News Karnataka Kannada
Monday, April 15 2024
Cricket
ಶಿವಮೊಗ್ಗ

ದೇಶದ ಎಲ್ಲ ಮುಸ್ಲಿಮರು ರಾಷ್ಟ್ರ ದ್ರೋಹಿಗಳಲ್ಲ:ಕೆ.ಎಸ್.ಈಶ್ವರಪ್ಪ

Ishwarppa
Photo Credit : News Kannada

ಶಿವಮೊಗ್ಗ: ದೇಶದ ಎಲ್ಲ ಮುಸ್ಲಿಮರು ರಾಷ್ಟ್ರ ದ್ರೋಹಿಗಳಲ್ಲ. ಹಿಂದು- ಮುಸಲ್ಮಾನರನ್ನು ಕಾಂಗ್ರೆಸ್ ಬೇರೆ ಬೇರೆ ಮಾಡುತ್ತಿದೆ. ಮತ್ತೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳುತ್ತಾರೆ. ಕಾಂಗ್ರೆಸ್​ ನಾಯಕರು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಕಾರ್ಯಕರ್ತರಿಗೆ ಹೇಳಿದರು.

ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮುಸ್ಲಿಮರನ್ನು ಕಂಡ ಕೂಡಲೇ ಅವರು ಪಾಕಿಸ್ತಾನದವರು, ಉಗ್ರಗಾಮಿಗಳು ಎಂಬ ಭಾವನೆಯನ್ನು ದೂರ ತಳ್ಳಿ. ಅವರನ್ನು ನಮ್ಮತ್ತ ಸೆಳೆಯುವಂತಹ ಪ್ರಯತ್ನ ಮಾಡಬೇಕು. ಕಾಂಗ್ರೆಸ್​ನ ಮೇಕೆದಾಟು, ಜೆಡಿಎಸ್​ನ ಜಲಧಾರೆ ಅವರಿಗೆ ಒಂದೇ ಒಂದು ವೋಟು ತರಲ್ಲ.

ಹಣ, ಜಾತಿ ಪಕ್ಕಕ್ಕೆ ಸರಿಸಿ, ಕಾಂಗ್ರೆಸ್​ನವರ ತಂತ್ರಕ್ಕೆ ಪ್ರತಿತಂತ್ರವನ್ನು ಹೂಡಬೇಕು ಎಂದರು.ದೇಶದ ಎಲ್ಲ ಮುಸಲ್ಮಾನರು ರಾಷ್ಟ್ರ ದ್ರೋಹಿಗಳಲ್ಲ: ಕೆ.ಎಸ್.ಈಶ್ವರಪ್ಪಹುಬ್ಬಳ್ಳಿಯಲ್ಲಿನ ಘಟನೆಗೆ ಕಾರಣನಾದ ಮಾಸ್ಟರ್​ ಮೈಂಡ್​ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. ಜನರನ್ನು ಸೇರಿಸಿದ್ದು ಹೌದು. ಆದರೆ, ಕಲ್ಲು ಹೊಡೆಸಿದ್ದು ನಾನಲ್ಲ ಎಂದು ಹೇಳುತ್ತಿದ್ದಾನೆ. 2 ಸಾವಿರ ಜನರನ್ನು ಹೇಗೆ ಸೇರಿಸಿದ ಅವನಿಗೆ ಸ್ಫೂರ್ತಿ ಯಾರು ಎಂದು ಪ್ರಶ್ನಿಸಿದ ಈಶ್ವರಪ್ಪ, ಈ ಘಟನೆಯಿಂದ ಎಲ್ಲಾ ಮುಸ್ಲಿಮರನ್ನು ಅನುಮಾನದಿಂದ ನೋಡುವಂತಾಗಿದೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು