ಚಿಕ್ಕಮಗಳೂರು: ಪರಿಸರದ ವಿನಾಶದಿಂದಾಗಿ ಭೂಮಂಡಲದ ತಾಪಮಾನ ಹೆಚ್ಚಳ

ಚಿಕ್ಕಮಗಳೂರು: ಪರಿಸರದ ವಿನಾಶ ದಿಂದಾಗಿ ಭೂಮಂಡಲದ ತಾಪಮಾನ ಹೆಚ್ಚಳವಾಗುತ್ತಿದೆ. ಇದರ ಪರಿಣಾಮವಾಗಿ ಓಜೋನ್ ಪದರ ಕ್ಷೀಣಿಸುತ್ತಿದೆ. ಇದರಿಂದಾಗಿ ಭೂಮಂಡಲದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಪರಿಸರದ ಶಕ್ತಿ ಅಗಾಧವಾದದ್ದು ಮತ್ತು ವಿಶೇಷವಾದದ್ದು, ಇಂತಹ ಅಭೂತಪೂರ್ವ ನಿಸರ್ಗದ ಶಕ್ತಿಯನ್ನು ಕಳೆಗುಂದಿಸಬಾರದು, ಬದಲಾಗಿ ಶಕ್ತಿಯನ್ನು ಇಮ್ಮಡಿಗೊಳಿಸಿ ಮುಂದಿನ ಪೀಳಿಗೆಗೂ ಉತ್ತಮ ಪರಿಸರ ಉಳಿಸುವ ಹೊಣೆಗಾರಿಕೆ ಹಾಗೂ ಕರ್ತವ್ಯದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂಬುದಾಗಿ ತಿಳಿಸಿದರು.

ಎಲ್ಲರೂ ಪರಿಸರ ಸ್ನೇಹಿ ಹವ್ಯಾಸಗಳನ್ನು ರೂಢಿಸಿಕೊಳ್ಳೋಣ. ಮನೆಯಿಂದ ಹೊರಹೋಗುವಾಗ ಒಂದು ಕೈಚೀಲವನ್ನು ತೆಗೆದುಕೊಂಡು ಹೋಗಿ. ಪ್ಲಾಸ್ಟಿಕ್ ಕವರ್ ಪಡೆದುಕೊಳ್ಳಬೇಡಿ. ಕಸವನ್ನು ನಿಗದಿತ ಸ್ಥಳದಲ್ಲಿಯೇ ವಿಲೇ ಮಾಡಿ. ನೀರನ್ನು ಮಿತವಾಗಿ ಬಳಸಿ. ಗಿಡಗಳನ್ನು ನೆಡಲು ಸ್ಥಳೀಯ ಸಂಸ್ಥೆಗಳು ಹೆಚ್ಚಿನ ರೀತಿಯಲ್ಲಿ ಕಾಳಜಿ ವಹಿಸಿ ಪ್ರೋತ್ಸಾಹಿಸಬೇಕು, ಹಾಗೂ ಪರಿಸರದ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಬಿಸಲೆಹಳ್ಳಿ ಸೋಮಶೇಖರ್, ಜಿಲ್ಲಾ ಕಸಾಪ ಸಂಚಾಲಕ ಕೆ. ಎಸ್. ಗುರುವೇಶ್, ಪರಿಸರ ಉಳಿಸುವ ಬಗ್ಗೆ ಮಾತನಾಡಿದರು. ಇಂದಿನ ದಿನವೇ ಪರಿಸರ ಕಾಳಜಿಯ ಬಗ್ಗೆ ಸಂಕಲ್ಪ ಮಾಡಿ ನಾಳೆ ನಿಮ್ಮೆದುರೇ ಉತ್ತಮ ಫಲಿತಾಂಶ ಪಡೆಯಬಹುದು ಎಂದು ತಾಲೂಕು ಕಸಾಪ ಕೋಶಾಧ್ಯಕ್ಷ ಹೆಚ್. ಜಿ. ಈಶ್ವರಪ್ಪ ತಿಳಿಸಿದರು.

ಖಜಾಂಚಿ ಕಳಾವಾಸೆ ರವಿ, ನಗರಘಟಕ ಕಾರ್ಯದರ್ಶಿ ಸಚಿನ್, ಕಸಾಪ ಸಂಚಾಲಕಿ ವೀಣಾ ಅರವಿಂದ್, ವೇದಮೂರ್ತಿ, ಶ್ರೀನಿವಾಸ ಪದ್ಮಾವತಿ, ಶ್ರೀನಿವಾಸಮೂರ್ತಿ, ಅಜ್ಜಂಪುರ ಎಸ್. ಶೃತಿ, ಪೃಥ್ವಿ ಸೂರಿ, ಬೆನೆಡಿಕ್ಟ್ ಜೇಮ್ಸ್ ಹಾಗೂ ಇತರರು ಉಪಸ್ಥಿತರಿದ್ದರು.

Sneha Gowda

Recent Posts

ಕಾಂಗ್ರೆಸ್‌ ಸಚಿವನ ಆಪ್ತನ ಮನೆಗೆ ಇಡಿ ದಾಳಿ : ಕಂತು ಕಂತು ಹಣದ ರಾಶಿ ಜಪ್ತಿ

ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಅಲಂ ಅವರ ಆಪ್ತ ಕಾರ್ಯದರ್ಶಿ ಮನೆಗೆ ಐಡಿ ರೈಡ್‌ ಮಾಡಿದ್ದು 30 ಕೋಟಿ ಅಧಿಕ ಹಣ…

25 mins ago

ಕಾಂಗ್ರೆಸ್‌ ಮುಖಂಡ ಡಾ. ನಾಗರೆಡ್ಡಿ ಪಾಟೀಲ್‌ ನಿಧನ

ಕಲಬುರ್ಗಿ ಜಿಲ್ಲೆಯ ಸೇಡಂ ಮತಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ಮುಖಂಡರಾಗಿದ್ದ ಡಾ. ನಾಗರೆಡ್ಡಿ ಪಾಟೀಲ್‌ (79) ಇಂದು ಬೆಳಗಿನ…

32 mins ago

ಟಿ20 ವಿಶ್ವಕಪ್​ಗೆ ಭಯೋತ್ಪಾದಕರ ಬೆದರಿಕೆ !

ಜೂನ್ 2 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್​ಗೆ ಭಯೋತ್ಪಾದಕರು…

40 mins ago

ಬೆಂಗಳೂರಿನಲ್ಲಿ ಬಿಯರ್ ಕೊರತೆ; ಆಫರ್​​ಗಳಿಗೆ ಬ್ರೇಕ್

ನೀರಿನ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಬೆಂಗಳೂರು ನಗರದಲ್ಲಿ ಶೀಘ್ರದ್ಲಲೇ ಬಿಯರ್​ ಬಿಕ್ಕಟ್ಟು ಕೂಡ ಸೃಷ್ಟಿಯಾಗಬಹುದು ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸಿದೆ.

51 mins ago

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ : ಇಬ್ಬರನ್ನು ಹೊಡೆದು ಕೊಂದ ಜನ

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ  ಯತ್ನಿಸುತ್ತಿದ್ದ ಇಬ್ಬರನ್ನು ಜನರು ಹೊಡೆದು ಕೊಂದಿರುವ ಘಟನೆ ಮೇಘಾಲಯ ದ ಖಾಸಿ ಹಿಲ್ಸ್​ ಜಿಲ್ಲೆಯಲ್ಲಿ…

1 hour ago

ರೇವಣ್ಣ ವಿಡಿಯೋ: ಫೋಟೋ ಹರಿಯಬಿಡುವುದು ಶಿಕ್ಷಾರ್ಹ ಅಪರಾಧ : ಎಸ್ಐಟಿ

ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಹಂಚುವುದು ಶಿಕ್ಷಾರ್ಹ ಅಪರಾಧವಾಗಿದೆ ಎಸ್‌ಐಟಿ ಮುಖ್ಯಸ್ಥ…

2 hours ago