ಮೂಡಿಗೆರೆ: ದೇವರ ಮನೆ ಗುಡ್ಡದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆ

ಮೂಡಿಗೆರೆ: ಪ್ರಸಿದ್ಧ ಪ್ರವಾಸಿ ತಾಣವಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ದೇವರ ಮನೆ ಗುಡ್ಡದ ವ್ಯಾಪ್ತಿಯಲ್ಲಿ ಯುವಕನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಚಾರಣಕ್ಕೆ ಹೆಸರು ವಾಸಿಯಾಗಿರುವ ಸ್ಥಳವಾದ ದೇವರು ಮನೆ ಗುಡ್ಡದ ಸಮೀಪದ ರಸ್ತೆ, ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು ಗುರುತು ಸಿಗದ ಸ್ಥಿತಿಯಲ್ಲಿ ಶವ ದೊರಕಿದೆ.

ಯುವಕರನ್ನು ಕೊಲೆ ಮಾಡಿ ಈ ಸ್ಥಳಕ್ಕೆ ತಂದು ಎಸೆದಿರುವ ಶಂಕೆ ವ್ಯಕ್ತವಾಗಿದ್ದು ಶವವನ್ನು ನೋಡಿದ ಪ್ರವಾಸಿಗರು ಪೊಲೀಸರಿಗೆ ಈ ಸಂಬಂಧ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಮೂಡಿಗೆರೆ ತಾಲೂಕಿನ ಬಣಕಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ. ದಟ್ಟವಾದ ಅರಣ್ಯ ಪ್ರದೇಶವನ್ನು ಹೊಂದಿರುವ ಚಾರ್ಮಾಡಿ ಘಾಟ್ ನ ಸುತ್ತಮುತ್ತಲಿನ ನಿರ್ಜನ ಪ್ರದೇಶಗಳಲ್ಲಿ ಈ ಹಿಂದೆಯೂ ಹಲವಾರು ವ್ಯಕ್ತಿಗಳ ಮೃತದೇಹಗಳು ಪತ್ತೆಯಾಗಿದ್ದವು. ಘಟನಾ ಸಂಬಂಧ ಪರಿಶೀಲನೆ ಆರಂಭಿಸಿರುವ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆಹಾಕಲು ಆರಂಭಿಸಿದ್ದಾರೆ.

Ashika S

Recent Posts

ಎಲ್ಲರೂ ತಪ್ಪದೇ ಮತದಾನ ಮಾಡಿ: ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ

ಮೇ. 6 ಮತ್ತು 7 ರಂದು ಹೆಚ್ಚಿನ ಉಷ್ಣತೆ ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು ಹೆಚ್ಚು ಉಷ್ಣತೆ ಇದೆ…

21 mins ago

ಕಾಂಗ್ರೆಸ್‌ಗೆ ಕುರ್ಚಿ ಸಿಕ್ಕಿದರೆ 50ಕ್ಕೂ ಹೆಚ್ಚು ಮೀಸಲಾತಿ ಖಚಿತ: ರಾಹುಲ್‌ ಗಾಂಧಿ

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದಲಿತ, ಹಿಂದುಳಿದವರು ಮತ್ತು ಬುಡಕಟ್ಟು ಸಮುದಾಯಗಳ ಜನರಿಗೆ ಸಿಗುವ ಮೀಸಲಾತಿಯಲ್ಲಿ ಶೇ.50ಕ್ಕಿಂತ ಅಧಿಕ ಮೀಸಲಾತಿ…

34 mins ago

ಡಾ. ವಿಜಯಲಕ್ಷ್ಮಿ ಸುಬ್ರಹ್ಮಣ್ಯಂ ಅವರಿಗೆ ಡಾ. ವಿ ಪರಮೇಶ್ವರ ಸ್ಮಾರಕ ಪ್ರಶಸ್ತಿ ಪ್ರದಾನ

ಮೇ 1, 2024 ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ, ಗೌರವಾನ್ವಿತ ಡಾ. ವಿ ಪರಮೇಶ್ವರ ಸ್ಮಾರಕ ಸೃಜನಾತ್ಮಕ…

37 mins ago

ಅರ್ಹತೆ ಇಲ್ಲದಿದ್ದರೂ ಕಾಮಗಾರಿ ಗುತ್ತಿಗೆ: ಬಸವರಾಜ ಜಾಬಶೆಟ್ಟಿ ಆರೋಪ

'ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರ ಸೋದರ ಸಂಬಂಧಿ ಜಗದೀಶ ಖೂಬಾ ಅವರಿಗೆ…

47 mins ago

ಜಾನುವಾರುಗಳಿಗೆ ಮೇವು ನೀಡಲು ಸರಕಾರಕ್ಕೆ ಆಗ್ರಹ

ಪ್ರತಿದಿನ ಜಾನುವಾರುಗಳಿಗೆ 6 ಕೆ.ಜಿ ಒಣಮೇವಿನ ಅವಶ್ಯಕತೆ ಇದೆ ಆದರೆ ಸರಕಾರ ಹಸಿರು ಮೇವಿನ ಬೀಜ ನೀಡಿದ್ದೇವೆ ಎಂದು ಹೇಳಿ…

48 mins ago

ದ.ಕ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳ : ಡಾ.ಎಚ್.ಆರ್.ತಿಮ್ಮಯ್ಯ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ 6 ಬೆಡ್, ಪ್ರತಿ…

57 mins ago