News Karnataka Kannada
Wednesday, April 17 2024
Cricket
ಚಿಕಮಗಳೂರು

ರಾಷ್ಟದ ಸುಭದ್ರತೆ ದೃಷ್ಟಿಯಿಂದ ಬಿಜೆಪಿಗೆ ಮತಯಾಚಿಸಿ : ಸಿ.ಟಿ.ರವಿ

ರಾಷ್ಟ್ರದ ಸುಭದ್ರತೆಯ ದೃಷ್ಟಿ ಹಾಗೂ ಭ್ರಷ್ಟಮುಕ್ತ ಆಡಳಿತ ನೀಡಲು ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ. ಹೀಗಾಗಿ ಪ್ರತಿ ಬೂತ್‌ಗಳಲ್ಲಿ ಕಾರ್ಯಕರ್ತರು ಮತಗಳಿಕೆಗೆ ಹೆಚ್ಚು ಒತ್ತು ನೀಡಿ ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯಾಗಿಸಲು ಸನ್ನದ್ದರಾಗಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
Photo Credit : NewsKarnataka

ಚಿಕ್ಕಮಗಳೂರು : ರಾಷ್ಟ್ರದ ಸುಭದ್ರತೆಯ ದೃಷ್ಟಿ ಹಾಗೂ ಭ್ರಷ್ಟಮುಕ್ತ ಆಡಳಿತ ನೀಡಲು ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ. ಹೀಗಾಗಿ ಪ್ರತಿ ಬೂತ್‌ಗಳಲ್ಲಿ ಕಾರ್ಯಕರ್ತರು ಮತಗಳಿಕೆಗೆ ಹೆಚ್ಚು ಒತ್ತು ನೀಡಿ ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯಾಗಿಸಲು ಸನ್ನದ್ದರಾಗಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಚಿಕ್ಕಮಗಳೂರು ನಗರ ಮಂಡಲದ ಪ್ರಥಮ ಕಾರ್ಯಕಾರಿಣಿ ಸಭೆ ಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ನಗರ ವ್ಯಾಪ್ತಿಯ ಪ್ರತಿ ವಾರ್ಡ್‌ಗಳಲ್ಲಿ ಕಾರ್ಯಕರ್ತರು ನಾಯಕತ್ವ ವಹಿಸಿಕೊಂಡು ಮತದಾರರ ಮನವರಿಕೆ ಮುಂದಾಗಬೇಕು. ಅಲ್ಲದೇ ಜೆಡಿಎಸ್ ಬೂತ್‌ಗಳಿಗೂ ತೆರಳಿ ಮತಗಳಿಕೆಗೆ ಒಗ್ಗಟ್ಟಾಗಿ ಕೆಲಸ ಮಾಡ ಬೇಕು. ಹಿಂದಿನ ಚುನಾವಣೆಗಳಲ್ಲಿ ಎಲ್ಲೆಲ್ಲಿ ಬಿಜೆಪಿಗೆ ಕಡಿಮೆ ಮತಗಳ ಅಂತರವಿರುವುದನ್ನು ಗುರುತಿಸಿ ಪ್ರಮಾಣ ಹೆಚ್ಚಿ ಸಲು ಮುಂದಾಗಬೇಕು ಎಂದರು.

ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರತಿಯೊಬ್ಬ ಕಾರ್ಯಕರ್ತರು ಅಭ್ಯರ್ಥಿಯೆಂದೇ ಪರಿಗಣಿಸಿ ಸವಾಲಾಗಿ ಸ್ವೀಕರಿಸಬೇಕು. ಪ್ರಸ್ತುತ ಕ್ಷೇತ್ರವು ವಿಧಾನಸಭಾದಲ್ಲಿ ಸೋತಿರಬಹುದು. ಆದರೆ ಚಿಕ್ಕಮಗಳೂರು ಎಂದಿ ಗೂ ಬಿಜೆಪಿಯ ಭದ್ರಕೋಟೆ. ಹೀಗಾಗಿ ಕಾರ್ಯಕರ್ತರು ದೃತಿಗೆಡದೇ ಒಂದೊಂದು ಮತಗಳನ್ನು ಬಿಜೆಪಿ ಕಡೆ ಸೆಳೆಯುವ ಕಾರ್ಯಕ್ಕೆ ಮುಂದಾಗಬೇಕು. ಇದೀಗ ರಾಜ್ಯನಾಯಕರುಗಳ ಒಪ್ಪಂದ ಮೇರೆಗೆ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ. ಒಂದು ಸಮಯದಲ್ಲಿ ಮಾಜಿ ಪ್ರಧಾನಿಗಳು ಮೋದಿಯನ್ನು ಟೀಕಿಸುವುದನ್ನೇ ಗುರಿಯಾಗಿಸಿದ್ದರು. ಈಗ ಖುದ್ದು ನರೇಂದ್ರ ಮೋದಿಯವರ ಪ್ರಧಾನಿಯಾದರೆ ದೇಶದ ಭವಿಷ್ಯ ಉಜ್ವಲವೆನ್ನುತ್ತಿರುವುದಕ್ಕೆ ಬಿಜೆಪಿ ಶಕ್ತಿಯೇ ಕಾರಣವಾಗಿದ್ದು ಕಮಲದ ದಳ ಅರಳಿಸುವ ಸಮಯ ಇದಾಗಿದೆ ಎಂದರು.

ಕ್ಷೇತ್ರದಲ್ಲಿ ಕಳೆದ ೨೦೧೮-೨೩ನೇ ಸಾಲಿನ ಅವಧಿಯಲ್ಲಿ ಮೆಡಿಕಲ್ ಕಾಲೇಜು, ಜಿಲ್ಲಾಧಿಕಾರಿ ಕಟ್ಟಡ, ರತ್ನ ಗಿರಿಬೋರೆ ಉದ್ಯಾನವನ ಆರಂಭ, ಬಸವನಹಳ್ಳಿ ಕೆರೆ, ಇಂಡೋರ್ ಸ್ಟೇಡಿಯಂ, ಓಪನ್‌ಜಿಮ್, ಅಬ್ದುಲ್ ಕಲಾಂ ವಸತಿನಿಲಯ, ಮುಸ್ಲೀಂ ಹಾಸ್ಟೆಲ್ ಸೇರಿದಂತೆ ಅತಿಹೆಚ್ಚು ಅನುದಾನವನ್ನು ತಂದು ಮಾಜಿ ಶಾಸಕನಾದೇ, ಆದರೆ ದೇಶದ ಚುನಾವಣೆಯಲ್ಲಿ ಆ ತಪ್ಪುಗಳು ಮರಕಳಿಸದಂತೆ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.

ಆ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಒಂದೊಂದು ಮತ ಕೂಡಿಸುವ ಕೆಲಸ ಮಾಡಬೇಕು. ಪ್ರತಿ ಕಾರ್ಯಕರ್ತರು ತಮ್ಮಗಳ ಬೂತ್‌ಗಳಲ್ಲಿ ಜವಾಬ್ದಾರಿ ಹೊತ್ತಿದರೆ ಮಾತ್ರ ಚುನಾವಣೆ ಗೆಲುವು ಶತಸಿದ್ಧ. ಕೆಲವರು ಪಕ್ಷಕ್ಕೆ ಸಂಬಂಧವಿಲ್ಲದಿದ್ದರೂ ಮೋದಿ ಅಭಿಮಾನಿಗಳಾಗಿ ಕೆಲಸ ಮಾಡುತ್ತಿದ್ದು ಅವರ ಪಟ್ಟಿ ತಯಾರಿಸಿ ಒಂದಾಗಿ ಮುನ್ನೆಡೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ನಗರ ಮಂಡಲ ಅಧ್ಯಕ್ಷ ಪುಷ್ಪರಾಜ್ ಪಕ್ಷದ ಕಾರ್ಯಕರ್ತರು ಕೇವಲ ಸಭೆಗಳಿಗೆ ಆಗಮಿಸಿ ತೆರಳಿದರೆ ಸಾಲದು. ಚುನಾವಣೆ ಸಮೀಪದಲ್ಲಿರುವ ಹಿನ್ನೆಲೆಯಲ್ಲಿ ಅತಿಹೆಚ್ಚು ಸಮಯವನ್ನು ಪಕ್ಷದ ಸಂಘಟನೆಗೆ ಹಾಗೂ ಚುನಾವಣೆಗೆ ಮುಡಿಪಿಡಬೇಕು. ವೈಯಕ್ತಿಕ ಜೀವನದಲ್ಲಿ ಹಲವಾರು ಏರುಪೇರುಗಳಿವೆ. ಹೀಗಾಗಿ ದೇಶದ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಗಬೇಕಿದೆ. ನಗರದ ಸುಮಾರು ೩೫ ವಾರ್ಡ್‌ಗಳಲ್ಲಿ ೧೧೨ ಬೂತ್‌ಗಳಿವೆ. ಈ ಪೈಕಿ ಕಳೆದ ಚುನಾವಣೆಯಲ್ಲಿ ಸ್ವಲ್ಪ ಹಿನ್ನೆ ಡೆ ಹೊಂದಿರುವ ಕಾರಣ ಕಾರ್ಯಕರ್ತರು ಸರಿದೂಗಿಸಿಕೊಂಡು ಹೋಗಬೇಕಿದೆ. ೨೮ ಶಕ್ತಿ ಕೇಂದ್ರ, ೭ ಮಹಾಶಕ್ತಿ ಕೇಂದ್ರಗಳಲ್ಲಿ ಕಾರ್ಯಕರ್ತರು ಸ್ಥಳೀಯವಾಗಿ ಕಾರ್ಯಕ್ರಮ ರೂಪಿಸಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ನಿರತರಾಗಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ಶೆಟ್ಟಿ ಮಾತನಾಡಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಮೋ ರ್ಚಾಗಳನ್ನು ನೇಮಿಸಲಾಗಿದ್ದು ಆಯಾ ಭಾಗದಲ್ಲಿ ಹೋಬಳಿ ಅಧ್ಯಕ್ಷರು, ಮುಖಂಡರುಗಳು ಕೇಂದ್ರ ಸರ್ಕಾರದ ಜನಪರ ಯೋಜನೆಗಳಾದ ಫಸಲ್ ಭೀಮಾ, ಪಿಎಂ ಕಿಸಾನ್, ನಗರ ಪರಿವರ್ತನೆಗೆ ಆಟಲ್‌ಜೀ ಮಿಷನ್, ಬೀದಿ ವ್ಯಾಪಾರಿಗಳ ಆತ್ಮನಿರ್ಭಾರ್ ನಿಧಿ, ಪಿಎಂ ಆವಾಜ್ ಯೋಜನೆಗಳ ಅರಿವು ಮೂಡಿಸಬೇಕು ಎಂದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ, ಓಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ನರೇಂದ್ರ, ವಕ್ತಾರ ಟಿ.ರಾಜ ಶೇಖರ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಕೌಶಿಕ್, ಬಸವರಾಜ್, ಜಿ.ಶಂಕರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಪವಿತ್ರ ಹಾಗೂ ವಿವಿಧ ಮಂಡಲದ ಪದಾಧಿಕಾರಿಗಳು, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು