ಮಲೆನಾಡು

ಮೈಸೂರು: ನಾಗರಹೊಳೆ  ಕಾಡಂಚಿನ ಜನರ ನಿದ್ದೆಗೆಡಿಸಿದ ಒಂಟಿ ಸಲಗ

ಮೈಸೂರು: ನಾಗರಹೊಳೆ  ಉದ್ಯಾನಕ್ಕೆ ಹೊಂದಿಕೊಂಡಿರುವ ಕಾಡಂಚಿನ ಗ್ರಾಮಗಳಲ್ಲೀಗ ಕಾಡಾನೆಗಳ ಭಯ ಶುರುವಾಗಿದೆ. ಅರಣ್ಯದಿಂದ ಬರುತ್ತಿರುವ ಕಾಡಾನೆಗಳು ಜಮೀನಿಗೆ ನುಗ್ಗಿ ಫಸಲನ್ನು ನಾಶ ಮಾಡುತ್ತಿವೆ.

ಕಾಡಾನೆಗಳಿಗೆ ಹಲಸಿನ ಹಣ್ಣು ಪ್ರಿಯವಾಗಿರುವುದರಿಂದ ಸಾಮಾನ್ಯವಾಗಿ ಈ ಸಮಯದಲ್ಲಿ  ಹಲಸಿನ ಹಣ್ಣನ್ನು ಅರಸಿಕೊಂಡು ಬರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಇದೀಗ ಮಳೆಗಾಲವಾಗಿರುವುದರಿಂದ ರೈತರು ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಇದೇ ಸಮಯದಲ್ಲಿ ಕಾಡಾನೆಗಳನ್ನು ಅರಸಿಕೊಂಡು ಬರುವ ವೇಳೆ ಜಮೀನಿಗೆ ನುಗ್ಗುತ್ತಿದ್ದು, ಕೃಷಿಫಸಲನ್ನೆಲ್ಲ ತಿಂದು, ತುಳಿದು ನಾಶ ಮಾಡುತ್ತಿವೆ. ಪರಿಣಾಮ  ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ರೈತರದ್ದಾಗಿದೆ.

ಈ ನಡುವೆ ನಾಗರಹೊಳೆ ಉದ್ಯಾನದಿಂದ ಮೇವು ಅರಸಿ ಬಂದ ಒಂಟಿ ಸಲಗವೊಂದು ಹುಣಸೂರು ತಾಲೂಕಿನ ನೇರಳಕುಪ್ಪೆ ಗ್ರಾಮದ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಓಡಾಡಿದೆ. ಪರಿಣಾಮ ರೈತರ ಕೃಷಿ ಫಸಲು ನಾಶವಾಗಿದ್ದಲ್ಲದೆ, ಮನೆಗೂ ಹಾನಿ ಮಾಡಿದೆ. ಇದರಿಂದ ರೈತರು ಸೇರಿದಂತೆ ಗ್ರಾಮಸ್ಥರು ಭಯದಲ್ಲಿ ದಿನ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತಾದರೂ ಸಕಾಲದಲ್ಲಿ ಅರಣ್ಯ ಸಿಬ್ಬಂದಿಗಳು ಧಾವಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಮರಳಿ ಅರಣ್ಯಕ್ಕೆ ಅಟ್ಟಿದ್ದರಿಂದ ಸದ್ಯ ಜನ ನೆಮ್ಮದಿಯುಸಿರು ಬಿಡುವಂತಾಗಿದೆ.

ಶುಕ್ರವಾರ ರಾತ್ರಿ ನಾಗರಹೊಳೆ ಉದ್ಯಾನದಿಂದ ಹೊರ ಬಂದ ಸಲಗವು ರಾತ್ರಿಯೆಲ್ಲಾ ಜಮೀನಿನಲ್ಲಿ ಅಡ್ಡಾಡಿ ಸಾಕಷ್ಟು ಬೆಳೆ ಹಾನಿ ಮಾಡಿದ್ದು, ಶನಿವಾರ ಬೆಳಗ್ಗಿನ  ಸಮಯದಲ್ಲಿ ನೇರಳಕುಪ್ಪೆಯ ಗ್ರಾಮಕ್ಕೆ ತೆರಳಿ ಅಲ್ಲಿನ ತಿಮ್ಮಶೆಟ್ಟಿ ಮನೆ ಮೇಲೆ ದಾಳಿ ನಡೆಸಿ  ಗೋಡೆಯನ್ನು ಕೆಡವಿ ಹಾಕಿದೆ. ಇದರಿಂದ ಗೋಡೆಯು ಮುಂದೆ ಕಟ್ಟಿ ಹಾಕಿದ್ದ ನಾಯಿ ಹಾಗೂ ಕುರಿ ಮೇಲೆ ಬಿದ್ದು ನಾಯಿ ಸ್ಥಳದಲ್ಲೆ ಸಾವನ್ನಪ್ಪಿದ್ದರೆ, ಕುರಿ ತೀವ್ರ ಗಾಯಗೊಂಡಿದೆ. ಆದರೆ ಅದೃಷ್ಟವಶಾತ್ ಮನೆಯೊಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದಕ್ಕೂ ಮುನ್ನ ಈ ಸಲಗವು ರಾತ್ರಿಯಿಡೀ ಅಡ್ಡಾಡಿದ್ದು, ಉಡುವೆಪುರದ ಮರೀಗೌಡರ ಹತ್ತಿ, ನೇರಳಕುಪ್ಪೆಯ ಹಲಗೇಗೌಡರ ತೋಟದ ಅಡಿಕೆಮರ, ತಮ್ಮೇಗೌಡ, ಮಂಜುನಾಥ, ದೇವರಾಜು, ಕೃಷ್ಣ, ಸೇರಿದಂತೆ ಹಲವು ರೈತರ ಶುಂಠಿ, ಮುಸುಕಿನ ಜೋಳದ ಬೆಳೆ ಹಾಗೂ ಶುಂಠಿ ಬೆಳೆಗೆ ಅಳವಡಿಸಿದ್ದ ಸ್ಪಿಂಕ್ಲರ್ ಪೈಪ್‌ಗಳನ್ನು ನಾಶ ಮಾಡಿದೆ.

Ashika S

Recent Posts

ಬೀದರ್: ಸಾಯಿಜ್ಞಾನ ಪಬ್ಲಿಕ್ ಶಾಲೆಗೆ ಶೇ. 100 ಫಲಿತಾಂಶ

ಸಾಯಿಜ್ಞಾನ ಪಬ್ಲಿಕ್ ಶಾಲೆಯು ಪ್ರಸಕ್ತ ಸಾಲಿನ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದಿದೆ.…

12 mins ago

ಎಸಿಯಲ್ಲಿ ಬೆಂಕಿ: ತುರ್ತು ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ

ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

28 mins ago

ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಮೃತ್ಯು

ಹೊಳೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಡವಿನಕಟ್ಟೆಯಲ್ಲಿ ನಡೆದಿದೆ.

52 mins ago

ರಸ್ತೆ ತಿರುವಿನ ಅಪಾಯಕಾರಿ ವಿದ್ಯುತ್ ತಂತಿಗಳು: ಸುರಕ್ಷಿತ ಎತ್ತರಕ್ಕೆ ಏರಿಕೆ

ಸಾಣೂರಿನ ಲೈನ್ ಮ್ಯಾನ್  ಸುಭಾಷ್ ರವರು ತಮ್ಮ ತಂಡದೊಂದಿಗೆ ಮೇ 17 ರಂದು ಮುರತಂಗಡಿ ಇರುವತ್ತೂರು ರಸ್ತೆ ತಿರುವಿನಲ್ಲಿರುವ ವಿದ್ಯುತ್…

1 hour ago

ಕೇಸ್​ನಲ್ಲಿ ರಿಕವರಿ ಮಾಡಿದ್ದ ಅರ್ಧ ಕೆ.ಜಿ ಚಿನ್ನ ಕದ್ದ ಪೊಲೀಸ್​ ಪೇದೆ

ರಕ್ಷಕರೇ ಭಕ್ಷಕರಾದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ . ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ…

1 hour ago

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ: ಕಂಗನಾ ರಣಾವತ್

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಂದು ಹಿಮಾಚಲ…

2 hours ago