News Karnataka Kannada
Thursday, April 18 2024
Cricket
ಚಿಕಮಗಳೂರು

ಮಲೆನಾಡಲ್ಲಿ ಕೈ ಕೊಟ್ಟ ಮಳೆರಾಯ: ಗಡಿ ಮಾರಿಗೆ ವಿಶೇಷ ಪೂಜೆ

Rain in Malnad: Special pujas performed to the border vendors
Photo Credit : News Kannada

ಚಿಕ್ಕಮಗಳೂರು: ಮಲೆನಾಡಲ್ಲಿ ಮೂರು ದಶಕಗಳ ಬಳಿಕ ಜುಲೈ ಬಂದ್ರು ಮಳೆಯಿಲ್ಲ. ಈ ವೇಳೆಗೆ ಮಲೆನಾಡಲ್ಲಿ ಸಮೃದ್ಧ ಮಳೆಯಾಗ್ತಿತ್ತು. ಕಳೆದ ನಾಲ್ಕೈದು ವರ್ಷದಲ್ಲಂತು ಈ ಹೊತ್ತಿಗೆ ಅಲ್ಲೋಲ-ಕಲ್ಲೋಲ. ಆದ್ರೆ, ಈ ಬಾರಿ ಶೇಕಡ ೨೦ರಷ್ಟು ಮಳೆಯಾಗಿಲ್ಲ. ಹಾಗಾಗಿ, ಮಲೆನಾಡ ಗ್ರಾಮೀಣ ಭಾಗದ ಜನ ಗಡಿಮಾರಿಗೆ ವಿಶೇಷ ಪೂಜೆ ಸಲ್ಲಿಸಿ ಮತ್ತೊಂದು ಹಳ್ಳಿಯ ಗಡಿಗೆ ಬಿಡ್ತಿದ್ದು, ಮಳೆ ಇಲ್ಲದೆ ಎದುರಾಗಿರೋ ಸಂಕಷ್ಟವನ್ನ ಮಳೆ ಸುರಿಸಿ ನಿವಾರಿಸುವಂತೆ ಬೇಡಿಕೊಂಡಿದ್ದಾರೆ.

ನಿರ್ದಿಷ್ಟ ರೂಪ-ಆಕಾರ ಎರಡೂ ಇಲ್ಲ. ಮರದಿಂದ ಮಾಡಿದ ಮನುಷ್ಯ ರೂಪದ ಹೋಲಿಕೆಯೇ ಆಕೆಯ ದೈವತ್ವಕ್ಕೆ ಸಾಕ್ಷಿ. ಮರದಿಂದ ಮಾಡಿದ ಚಿಕ್ಕ ಗಾಡಿಗಳೇ ಆಕೆಯ ರಥ. ಇವತ್ತು ಈ ಊರಲ್ಲಿದ್ರೆ ನಾಳೆ ಮತ್ತೊಂದು ಊರಲ್ಲಿರ್ತಾಳೆ. ಆಕೆಗೊಂದು ನಿರ್ದಿಷ್ಠ ಸ್ಥಳವೂ ಇಲ್ಲ. ಅವಳಿರೋ ಜಾಗವೇ ಅವಳ ಧರ್ಮ ಸ್ಥಾನ. ಬಿಸಿಲಲ್ಲಿ ಒಣಗುತ್ತಾಳೆ. ಚಳಿಯಲ್ಲಿ ನಡುಗುತ್ತಾಳೆ. ಮಳೆಯಲ್ಲಿ ನೆನೆಯುತ್ತಾಳೆ. ಮಡಿವಾಳ ಸಮಾಜವೇ ಆಕೆಗೆ ಪೂಜೆ ಸಲ್ಲಿಸೋದು.

ಮೂರು ದಶಕಗಳ ಬಳಿಕ ಮಳೆ ಯಿಲ್ಲದೆ ಕಂಗಾಲಾಗಿರೋ ಕಾಫಿನಾಡ ಮಲೆನಾಡು ಭಾಗ ಆಕಾರವಿಲ್ಲದ ಆಕೆಗೆ ಮಳೆಗಾಗಿ ವಿಶೇಷ ಪೂಜೆ ಮಾಡಿದ್ದಾರೆ. ಸದ್ಯ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಸಿಂಸೆ ಗ್ರಾಮದಲ್ಲಿ ಮಳೆಗಾಗಿ ವಿಶೇಷವಾಗಿ ಗಡಿಮಾರಿ ಪೂಜೆ ಸಲ್ಲಿಸಿದ್ದಾರೆ. ಈ ಹಳ್ಳಿಯವರು ಪೂಜೆ ಮಾಡಿ ಮುಂದಿನ ಹಳ್ಳಿಗೆ ಬಿಟ್ರೆ, ಅವ್ರು ಪೂಜೆ ಮಾಡಿ ಮತ್ತೊಂದು ಹಳ್ಳಿ ಗಡಿ ಬಿಡ್ತಾರೆ. ಹಾಗಾಗಿ, ಈಕೆ ಗಡಿಮಾರಿ ಎಂದೇ ಖ್ಯಾತಿ.

ಪೂಜೆ ನಡೆಯದಿದ್ದಾಗ ಈ ರೀತಿ ಬರಗಾಲ ಬರುತ್ತೆ ಅನ್ನೋ ನಂಬಿಕೆ: ಗಡಿಮಾರಿಗೆ ಪೂಜೆ ನಡೆಯದಿದ್ದಾಗ ಈ ರೀತಿ ಬರಗಾಲ ಬರುತ್ತೆ ಅನ್ನೋ ನಂಬಿಕೆ ಸ್ಥಳಿಯರದ್ದಾಗಿದೆ. ಹಾಗಾಗಿ, ರಸ್ತೆಬದಿ ಇರುವ ದೇವರಿಗೆ ಹೊಸ ಸೀರೆ, ಪಂಚೆ ಉಡಿಸಿ, ಗರ್ಭಗುಡಿಯ ದೇವಿಗೆ ಪೂಜೆ ಮಾಡುವಂತೆ ಶಾಸ್ತ್ರೋಕ್ತವಾಗಿ ಪೂಜೆ ಮಾಡಿ, ಚಿಕ್ಕ ಗಾಡಿಯ ಮೇಲೆ ಇರುವ ದೇವರನ್ನ ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಮುಂದಿನ ಊರಿನ ಗಡಿಗೆ ಕಳಿಸಿಕೊಡ್ತಾರೆ. ಹೀಗೆ ದೇವರು ಹೋಗು ವಾಗ ಈ ದೇವಿಯನ್ನ ಪಂಜಿನ ಜೊತೆಯೇ ಕರೆದುಕೊಂಡ ಹೋಗ ಬೇಕು. ಅನಾದಿ ಕಾಲದಿಂದಲೂ ಈಕೆಗೆ ಮಡಿವಾಳ ಸಮಾಜವೇ ಪೂಜೆ ಮಾಡ್ತಿರೋದು.

ಈ ಬಾರಿಯೂ ಸಿಂಸೆ ಗ್ರಾಮದ ಸುತ್ತಮುತ್ತಲಿನ ಎಲ್ಲಾ ಜಾತಿ-ಧರ್ಮ ದವರು ಸೇರಿ ಈಕೆಗೆ ಅದ್ದೂರಿಯಾಗಿ ಪೂಜೆ ಮಾಡಿ ಮುಂದಿನ ಗಡಿಗೆ ಬಿಟ್ಟು ಬಂದಿದ್ದಾರೆ. ಹೀಗೆ ಮಳೆ ಇಲ್ಲದಾಗ ಗಡಿ ಮಾರಿಗೆ ಪೂಜೆ ಮಾಡಿದರೆ ಮಳೆಯಾಗುತ್ತೆ ಅನ್ನೋದು ಸ್ಥಳಿಯರ ನಂಬಿಕೆ. ಒಟ್ಟಾರೆ ಕಾಫಿನಾಡು ಚಿಕ್ಕಮಗ ಳೂರಲ್ಲಿ ಮಳೆಗಾಗಿ ದಶದಿಕ್ಕುಗಳಲ್ಲೂ ಪೂಜೆ ನಡೆಯುತ್ತಿದೆ.

ಶೃಂಗೇರಿ ಶಾರದಾಂಭೆ, ಹೊರನಾಡು ಅನ್ನಪೂರ್ಣೇಶ್ವರಿ, ಮಳೆ ದೇವರೆಂದೇ ಖ್ಯಾತಿಯಾಗಿರುವ ಕಿಗ್ಗಾದ ಋಷ್ಯಶೃಂಗೇಶ್ವರ ದೇವಾಲಯ ಎಲ್ಲಾ ಕಡೆ ಮಳೆಗಾಗಿ ಪೂಜೆ ನಡೆಯುತ್ತಿದೆ. ಈ ಮಧ್ಯೆ ಗ್ರಾಮೀಣ ಭಾಗದ ನಂಬಿಕೆಯಂತೆ ಮಲೆನಾಡಿಗರು ಮಳೆಗಾಗಿ ಗಡಿಮಾರಿ ಮೊರೆ ಹೋಗಿದ್ದಾರೆ. ಯಾವ್ದೋ ಒಂದು ದೇವರ ದಯೆಯಿಂದ ರಾಜ್ಯಕ್ಕೆ ಸಮೃದ್ಧ ಮಳೆಯಾದರೆ ಸಾಕು. ಏಕೆಂದರೆ, ರಾಜ್ಯ ಮಳೆಯಿಲ್ಲದೆ ಕಂಗಾಲಾಗಿದೆ. ಅದರಲ್ಲೂ ಅರ್ಧ ಕರ್ನಾಟಕಕ್ಕೆ ಕುಡಿಯೋ ನೀರು ನೀಡೋ ಕಾಫಿನಾಡಲ್ಲೇ ಮಳೆ ಇಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು