News Karnataka Kannada
Monday, April 29 2024
ಶಿವಮೊಗ್ಗ

ಎಸ್ಪಿ ಲಕ್ಷ್ಮಿ ಪ್ರಸಾದ್ ಗೆ ಶಿವಮೊಗ್ಗದ ಜನತೆ ಆಭಾರಿ!

Sp
Photo Credit :

ಹಿಜಾಬ್, ಭಜರಂಗದಳ ಹರ್ಷ ಕೊಲೆ ಘಟನೆಯಿಂದ ಶಿವಮೊಗ್ಗ ನಗರದ ಜನತೆ ಒಂದು ತಿಂಗಳು ಕರ್ಪ್ಯೂ ನಿಷೇದಾಜ್ಞೆಯಿಂದ ಕಂಗೆಟ್ಟಿ ಹೋಗಿದ್ದರು. ವ್ಯಾಪಾರಸ್ಥರು ಬೀದಿಬದಿ ವ್ಯಾಪಾರಿಗಳು ವ್ಯಾಪಾರವಿಲ್ಲದೆ ನಲುಗಿ ಹೋಗಿದ್ದರು.

ಹರ್ಷ ಕೊಲೆ ಘಟನೆಯನ್ನು ಶಿವಮೊಗ್ಗ ಪೊಲೀಸರು ತಕ್ಷಣ ಭೇದಿಸಿದ್ರೂ…ವಾತಾವಾರಣ ಮಾತ್ರ ಬೂದಿಮುಚ್ಚಿದ ಕೆಂಡದಂತಿತ್ತು. ಹರ್ಷ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳಲು ತೆರೆಮರೆಯಲ್ಲಿ ಸಂಚು ರೂಪಿತವಾಗಿದ್ದವು.

ಜನರು ಎಲ್ಲವನ್ನು ಮರೆತು ಶಿವಮೊಗ್ಗ ಶಾಂತವಾಯ್ತು ಎನ್ನುವಾಗಲೇ..ಅತ್ತ ಪ್ರಜ್ಞಾವಂತ ಪಡೆಯೊಂದು ನಗರದಲ್ಲಿ ನೆತ್ತರು ಹರಿಸಲು ಸಂಚು ರೂಪಿಸಿತ್ತು.

ಸುಮಾರು 13 ಮಂದಿಯ ಆರ್ಗನೈಸ್ ತಂಡ, ವ್ಯವಸ್ಥಿತವಾಗಿ ಮುಸ್ಲಿಂ ಯುವಕನೊಬ್ಬನನ್ನು ಕೊಲೆ ಮಾಡಬೇಕೆಂದು ಸಂಚು ರೂಪಿಸಿತ್ತು. ಅದಕ್ಕಾಗಿ ಎಲ್ಲಾ ಪ್ರಿಪರೇಷನ್ ಗಳು ಮುಗಿದು ಹೋಗಿದ್ದವು. ಇನ್ನೇನ್ನು ಪ್ಲಾನ್ ಎಕ್ಸಿಕ್ಯೂಟಿವ್ ಮಾಡೋದಷ್ಟೆ ಬಾಕಿಯಿತ್ತು.

ಶಿವಮೊಗ್ಗ ನಗರದಲ್ಲಿ ಮುಸ್ಲಿಂ ಯುವಕನೊಬ್ಬನ ಕೊಲೆಗೆ ಸಂಚು ರೂಪಿತವಾಗಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಎಸ್ಪಿ ಲಕ್ಷ್ಮಿ ಪ್ರಸಾದ್ ತುಂಬಾನೇ ಹೈ ಅಲರ್ಟ್ ಆಗಿದ್ದಾರೆ.

ಕೊಲೆ ಸಂಚನ್ನು ಭೇದಿಸುವುದಕ್ಕಾಗಿಯೇ ಖಡಕ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವನ್ನು ರಚಿಸಿದ್ದಾರೆ. ಯಾರೆಲ್ಲಾ ಕೊಲೆಯ ಸಂಚಿನಲ್ಲಿ ಭಾಗಿಯಾಗಿದ್ರೋ ಅಂತವರನ್ನೆಲ್ಲಾ ಅರೆಸ್ಟ್ ಮಾಡಿ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಮುಸ್ಲಿಂ ಯುವಕನೊಬ್ಬನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಹರ್ಷ ಚಾರಿಟಬಲ್ ಟ್ರಸ್ಟ್ ನ ಪದಾಧಿಕಾರಿ ಕೂಡ ಸಂಚಿನಲ್ಲಿ ಭಾಗಿ ಹಿಂದುಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಸಚಿನ್ ರಾಯ್ಕರ್ ವಿರುದ್ಧ ಕೂಡ ದೊಡ್ಡಪೇಟೆ ಪೊಲೀಸರು ಎಫ್​.ಐ.ಆರ್ ದಾಖಲಿಸಿದ್ದಾರೆ.

ಇತ್ತಿಚ್ಚೆಗಷ್ಟೆ ಕೊಲೆಯಾದ ಹರ್ಷ ಕುಟುಂಬದ ಜೊತೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ. ಅಂದು ಹರ್ಷ ಚಾರಿಟಬಲ್ ಟ್ರಸ್ಟ್ ರಚಿತವಾದ ಹಾಗು ಟ್ರಸ್ಟ್​ನ ಉದ್ದೇಶದ ಬಗ್ಗೆ ಮಾದ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗಿತ್ತು.

ಸಚಿನ್ ರಾಯ್ಕರ್ ಟ್ರಸ್ಟ್ ನ ಕಾರ್ಯದರ್ಶಿ ಎಂದು ಗೋಷ್ಠಿಯಲ್ಲಿ ಪ್ರಕಟಿಸಲಾಗಿತ್ತು. ಪೊಲೀಸರು ದಾಖಲಿಸಿರುವ ಎಫ್​​.ಐ.ಆರ್ ನಲ್ಲಿ ಸಚಿನ್ ರಾಯ್ಕರ್ 9 ನೇ ಆರೋಪಿಯಾಗಿದ್ದು, ಈಗ ನಾಪತ್ತೆಯಾಗಿದ್ದಾರೆ.

ಬಂಕ್ ಬಾಲು ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿದ್ದ ಆರೋಪಿ ಪ್ರವೀಣ್ ವಿರುದ್ಧ ಎಫ್​ಐಆರ್​!
ಇನ್ನು ಬಂಕ್ ಬಾಲು ಕೊಲೆ ಪ್ರಕರಣದಲ್ಲಿ ಇಷ್ಟು ದಿನ ಜೈಲಿನಲ್ಲಿದ್ದ ಆರೋಪಿ ಪ್ರವೀಣ್ ಇತ್ತಿಚೇಗಷ್ಟೆ ಶಿವಮೊಗ್ಗ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿದ್ದ. ಸೀಗೆಹಟ್ಟಿ ವಾಸಿಯಾಗಿರುವ ಈತನಿಗೆ ಅದ್ಯಾರು ಸುಫಾರಿ ಕೊಟ್ಟರೋ ಗೊತ್ತಿಲ್ಲ, ಈತನೇ ಮಂಚೂಣಿಯಲ್ಲಿ ನಿಂತು ಕೊಲೆ ಮಾಡಲು ಮುಂದಾಗಿದ್ದ ಎಂದು ಆರೋಪಿಸಲಾಗಿದೆ.

ಹೆಬ್ಬೆಟ್ ಮಂಜನ ಗ್ಯಾಂಗ್ ನಲ್ಲಿ ಗುರುತಿಸಿಕೊಡಿದ್ದ, ಈತನನ್ನು ಕೂಡ ದೊಡ್ಡಪೇಟೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಬಜರಂಗದಳ ಹರ್ಷನ ಕೊಲೆಗೆ ಹೇಗೆ ರೌಡಿ ಖಾಸಿಫ್ ಅಂಡ್ ಗ್ಯಾಂಗ್ ವ್ಯವಸ್ಥಿತವಾಗಿ ಸಂಚು ರೂಪಿಸಿತ್ತೋ ಅದೇ ಮಾದರಿಯಲ್ಲಿ ಇಲ್ಲೂ ಕೂಡ ಈ ಗ್ಯಾಂಗ್ ಕೊಲೆಗೆ ಸಂಚು ರೂಪಿಸಿತ್ತು. ಅತ್ತ ಖಾಸಿಫ್ ಹರ್ಷ ಕೊಲೆಗೆ ಶಿಫ್ಚ್ ಕಾರು ಬಳಿಸಿದ್ರೆ..ಇಲ್ಲಿ ಈ ಗ್ಯಾಂಗ್ ಕೊಲೆ ಮಾಡಿ ಪರಾರಿಯಾಗಲು ಮಾರುತಿ ಆಲ್ಟೋ ಕಾರನ್ನು ಖರೀದಿಸಿತ್ತು. 30 ಸಾವಿರ ಕೊಟ್ಟು ಕಾರು ಹಾಗು ಕೊಲೆ ಮಾಡಲು ಟೂಲ್ಸ್​​​ ಗಳನ್ನೆಲ್ಲಾ ಒಂದೆಡೆ ಕ್ರೂಡೀಕರಿಸಿದ್ರು.

ಯಾರೆಲ್ಲಾ ಆರೋಪಿಗಳು?
1)ರಾಕಿ ಅಲಿಯಾಸ್ ಕುಳ್ಳ ರಾಖಿ, 2)ವಿಶ್ವಾಸ್ ಅಲಿಯಾಸ್ ಜೆಟ್ಲಿ, 3)ನಿತಿನ್ ಅಲಿಯಾಸ್ ವಾಸನೆ, 4)ಯಶವಂತ್ ಅಲಿಯಾಸ್ ಬೆಂಗಳೂರು, 5)ಕಾರ್ತಿಕ್ ಅಲಿಯಾಸ್ ಕಟ್ಟೆ, 6)ಅಕಾಶ್ ಅಲಿಯಾಸ್ ಕೋತಿ, 7)ಪ್ರವೀಣ್ ಅಲಿಯಾಸ್ ಕುಲ್ಡಾ, 8)ಸುಹಾಸ್ ಅಲಿಯಾಸ್ ಅಪ್ಪು, 9)ಸಚಿನ್ ರಾಯ್ಕರ್, 10)ಸಂಕೇತ್ ಅಲಿಯಾಸ್ ದಿಟ್ಟಾ, 11)ರಘು ಅಲಿಯಾಸ್ ಬೊಂಡಾ, 12)ಮಂಜು, 13)ವಿಶಾಲ್ ಅಲಿಯಾಸ್ ಕುಟ್ಟಾ ಇವರೆಲ್ಲಾ ಬಹುತೇಕವಾಗಿ ಸೀಗೆಹಟ್ಟಿ ವಾಸಿಗಳೇ ಆಗಿದ್ದಾರೆ. ಹರ್ಷ ಕೊಲೆಗೆ ಪ್ರತಿಕಾರಕ್ಕಾಗಿ ಸಂಚು ಹೊಂಚು ರೂಪಿಸಿದ ಆರೋಪಿಗಳಾಗಿದ್ದಾರೆ.

ಲಾಲ್ ಬಂದ್ ವಾಡಿಯ ಯುವಕನ ಕೊಲೆಗೆ ಸಂಚು ರಾಕಿ, ವಿಶ್ವಾಸ್ ಅಂಡ್ ಗ್ಯಾಂಗ್ ಸೀಗೆಹಟ್ಟಿ ಸನಿಹದ ಲಾಲ್ ಬಂದ್ ವಾಡಿಯ ಮುಸ್ಲಿಂ ಯುವಕನನ್ನು ಕೊಲೆ ಮಾಡಲು ಸ್ಕೆಚ್ ಹಾಕಿತ್ತು. ಲಾಲ್ ಬಂದ್ ವಾಡಿಯ ಆ ಯುವಕನ ಮೇಲೆ ಇದುವರೆಗೂ ಯಾವ ಪಿಟಿ ಕೇಸ್ ಗಳಿಲ್ಲ. ಆತ ಕ್ರಿಮಿನಲ್ ಹಿನ್ನಲೆ ಹೊಂದಿದವನಲ್ಲ ಕಮ್ಯುನಲ್ ಗುಂಡಾ ಅಲ್ಲ..ಹರ್ಷನ ವಿರೋಧಿಯಂತೂ ಮೊದಲೇ ಇಲ್ಲ. ಇಂತಹ ಯುವಕನನ್ನು ರಂಜಾನ್ ಉಪವಾಸದ ಸಂದರ್ಭದಲ್ಲಿಯೇ ಕೊಲೆ ಮಾಡಲು ಈ ಗ್ಯಾಂಗ್ ಸಂಚು ರೂಪಿಸಿತ್ತು.

ಅಪರಾಧ ಎಸಗೋದ್ರಲ್ಲೂ ಒಂದು ನ್ಯಾಯ ಇರುತ್ತೆ ಎನ್ನುತ್ತೆ ಪಾತಕ ಲೋಕ. ಇಲ್ಲಿ ದ್ವೇಷ ಪ್ರತಿಕಾರಕ್ಕೆ ಕಾರಣಗಳಿರುತ್ತವೆ. ಒಂದು ಗ್ಯಾಂಗ್ ಮತ್ತೊಂದು ಗ್ಯಾಂಗ್ ನಡುವೆ ದ್ವೇಷ ಇದ್ರೆ. ನೆತ್ತರು ಹರಿಯೋದು,,ಹರಿಸೋದು ಸಹಜ. ಹರ್ಷ ಕೊಲೆ ಪ್ರಕರಣದಲ್ಲೂ..ಹರ್ಷ ಕೊಲೆ ಮಾಡಿದ ಆರೋಪಿಗಳ ವಿರುದ್ದ ಪ್ರತಿಕಾರ ತೀರಿಸಿಕೊಂಡರೆ ಅದೇ ನ್ಯಾಯ ಎಂದು ಭಾವಿಸುತ್ತೆ ಕ್ರೈಂ ಲೋಕ. ಆದರೆ ಹರ್ಷನಿಗೂ ಆತನ ಕೊಲೆಗೂ ಸಂಬಂಧವಿಲ್ಲದ ಯುವಕನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದು ಎಷ್ಟು ಸರಿ. ಒಂದು ವೇಳೆ ಅಂದುಕೊಂಡಂತೆ ಅಮಾಯಕ ಯುವಕನ ಕೊಲೆಯಾಗಿದ್ರೆ.,.ಹರ್ಷನ ಆತ್ಮಕ್ಕೆ ನಿಜಕ್ಕೂ ಶಾಂತಿ ಲಭಿಸುತ್ತಾ..ಶಿವಮೊಗ್ಗದ ಶಾಂತಿಯನ್ನು ಮತ್ತೆ ಕದಡುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ. ಇದಕ್ಕೆ ಅಮಾಯಕರೇ ಬಲಿಯಾಗೋದು ಅನ್ನೋದು ಈ ಘಟನೆಯಿಂದ ಸಾಕ್ಷಿಯಾಗಿದೆ.

ಅದೇನೇ ಆಗಲಿ ಗುಪ್ತಚರ ಇಲಾಖೆಗಿಂತಲೂ ಹರಿತವಾದ ಮಾಹಿತಿಯನ್ನು ಪಡೆದು, ಗ್ಯಾಂಗ್ ನ ಎಲ್ಲಾ ಆರೋಪಿಗಳಿಗೆ ಹೆಡೆಮುರಿ ಕಟ್ಟಿದ ಎಸ್ಪಿ ಲಕ್ಷ್ಮಿ ಪ್ರಸಾದ್ ಕಾರ್ಯವೈಖರಿಗೆ ಒಂದು ಹ್ಯಾಟ್ಸಾಫ್ ಹೇಳಲೇ ಬೇಕು. ಒಂದು ವೇಳೆ ಈ ಕೊಲೆಯಾಗಿದ್ರೆ.,ಶಿವಮೊಗ್ಗ ನಗರದಲ್ಲಿ ಮತ್ತದೇ ಕರ್ಫ್ಯೂ,ಸೆಕ್ಷನ್, ಕೋಟೆಗಟ್ಟಲೆ ವ್ಯವಹಾರ ನಷ್ಟ. ಬೀತಿಯಲ್ಲಿ ಜನರು ಬದುಕಬೇಕಾಗಿತ್ತು. ಹೊರಗಡೆಯಿಂದ ಪೊಲೀಸರನ್ನು ಕರೆಸಿಕೊಳ್ಳಬೇಕಿತ್ತು. ಇಷ್ಟೆಲ್ಲಾ ಭಾರವನ್ನು ತಗ್ಗಿಸಿದ ಎಸ್ಪಿ ಲಕ್ಷ್ಮಿ ಪ್ರಸಾದ್ ಗೆ ಶಿವಮೊಗ್ಗದ ಜನತೆ ಆಭಾರಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು