ಚಿಕ್ಕಮಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ಉದ್ಯೋಗ ಭದ್ರತೆ, ಮಾಸಿಕ ಪಿಂಚಣಿ, ಪಿಎಫ್, ಇಎಸ್‌ಐ ಸೌಲಭ್ಯ, ವಾರ್ಷಿಕ ರಜೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ಕಾರ್ಯ ಕರ್ತರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.

ಎಐಟಿಯುಸಿ ನೇತೃತ್ವದಲ್ಲಿ ನಗರದ ಹನುಮಂತಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ನೂರಾರು ಬಿಸಿಯೂಟ ಕಾರ್ಯಕರ್ತರು ಎಂಜಿ ರಸ್ತೆ ಮೂಲಕ ಆಜಾದ್ ಪಾರ್ಕ್ ತಲುಪಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರು ಮಾತನಾಡಿ, ರಾಜ್ಯದ ೧.೨೦ ಲಕ್ಷ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ಬಡಿಸುತ್ತಿರುವ ಕಾರ್ಯಕರ್ತರನ್ನು ಕಳೆದ ೨೦ ವರ್ಷದಿಂದ ಯಾವುದೇ ಉದ್ಯೋಗ ಭದ್ರತೆ ನೀಡದೆ ಸರಕಾರ ದುಡಿಸಿಕೊಳ್ಳುತ್ತಿದೆ ಎಂದು ದೂರಿದರು.

೬೦ ವರ್ಷ ತುಂಬಿದ ಕಾರ್ಯಕರ್ತರನ್ನು ಏಕಾಏಕಿ ನಿವೃತ್ತಿ ನೆಪ ಹೇಳಿ ಹೊರದಬ್ಬಲಾಗುತ್ತಿದೆ. ಮಾಸಿಕ ಪಿಂಚಣಿ ಇಲ್ಲ, ವೈದ್ಯಕೀಯ ಸೌಲಭ್ಯಗಳಿಲ್ಲ, ಪಿಎಫ್, ಇಎಸ್‌ಐ ಹೀಗೇ ಯಾವುದೇ ಸೌಲಭ್ಯಗಳಿಲ್ಲದ ಅವರು ವೃದ್ಧಾಪ್ಯದಲ್ಲಿ ಬೀದಿಗೆ ಬೀಳುವಂತಾಗಿದೆ ಎಂದರು.

೬೦ ವರ್ಷ ತುಂಬಿದ ಕಾರ್ಯಕರ್ತರಿಗೆ ನಿವೃತ್ತಿ ಉಪಧನ ನೀಡಿ ಪಿಂಚಣಿ ನೀಡಬೇಕು. ಇಎಸ್‌ಐ ವ್ಯಾಪ್ತಿಗೆ ತರಬೇಕು, ಪಿಎಫ್ ಜಾರಿಗೆ ತರಬೇಕು. ಕನಿಷ್ಠ ವೇತನದಡಿ ಅವರನ್ನು ತರಬೇಕು. ಮಾಸಿಕ ೩ ರಜೆ ನೀಡಬೇಕು. ಉದ್ಯೋಗ ಭದ್ರತೆ, ವಿಮೆ ಯೋಜನೆ, ತಮಿಳುನಾಡು ಮಾದರಿಯಲ್ಲಿ ವೇತನ ಶ್ರೇಣಿ ನಿಗಧಿ ಪಡಿಸಬೇಕು ಎಂದು ಆಗ್ರಹಿಸಿದರು.

ಎಐಟಿಯುಸಿ ಅಧ್ಯಕ್ಷ ಜಿ.ರಘು ಮಾತನಾಡಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಧಿಕಾರ ಪಡೆದಿದ್ದು, ಬಿಸಿ ಯೂಟ ಕಾರ್ಯಕರ್ತರಿಗೆ ಸೌಲಭ್ಯ ಕಲ್ಪಿಸಿಕೊಡುವಲ್ಲಿ ವಿಫಲವಾಗಿವೆ. ಆಡಳಿತ ಪಕ್ಷ ಉತ್ಸವಗಳ ಹೆಸರಿನಲ್ಲಿ ಕೋಟ್ಯಂತರ ರೂ. ವ್ಯಯ ಮಾಡುತ್ತಿದ್ದು, ಇದನ್ನು ಪ್ರಶ್ನಿಸಬೇಕಾದ ಪ್ರತಿ ಪಕ್ಷಗಳು ಸತ್ತು ಹೋಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನ ಕಾರ್ಯದರ್ಶಿ ಎಸ್.ವಿಜಯಕುಮಾರ್ ಮಾತನಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ನೀಡುವ ವೇತನದಲ್ಲಿ ಕೇಂದ್ರ ಸರಕಾರ ಶೇ.೬೦ರಷ್ಟು, ರಾಜ್ಯ ಸರಕಾರ ಶೇ.೪೦ರಷ್ಟು ಅನುದಾನ ನೀಡಬೇಕಿದೆ. ಆದರೆ, ಕೇಂದ್ರ ಸರಕಾರ ತನ್ನ ಪಾಲಿನ ಶೇ.೬೦ರಷ್ಟು ಅನುದಾನವನ್ನು ೧೦ವರ್ಷದಿಂದ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಫೆಡರೇಶನ್ ತಾಲೂಕು ಅಧ್ಯಕ್ಷೆ ಇಂಧುಮತಿ, ಕಡೂರು ಪುಷ್ಪ ಆಯಾ ತಾಲೂಕಿನ ಅಧ್ಯಕ್ಷರು ಉಪಸ್ಥಿತರಿದ್ದರು.

Gayathri SG

Recent Posts

ಕುಡಿಯುವ ನೀರಿನ ಸಮಸ್ಯೆ ನಿವಾರಣೆ: ಮಲಪ್ರಭಾ ಕಾಲುವೆಗೆ ಮೇ 14 ರಿಂದ 23 ರವರೆಗೆ ನೀರು

ಮೇ 14 ರಿಂದ 23 ರವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹಾಗೂ ನರಗುಂದ ಶಾಖಾ ಕಾಲುವೆ ಮೂಲಕ ನವಲಗುಂದ ಅಣ್ಣಿಗೇರಿ,…

50 seconds ago

ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕ ಪ್ರಶಾಂತ್‌ ಮಾಕನೂರು ಬಂಧನ

ಎಸ್‌ಸಿ, ಎಸ್‌ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಬಿಜೆಪಿ ತನ್ನ ಎಕ್ಸ್‌ ಖಾತೆಯನ್ನು ವಿಡಿಯೋ ಜಾಹೀರಾತು ಪ್ರಕಟಿಸಿತ್ತು. ಈ ವಿಡಿಯೋ…

16 mins ago

ರೀಲ್ಸ್ ಸ್ಟಾರ್ ಗೀತಾಶ್ರೀ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಗೊರವಿಕಲ್ಲು ಬಡಾವಣೆಯ ಶಿಕ್ಷಕಿ, ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಸ್ಟಾರ್ ಎನಿಸಿದ್ದ ಗೀತಾಶ್ರೀ ಶವ ಅವರ ಮನೆಯಲ್ಲೇ…

33 mins ago

ಚುನಾವಣಾ ಪ್ರಚಾರದ ಹಕ್ಕು “ಮೂಲಭೂತವಲ್ಲ”: ಕೇಜ್ರಿವಾಲ್ ಜಾಮೀನಿಗೆ ಇಡಿ ಆಕ್ಷೇಪ

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವುದಕ್ಕೆ ಜಾರಿ ನಿರ್ದೇಶನಾಲಯ ಗುರುವಾರ ವಿರೋಧಿಸಿದೆ.

46 mins ago

ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯ ಮನೆಯಲ್ಲಿ ಅತಿಥಿ ಉಪನ್ಯಾಸಕಿಯೂಬ್ಬರು ನೇಣುಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

2 hours ago

ಎಚ್​.ಡಿ. ರೇವಣ್ಣಗೆ ಇನ್ನೂ ಮೂರು ದಿನ ಜೈಲೇ ಗತಿ!

 ಲೈಂಗಿಕ ಹಗರಣ ಆರೋಪದಲ್ಲಿ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್​ ಕೇಸ್​ನಲ್ಲಿ ಬಂಧಿತರಾಗಿರುವ ಮಾಜಿ ಶಾಸಕ ಎಚ್.ಡಿ. ರೇವಣ್ಣ ಅವರ ಜಾಮೀನು ವಿಚಾರಣೆ…

2 hours ago