್ ದರವನ್ನು ದಿನನಿತ್ಯ ಏರಿಕೆ ಮಾಡುತ್ತಾ ಈಗಾಗಲೇ ಕೋವಿಡ್ ಸಂಕಷ್ಟದಲ್ಲಿರುವ ಶ್ರೀಸಾಮಾನ್ಯನ ತೆರಿಗೆ ಎಂಬ ಕೂಪದಿಂದ ಕಿತ್ತು ತಿನ್ನುತ್ತಿರುವ ಬಿಜೆಪಿ ಸರ್ಕಾರದ ಜನವಿರೋಧ ನೀತಿಯು ತೀವ್ರ ಖಂಡನೀಯ.

ಈಗಾಗಲೇ ಹಲವಾರು ರೈತ-ಕಾರ್ಮಿಕ – ಯುವಕ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಅನುಷ್ಠಾನಗೊಳಿಸಿ ದೇಶದ ಹಲವಾರು ಸರ್ಕಾರಿ ವಲಯಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಹಾಗೂ ಕೋವಿಡ್ ನಿರ್ವಹಣೆಯಲ್ಲಿ ವಿಫಲವಾದ ಈ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹಲವು ಬಾರಿ ಎಚ್ಚರಿಕೆ ಸಂದೇಶಗಳನ್ನು ನೀಡಿದ್ದು , ಕೂಡಲೇ ರಾಷ್ಟ್ರಪತಿಗಳು ಈ ಜನವಿರೋಧಿ ಕೇಂದ್ರ ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕು ಎಂದು ಯುವ ಕಾಂಗ್ರೆಸ್ ಆಗ್ರಹಿಸುತ್ತದೆ.

ಈ ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಚ್. ಪಿ. ಗಿರೀಶ್ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎಸ್ ಸುಂದರೇಶ್, ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ , ರಾಜ್ಯ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್ , ಶಿವಮೊಗ್ಗ ಜಿಲ್ಲೆಯ ಉಸ್ತುವಾರಿಗಳು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ , ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಸ್ಪಿ ದಿನೇಶ್, ರವಿಕುಮಾರ್ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಯಮುನ ರಂಗೇಗೌಡ , ಮಹಾನಗರ ಪಾಲಿಕೆ ಸದಸ್ಯರಾದ ಎಚ್ಸಿ ಯೋಗೀಶ್, ಮೇಹಕ್ ಷರೀಫ್ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷರಾದ ಅನಿತಾ ಕುಮಾರಿ , ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್ ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಟಿ ನಿತಿನ್ , ದಕ್ಷಿಣ ಬ್ಲಾಕ್ ಅಧ್ಯಕ್ಷ ವಿನಯ್ , ಎಸ್. ಕುಮರೇಶ್ ಭದ್ರಾವತಿ ಯುವ ಕಾಂಗ್ರೆಸ್ ನಗರಾಧ್ಯಕ್ಷ ವಿನೋದ್ ಕುಮಾರ್, ಭದ್ರಾವತಿ ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಅಹ್ಮದ್ , ತೀರ್ಥಳ್ಳಿ ಗ್ರಾಮಾಂತರ ಅಧ್ಯಕ್ಷ ರಾಘವೇಂದ್ರ, ಸೊರಬ ಬ್ಲಾಕ್ ಅಧ್ಯಕ್ಷ ಕರುಣಾಕರ ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಮುಖಂಡರಾದ ಸ್ಟೆಲ್ಲಾ ಮಾರ್ಟಿನ್ ,ಚಂದ್ರಕಲಾ ಜಿಲ್ಲಾ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಗೋಣಿ. ಸಚಿನ್ ಶಿಂದೆ, ಪುಷ್ಪ ಕುಮಾರ್ ಗಗನ್ ಗೌಡ , ಶಿಲ್ಪಾ ಈಶ್ವರ್ , ರೂಪಾದೇವಿ, ಪವನ್, ರಾಹುಲ್ , ಮೊಹಮ್ಮದ್ ಇರ್ಫಾನ್ , ಮೊಹಮ್ಮದ್ ನಿಹಾಲ್ , ಮಂಜು ಪುರ್ಲೆ , ಸದ್ದಾಮ್ ಸಚಿನ್, ಚಿನ್ಮಯ್ , ದರ್ಶನ್ ಶಾಮ್ ಅಭಿಷೇಕ್ , ಪೂರ್ವಿಕ್ ,ತಬ್ರೆಜ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Sneha Gowda

Recent Posts

ರಾಜ್ಯದಲ್ಲಿ 20 ಲಕ್ಷ ಜನರಿಗೆ ಉದ್ಯೋಗ ನೀಡುವಂತೆ ಭರವಸೆ ನೀಡಿದ ಎನ್‌ಡಿಎ ಗ್ಯಾರಂಟಿ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲಾ ಪಕ್ಷಗಳೂ ಜನರನ್ನು ತಮ್ಮ ಕಡೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಆಂಧ್ರಪ್ರದೇಶದಲ್ಲಿ ಲೋಕಸಭೆ ಜೊತೆಗೆ…

4 mins ago

ಕೃಷಿ ಸ್ವಾವಲಂಬನೆ ಪ್ರತೀಕ : ಡಾ.ರಾಮಕೃಷ್ಣ ಆಚಾರ್

ಕೃಷಿ ಸ್ವಾವಲಂಬನೆ ಪ್ರತೀಕ ಕೃಷಿ ಮೂಲಕ ಜೀವನ ನಡೆಸಲು ಸೂಕ್ತ ಅವಕಾಶ ಇದೆ ಕೃಷಿ ಮನುಷ್ಯನ ಆರೋಗ್ಯ, ಆಯುಷ್ಯ, ಸಂಪತ್ತನ್ನು…

30 mins ago

ಚಿನ್ನ, ಬೆಳ್ಳಿ ಬೆಲೆ ಕೊಂಚ ಇಳಿಕೆ: ಇಂದಿನ ದರ ಹೀಗಿದೆ!

ಎರಡು ಮೂರು ವಾರಗಳ ಹಿಂದೆ ಅಸ್ವಾಭಾವಿಕವಾಗಿ ಏರಿದ್ದ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಕ್ರಮೇಣ ಇಳಿಕೆ ಕಾಣುವ ನಿರೀಕ್ಷೆ ಇದೆ.…

42 mins ago

ಇಂದು ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಕೆಲವೆಡೆ ಇಂದು ಮೇ 1ರಂದು ಹಗುರ ಮಳೆಯಾಗುವ…

60 mins ago

ಮುಂಗಾರು ಮಳೆ ಕೊರತೆ: ದುಬಾರಿಯಾದ ತರಕಾರಿ ಬೆಲೆ

ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಸೂರ್ಯನ ಶಾಖಕ್ಕೆ ತತ್ತರಿಸಿ ಹೋಗಿದ್ದಾರೆ. ಜಾನುವಾರುಗಳು ತತ್ತರಿಸಿದೆ. ಜನರ ಗಂಟಲು ಒಣಗುತ್ತಿದೆ.…

1 hour ago

ಜಮ್ಮು & ಕಾಶ್ಮೀರದ ಅನಂತ್‌ನಾಗ್‌-ರಾಜೌರಿ ಕ್ಷೇತ್ರದ ಮತದಾನ ಮುಂದೂಡಿಕೆ

ಲೋಕಸಭಾ ಚುನಾವಣೆ ಯ ಎರಡು ಹಂತದ ಮತದಾನ ಈಗಾಗಲೇ ಮುಗಿದಿದೆ. ಮೇ 7ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಈ…

9 hours ago