News Karnataka Kannada
Thursday, April 25 2024
Cricket
ಚಿಕಮಗಳೂರು

ಕಾರಿಗೆ ಮೂರು ಸಾವಿರ ರೂ. ಪೆಟ್ರೋಲ್‌ ಹಾಕಿಸಿ ಹಣ ನೀಡದೆ ಪರಾರಿ

Rs 3,000 for the car. Run away without paying for petrol
Photo Credit : News Kannada

ಚಿಕ್ಕಮಗಳೂರು: ನಂಬರ್‌ ಪ್ಲೇಟ್‌ ಇಲ್ಲದ ಕಾರಿನಲ್ಲಿ ಬಂದು 3,000 ರೂ. ಪೆಟ್ರೋಲ್ ಹಾಕಿಸಿ ಪರಾರಿಯಾಗಿರುವ ಘಟನೆ ಶೃಂಗೇರಿ ಪಟ್ಟಣದ ಹೊರವಲಯದ ಪೆಟ್ರೋಲ್‌ ಬಂಕ್‌ ವೊಂದರಲ್ಲಿ ವರದಿಯಾಗಿದೆ. ವಂಚಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶೃಂಗೇರಿ ಪಟ್ಟಣದ ಹೊರವಲಯದ ಹೆಚ್.ಪಿ. ಪೆಟ್ರೋಲ್ ಬಂಕ್‌ ಗೆ ಸ್ವಿಫ್ಟ್‌ ಕಾರಿನಲ್ಲಿ ಬಂದವರು 3, 000 ರೂ. ಪೆಟ್ರೋಲ್ ಹಾಕಿಸಿದ್ದಾರೆ . ಬಳಿಕ ದುಡ್ಡು ಕೊಡದೆ ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರಿಗೆ ನಂಬರ್ ಪ್ಲೇಟ್‌ ಇಲ್ಲದ ಕಾರಣ ಪೆಟ್ರೋಲ್ ಬಂಕ್‌ನವರಿಗೆ ಇಂತಹವರೇ ಎಂದು ಪತ್ತೆ ಹಚ್ಚುವುದು ಸವಾಲಾಯಿತು. ಬಳಿಕ ಕಾರು ಚಾಲಕ ತನಿಕೋಡು ಅರಣ್ಯ ಚೆಕ್‌ಪೋಸ್ಟ್‌ನಲ್ಲೂ ಪಾಸ್ ತೆಗೆದುಕೊಳ್ಳದೆ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಬಜರಂಗದಳ ಒತ್ತಾಯಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು