ನರಸಿಂಹರಾಜಪುರ: ನಿವೇಶನ ಹಕ್ಕುಪತ್ರ ಹಂಚಿಕೆಯಲ್ಲಿ ವಿಳಂಬ – ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ನರಸಿಂಹರಾಜಪುರ: ತಾಲ್ಲೂಕಿನ ಬನ್ನೂರು ಗ್ರಾಮದಲ್ಲಿ ನಿವೇಶನ ರಹಿತರಿಗೆ ಸರ್ಕಾರ ಹಕ್ಕುಪತ್ರ ವಿತರಿಸುವಲ್ಲಿ ವಿಳಂಭ ಧೋರಣೆ ತಾಳಿರುವ ಹಿನ್ನೆಲೆಯಲ್ಲಿ ಹಕ್ಕುಪತ್ರ, ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಏಳೂರು ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿ ಬನ್ನೂರಿನಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಸ್.ಶ್ರೀಕಾಂತ್ ಕುಂಬ್ರುಮನೆ, ಸೊಪ್ಪಿನಕಾಡು, ಶೆಟ್ಟಿಹಿತ್ಲು, ಕೂಡಿಗೆ, ಜಕ್ಕಣಕ್ಕಿ, ಹಲಸೂರು, ಬನ್ನೂರು ಗ್ರಾಮದಲ್ಲಿ ಸುಮಾರು ೪ ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಯನ್ನು ಹೊಂದಿದೆ. ಪ.ಜಾತಿ ಮತ್ತು ಪ.ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ನೂರಾರು ವರ್ಷಗಳಿಂದ ನಿರ್ಗತಿಕರಾಗಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ ಎಂದರು.

ಪ್ರತಿವರ್ಷ ಸರ್ಕಾರ ಸೂಚಿಸಿದ ಕಂದಾಯ ಇಲಾಖೆಯ ೯೪ಸಿ, ೫೩, ೫೭ ಮತ್ತು ಹಕ್ಕು ಪತ್ರ ಪಡೆಯಲು ಅರಣ್ಯ ಹಕ್ಕು ಸಮಿತಿಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೂ ಯಾರಿಗೂ ಹಕ್ಕುಪತ್ರ ನೀಡಿರುವುದಿಲ್ಲ. ಬನ್ನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ೩೧೫ ಎಕರೆ ಗೋಮಾಳ ಜಾಗವಿದ್ದರೂ ಅನೇಕ ವರ್ಷಗಳಿಂದ ವಾಸವಾಗಿರುವ ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡಿರುವುಲ್ಲ ಎಂದು ಆರೋಪಿಸಿದರು.

ಬನ್ನೂರು ವ್ಯಾಪ್ತಿಯ ಶೆಟ್ಟಿಹಿತ್ಲು, ಕುಂಬ್ರುಮನೆ, ಸೊಪ್ಪಿನಕಾಡು, ಜಕ್ಕಣಕ್ಕಿ, ಕೂಡಿಗೆ ಹಾಗೂ ಹಲಸೂರು ಗ್ರಾಮಸ್ಥರು ನಿವೇಶನ ಹಕ್ಕುಪತ್ರ ನೀಡಿದ ನಂತರವೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ ಹಾಕುತ್ತೇವೆ. ಇಲ್ಲವಾದಲ್ಲಿ ಏಳೂರು ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸುವ ಜೊತೆಗೆ ಗ್ರಾಮದಲ್ಲಿ ರಾಜ ಕೀಯ ಪ್ರಚಾರ ಕಾರ್ಯ ಕೈಗೊಳ್ಳದಂತೆ ತಡೆಯೊಡ್ಡಲಾ ಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಉಪಾಧ್ಯಕ್ಷ ಹರೀಶ್, ಕಾರ್ಯದರ್ಶಿ ಆಯಿಷಾ, ಗ್ರಾಮಸ್ಥರಾದ ಟಿ.ಕೃಷ್ಣಪ್ಪ, ಶಂಕರ, ಅಣ್ಣಪ್ಪ, ಉಮೇಶ್, ರತ್ನ, ಬಿ.ಟಿ.ರಮೇಶ್, ಉಮೇಶ್, ಸತೀಶ್, ರವಿ ಮತ್ತಿತರರು ಹಾಜರಿದ್ದರು.

Ashika S

Recent Posts

ನಟಿ ರಶ್ಮಿಕಾ ಟ್ವೀಟ್​ಗೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ವಿವಾದಾದ್ಮಕ ಹೇಳಿಕೆ

ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಅದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿವಿಧ ಭಾಷೆಗಳಲ್ಲಿ ನಟಿಸಿ ಸೈ…

6 mins ago

ಮೊಬೈಲ್ ವಿಚಾರಕ್ಕೆ ಹಲ್ಲೆ: ಆರೋಪಿಗಳು ವಶಕ್ಕೆ

ಮೊಬೈಲ್ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಬಾಪೂಜಿನಗರದ ಮಧುರ ಬಾರ್ ಬಳಿ ನಡೆದಿದೆ.

11 mins ago

ಅಂಜಲಿ ಹತ್ಯೆ ಪ್ರಕರಣ: ನನ್ನ ಮಗನಿಗೆ ಕೋರ್ಟ್ ಯಾವ ಶಿಕ್ಷೆ ಬೇಕಾದರು ಕೊಡಲಿ ಎಂದ ಆರೋಪಿ ಗಿರೀಶ್ ತಾಯಿ

ನನ್ನ ಮಗ ಗಿರೀಶ್ ತಪ್ಪು ಮಾಡಿದ್ದಾನೆ. ಅವನಿಗೆ ಕೋರ್ಟ್ ಯಾವ ಶಿಕ್ಷೆ ಬೇಕಾದರು ಕೊಡಲಿ. ಅಂಜಲಿ ಮತ್ತು ಗಿರೀಶ್ ಪರಸ್ಪರ…

30 mins ago

ಸ್ವಾತಿ ಹಲ್ಲೆ ಪ್ರಕರಣ : ಹೊಸ CCTV ಫೂಟೇಜ್ ಬಿಡುಗಡೆ ಮಾಡಿದ ಎಎಪಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರು ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ…

31 mins ago

ಮರಕ್ಕೆ ಕಾರು ಡಿಕ್ಕಿ: ನಾಲ್ವರು ಕಾನೂನು ವಿದ್ಯಾರ್ಥಿಗಳು ಮೃತ್ಯು

ಅತಿ ವೇಗವಾಗಿ ಬಂದ ಕಾರೊಂದು ಭಯಾನಕವಾಗಿ ಇನ್ನೊಂದು ಕಾರಿಗೆ ಡಿಕ್ಕಿಯಾಗಿ ಮತ್ತೆ ಮರಕ್ಕೆ ರಭಸದಿಂದ ಗುದ್ದಿದ್ದರಿಂದ ನಾಲ್ವರು ಕಾನೂನು ವಿದ್ಯಾರ್ಥಿಗಳು…

52 mins ago

ಸಮಸ್ಯೆಗಳ ಆಗರ: ಮೂಲಸೌಕರ್ಯಗಳ ಕೊರತೆಗೆ ಬೇಸತ್ತ ಸಾರ್ವಜನಿಕರು

ಪಟ್ಟಣದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯ ಆಡಳಿತದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರಗೊಂಡಿದ್ದಾರೆ. ಪಟ್ಟಣದಲ್ಲಿ ಒಟ್ಟು 27 ವಾರ್ಡ್‌ಗಳು…

1 hour ago