News Karnataka Kannada
Monday, April 15 2024
Cricket
ಚಿಕಮಗಳೂರು

ಜುಲೈ ೧ರಿಂದ ಗೃಹ ಜ್ಯೋತಿ ಯೋಜನೆ ಜಾರಿ- ಕೆ.ಜೆ. ಜಾರ್ಜ್

Griha Jyoti Yojana to be implemented from today
Photo Credit : News Kannada

ಚಿಕ್ಕಮಗಳೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ಜುಲೈ ೦೧ ರಿಂದ ಆರಂಭವಾಗಿದೆ ಎಂದು ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಹಳೆಯ ಪ್ರವಾಸಿ ಮಂದಿರದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರ ನೂತನ ಕಛೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಚಿತ ವಿದ್ಯುತ್ ಯೋಜನೆಯು ಇಂದಿನಿಂದ ಅನ್ವಯವಾಗಲಿದೆ. ಈಗಾಗಲೇ, ಜೂನ್‌ನಲ್ಲಿ ಬಳಸಿರುವ ವಿದ್ಯುತ್ ಬಿಲ್ ಜುಲೈನಲ್ಲಿ ಬರಲಿದ್ದು, ಜೂನ್‌ನಲ್ಲಿ ಬಳಸಿದ ವಿದ್ಯುತ್ ಬಿಲ್ಲಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಆ ಬಳಿಕ ಆಗಸ್ಟ್‌ನಲ್ಲಿ ವಾರ್ಷಿಕ ಸರಾಸರಿಯಂತೆ ಆಯಾಆಯಾ ಮನೆಗಳಿಗೆ ನಿಗಧಿಪಡಿಸಿರುವ ಪ್ರಮಾಣದ ವಿದ್ಯುತ್ ಉಚಿತವಿರಲಿದೆ ಎಂದ ಅವರು ಒಂದು ವೇಳೆ ನಿಗಧಿಪಡಿಸಿದ ಯುನಿಟ್‌ಗಿಂತ ಹೆಚ್ಚು ಪ್ರಮಾಣದ ವಿದ್ಯುತ್ ಬಳಸಿದರೆ ಹೆಚ್ಚುವರಿ ಬಳಕೆಯ ಶುಲ್ಕ ಪಾವತಿಸಬೇಕಾಗುತ್ತದೆ. ಉಚಿತ ವಿದ್ಯುತ್ ಪಡೆಯಲು ನೊಂದಾವಣಿಗೆ ಜುಲೈ ೨೫ ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ಜುಲೈ ೨೫ ರೊಳಗೆ ನೊಂದಾಯಿಸಿಕೊಳ್ಳದೆ ಇರುವ ವಿದ್ಯುತ್ ಗ್ರಾಹಕರಿಗೆ ಇನ್ನೂ ಒಂದು ತಿಂಗಳ ಅವಕಾಶ ಕಲ್ಪಿಸಲಾಗುವುದು. ಈಗಾಗಲೇ ೮೫ ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ, ಭಾಗ್ಯ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಹೊಂದಿರುವ ಬಳಕೆದಾರರು ಸಹ ನೊಂದಾಯಿಸಿಕೊಳ್ಳಬೇಕು ನೋಂದಣಿಗೆ ಗ್ರಾಹಕರಿಗೆ ಸಮಸ್ಯೆ ಆಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಶಾಸಕರಾದ ಟಿ.ಡಿ. ರಾಜೇಗೌಡ, ಆನಂದ್, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮುಂತಾದವರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು