News Karnataka Kannada
Tuesday, April 23 2024
Cricket
ಚಿಕಮಗಳೂರು

ಚಾರಣ ಪ್ರೀಯರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ

ಇಲಾಖಾ ಆದೇಶದಂತೆ ಫೆ. 3ರಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಚಾರಣ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬೆಳ್ತಂಗಡಿ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಬರುವ ಪ್ರವಾಸಿತಾಣವಾದ ನರಸಿಂಹಗಡ ಕೋಟೆಯ (ಗಡಾಯಿಕಲ್ಲು) ಪ್ರವಾಶವನ್ನು ಯಾವುದೇ ಪ್ರವಾಸಿಗರಿಗಾಗಲೀ ಅಥವಾ ಸಾರ್ವಜನಿಕರಿಗಾಗಲಿ ಮುಂದಿನ ಇಲಾಖಾ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.
Photo Credit :

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎತ್ತಿನಭುಜ, ರಾಣಿಝೇರಿ, ಕೆಮ್ಮಣ್ಣಗುಂಡಿ ಸೇರಿದಂತೆ ಅನೇಕ ಟ್ರಕ್ಕಿಂಗ್‌ ಸ್ಪಾಟ್‌ಗಳಿವೆ. ಟ್ರಕ್ಕಿಂಗ್ ಸ್ಪಾಟ್‌ಗಳಿಗೆ ಜನರು ಮನಸೋ ಇಚ್ಚೆ ಬೇಟಿ ನೀಡುತ್ತಿದ್ದು ಇದು ಇಲ್ಲಿನ ವನ್ಯಜೀವಿಗಳಿಗೆ ಪ್ರತಿನಿತ್ಯ ಕಿರಿಕಿರಿ ಉಂಟಾಗುತ್ತಿದೆ. ಈ ಕಾರಣಕ್ಕೆ ಸರಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಸರಕಾರ ಮುಂದಾಗಿದ್ದು, ಸದ್ಯ ಜಿಲ್ಲೆಯಲ್ಲಿ ಟ್ರಕ್ಕಿಂಗ್ ಬಂದ್‌ಗೊಳಿಸಲಾಗಿದೆ. ಸರಕಾರ ನಿಯಮಗಳನ್ನು ಜಾರಿಗೊಳಿಸುವರೆಗೂ ಟ್ರಕ್ಕಿಂಗ್‌ ಪ್ರಿಯರು ಕಾಯಬೇಕಿದೆ.

ಇಲಾಖಾ ಆದೇಶದಂತೆ ಫೆ. 3ರಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಚಾರಣ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬೆಳ್ತಂಗಡಿ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಬರುವ ಪ್ರವಾಸಿತಾಣವಾದ ನರಸಿಂಹಗಡ ಕೋಟೆಯ (ಗಡಾಯಿಕಲ್ಲು) ಪ್ರವಾಶವನ್ನು ಯಾವುದೇ ಪ್ರವಾಸಿಗರಿಗಾಗಲೀ ಅಥವಾ ಸಾರ್ವಜನಿಕರಿಗಾಗಲಿ ಮುಂದಿನ ಇಲಾಖಾ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.

ಇತ್ತೀಚೆಗೆ ಪಶ್ಚಿಮಘಟ್ಟದ ಕುಮಾರ ಪರ್ವತದಲ್ಲಿ ಚಾರಣ ಹೊರಟ ಜನರ ದೊಡ್ಡ ಗುಂಪು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಎಚ್ಚೆತ್ತುಕೊಂಡಿರುವ ಸರಕಾರ ಈ ನಿಯಮಗಳ ಜಾರಿಗೆ ಮುಂದಾಗಿದೆ. ಪ್ರವಾಸಿಗರು ಜವಬ್ದಾರಿಯಿಂದ ನಡೆದುಕೊಳ್ಳದೆ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿರುವುದರಿಂದ ವನ್ಯಜೀವಿಗಳಿಗೆ ನಿತ್ಯ ಕಿರಿಕಿರಿಯಾಗುತ್ತಿದೆ. ಪೋಟೋ ಕ್ಲಿಕ್ಕಿಸಿಕೊಳ್ಳುವ ಹುಂಬತನದಿಂದ ಅವಘಡಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಒಂದಿಷ್ಟು ನಿಯಮಗಳನ್ನು ರೂಪಿಸಬೇಕೆಂಬ ಕೂಗು ಜಿಲ್ಲೆಯಲ್ಲಿ ಪರಿಸರ ಪ್ರೇಮಿಗಳಿಂದ ಕೇಳಿ ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು