ಚಿಕ್ಕಮಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ – ದೇಶದ ರಾಜಕೀಯ ದಿಕ್ಸೂಚಿ

ಚಿಕ್ಕಮಗಳೂರು: ಕರ್ನಾಟಕ ವಿಧಾನಸಭೆಗೆ ಮೇ.೧೦ ರಂದು ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ದೇಶದ ರಾಜಕೀಯಕ್ಕೆ ದಿಕ್ಸೂಚಿಯಾಗಿದೆ ಎಂದು ಮಾಜಿ ಸಚಿವ ಬಿ.ಬಿ ನಿಂಗಯ್ಯ ಅಭಿಪ್ರಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತ ಪೂರ್ವ ಗೆಲುವು ಸಿಕ್ಕಿದೆ, ನಿಶ್ಚಳ ಬಹುಮತ ಬರುವಂತೆ ಸ್ಥಿರ ಸರಕಾರ ರಚನೆಗೆ ಅನುಕೂಲವಾಗುವಂತೆ ತೀರ್ಪು ನೀಡಿರುವ ರಾಜ್ಯದ ಎಲ್ಲ ಮತದಾ ರರಿಗೆ ಅಭಿನಂದಿಸುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿಯೂ ೫ ವಿಧಾ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಳು ಜಯಗಳಿಸಿದ್ದು, ಕಾಂ ಗ್ರೆಸ್ ಪಕ್ಷದ ಪರವಾಗಿ ಮತ ಹಾಕಿದ ಎಲ್ಲ ಮತ ದಾರರಿಗೆ, ಈ ಗೆಲುವಿಗಾಗಿ ಶ್ರಮಿಸಿದ ಪಕ್ಷದ ರಾಷ್ಟ್ರ, ರಾಜ್ಯ ಮತ್ತು ಜಿಲ್ಲೆಯ ಮುಖಂಡರು, ಕಾರ್ಯ ಕರ್ತರು ಹಾಗೂ ಪ್ರತ್ಯಕ್ಷ, ಪರೋಕ್ಷವಾಗಿ ಬೆಂಬಲಿಸಿ ಸಹಕರಿಸಿದ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಧರ್ಮಾಧಾರಿತ ರಾಜಕಾರಣ ಮಾಡಿದ ಪರಿಣಾಮ ದೇಶದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾ ಯಿತು. ಬೆಲೆ ಏರಿಕೆ, ಭ್ರಷ್ಠಾಚಾರ, ಜನ ವಿರೋಧಿ ನೀತಿಯಿಂದ ಆಡಳಿತ ವಿರೋಧಿ ಅಲೆ ಎದ್ದಿದ್ದು, ಈ ಜನ ವಿರೋಧಿ ಸರಕಾರದ ವಿರುದ್ದ ಕಾಂಗ್ರೆಸ್ ಪಕ್ಷ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದ ರಿಂದ ಈ ಚುನಾವಣೆಯಲ್ಲಿ ಗೆಲುವು ತಂದುಕೊಟ್ಟಿರುವುದು ಕಾಂಗ್ರೆಸ್‌ನ ಹೋರಾಟಕ್ಕೆ ಸಂದ ಜಯ ಎಂದರು.

ಚುನಾವಣೆಯಲ್ಲಿ ಜನ ವಿರೋಧಿ ಅಲೆಯ ಜತೆಗೆ ಕಾಂಗ್ರೆಸ್ ಪಕ್ಷದ ೫ ಗ್ಯಾರಂಟಿ ಯೋಜನೆಗಳು ಪಕ್ಷದ ಗೆಲುವಿಗೆ ಕೈ ಹಿಡಿದಿದ್ದು, ಒಟ್ಟಾರೆಯಾಗಿ ಜನರು ಬಿಜೆಪಿಯ ದುರಾಡಳಿತವನ್ನು ತಿರಸ್ಕರಿಸಿರುವುದರಿಂದ ಈ ಚುನಾವಣೆಯ ಫಲಿತಾಂಶ ದೇಶದ ರಾಜಕೀಯಕ್ಕೆ ದಿಕ್ಸೂ ಚಿಯಾಗಿದೆ ಎಂದು ಅಭಿಪ್ರಾಯ ಪಟ್ಟರು. ತಾವು ಕಾಂಗ್ರೆಸ್ ಪಕ್ಷ ಸೇರಿದ ಹಿನ್ನೆಲೆಯಲ್ಲಿ ತಮ್ಮಿಂದ ಸೋಲಿನ ಕೊರತೆಯನ್ನು ತುಂಬುವಷ್ಟು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದು, ಈ ಬಾರಿಯ ಗೆಲುವಿನಲ್ಲಿ ತಮ್ಮದು ಪ್ರಮುಖ ಪಾತ್ರವಿದೆ ಎಂದು ಹೇಳಿದರು.

ಮೂಡಿಗೆರೆ ಮತದಾರರು ಪ್ರಭುದ್ದ ಮತದಾನ ಮಾಡುವ ಮೂಲಕ ಯುವ ಉತ್ಸಾಹಿ ರಾಜಕಾರಣಿಯಾಗಿರುವ ನಯನಾಮೋಟಮ್ಮ ಅವರನ್ನು ಗೆಲ್ಲಿಸಿದ್ದಾರೆ ಅವರಿಗೆ ತಮ್ಮೆಲ್ಲಾ ಸಲಹೆ ಸಹಕಾರ ನೀಡುವ ಮೂಲಕ ಮೂಡಿಗೆರೆ ಕ್ಷೇತ್ರದ ಅಭಿವೃದ್ಧಿ ಜತೆಗೆ ಈ ಭಾಗದ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸುವುದಾಗಿ ಹೇಳಿದರು.

ಇನ್ನಾದರೂ ಬಿಜೆಪಿಯವರು ಧರ್ಮಾಧಾರಿತ ರಾಜಕಾರಣ ಮಾಡಿ ಜನರ ಮನಸ್ಸನ್ನು ಒಡೆಯುವ ಬದಲು ಜನಪರವಾಗಿ ಕೆಲಸ ಮಾಡಿ ಒಳ್ಳೆಯ ವಿರೋಧ ಪಕ್ಷವಾಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು. ಕಾಂಗ್ರೆಸ್ ಮುಖಂಡರಾದ ಲಕ್ಷ್ಮಣ್, ಜಗದೀಶಾ ಚಾರ್, ಸತೀಶ್, ಪುಟ್ಟಸ್ವಾಮಿ ಮತ್ತಿತರರಿದ್ದರು.

Ashika S

Recent Posts

ಸ್ಟೇರಿಂಗ್‌ ಕಟ್ ಆಗಿ ಗದ್ದೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್‌ : 30 ಪ್ರಯಾಣಿಕರಿಗೆ ಗಾಯ

ಕೆಎಸ್‌ಆರ್‌ಟಿಸಿ ಬಸ್‌ವೊಂದರ ಸ್ಟೇರಿಂಗ್‌ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ…

2 seconds ago

ಬೆಂಗಳೂರು ಮೆಟ್ರೋದಲ್ಲಿ ರೋಮ್ಯಾನ್ಸ್; ವಿಡಿಯೋ ವೈರಲ್

ದೆಹಲಿಯ ಮೆಟ್ರೋ ದಲ್ಲಿ ರೊಮ್ಯಾನ್ಸ್ ನಡೆಸುವ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿದ್ದವು. ಆದರೆ ಇದೀಗ ಬೆಂಗಳೂರಿನಲ್ಲೂ ಇದೇ ಚಾಳಿ ಪ್ರಾರಂಭವಾಗಿದ್ದು,…

7 mins ago

ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ್ಯು

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನ ಎನ್‌ಆರ್ ಪುರ ತಾಲೂಕಿನ ಕರಗುಂದ ಗ್ರಾಮದ ಬಳಿ…

13 mins ago

ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 4.40 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ

ಅಕ್ರಮವಾಗಿ ಸಾರಾಯಿ ಸಾಗಿಸುತ್ತಿದ್ದ ವೇಳೆ ಅಬಕಾರಿ ಇಲಾಖೆಯಿಂದ ಭರ್ಜರಿ ಕಾರ್ಯಚರಣೆ ನಡೆಸಿದ್ದು, ಮತದಾರರಿಗೆ ಹಂಚಲು ತಂದಿದ್ದ 4.40 ಲಕ್ಷ ರೂಪಾಯಿ…

29 mins ago

ಚಾಲಕನ ನಿಯಂತ್ರಣ ತಪ್ಪಿ ಇಂಡಿಕಾ ಕಾರು ಪಲ್ಟಿ: ಇಬ್ಬರು ವೃದ್ಧರು ಮೃತ್ಯು

ಚಾಲಕನ ನಿಯಂತ್ರಣ ತಪ್ಪಿ ಇಂಡಿಕಾ ಕಾರು ಚರಂಡಿಗೆ ಪಲ್ಟಿಯಾಗಿ, ಡಿಕ್ಕಿ ರಭಸಕ್ಕೆ ಕಾರು ಛಿದ್ರವಾಗಿದ್ದು, ಕಾರಿನಲ್ಲಿದ್ದ ಇಬ್ಬರು ವೃದ್ಧರು ಸ್ಥಳದಲ್ಲೇ…

43 mins ago

ಆರ್​ಸಿಬಿ ಮುಂದಿದೆ ಬಿಗ್ ಟಾರ್ಗೆಟ್; ಫ್ಯಾನ್ಸ್ ನಿಂದ ಕ್ಯಾಲ್ಕುಲೇಟರ್​ ಹಿಡಿದು ಲೆಕ್ಕಾಚಾರ

ಸೋತು ಸುಣ್ಣವಾಗಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕ್ಯಾಂಪ್​ ಇದೀಗ ಫುಲ್​ ಜೋಶ್​ನಲ್ಲಿದೆ. ಹ್ಯಾಟ್ರಿಕ್​ ಗೆಲುವಿನಿಂದ ತಂಡದಲ್ಲಿ ಹೊಸ ಹುರುಪು ಬಂದಿದೆ.…

44 mins ago