ಚಿಕ್ಕಮಗಳೂರು: ಬಿಜೆಪಿ ದುರಾಡಳಿತದ ವನವಾಸ ಮುಗಿಸಿದ ಜನತೆ- ಅಕ್ಮಲ್

ಚಿಕ್ಕಮಗಳೂರು: ರಾವಣನಿಂದ ಸೀತೆ ವನವಾಸ ಮುಗಿಸಿದಂತೆ, ಕ್ಷೇತ್ರದ ಜನತೆ ಇಪ್ಪತ್ತು ವರ್ಷಗಳ ಬಿಜೆಪಿ ಸರ್ಕಾರದ ದುರಾಡಳಿತ ವನವಾಸವನ್ನು ಮುಗಿಸಿ ಸದೃಢ ಕಾಂಗ್ರೆಸ್ ಸರ್ಕಾರ ರಚನೆಗೆ ನ್ಯಾಯಸಮ್ಮತವಾಗಿ ಬೆಂಬಲಿಸಿರುವುದು ಅತ್ಯಂತ ಖುಷಿಯ ಸಂಗತಿ ಎಂದು ಕಾಂಗ್ರೆಸ್ ಕಿಸಾನ್ ಸೆಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಹೇಳಿದರು.

ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಪ್ರಥಮ ಬಾರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಪ್ರಯುಕ್ತ ನಗರದ ಷರೀಪ್‌ಗಲ್ಲಿಯಲಿ ನಿವಾಸಿಗಳಿಗೆ ಉಚಿತ ದಿನಸಿ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು.

ಕ್ಷೇತ್ರ ಸೇರಿದಂತೆ ವಿವಿದೆಡೆ ಧರ್ಮ ಒಡೆಯುವ ಕೆಲಸ ಮಾಡುವವರ ಗತಿ ಏನೆಂಬುದನ್ನು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಜನತೆ ಮಾಜಿ ಶಾಸಕರಿಗೆ ಸ್ಪಷ್ಟವಾಗಿ ತೋರ್ಪಡಿಸಿದ್ದಾರೆ. ಜೊತೆಗೆ ಕ್ಷೇತ್ರ ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸುವ ಮೂಲಕ ಬಹುಮತದೊಂದಿಗೆ ಅಧಿಕಾರ ನೀಡಿರುವುದು ಖುಷಿಯ ಸಂಗತಿ ಎಂದು ತಿಳಿಸಿದರು.

ಕೇವಲ ರಂಜಾನ್ ತಿಂಗಳಲ್ಲಿ ಮಾತ್ರ ಜನಸಾಮಾನ್ಯರಿಗೆ ದಿನಸಿ ಕಿಟ್‌ನ್ನು ವಿತರಿಸದೇ ಎಲ್ಲಾ ಸಮಯದಲ್ಲೂ ಸ್ವಲ್ಪಮಟ್ಟಿನ ಸಹಾಯವನ್ನು ಮಾಡಲಾಗುತ್ತಿದೆ. ಇದರಿಂದ ಸಂಕಷ್ಟದಲ್ಲಿರುವ ಕೆಲವರಿಗೆ ಸಹಾಯವಾಗಲಿದೆ ಎಂದ ಅವರು ಕಾಂಗ್ರೆಸ್ ಪ್ರಮಾಣ ವಚನ ಪೂರೈಸಿದ ನಂತರ ಪ್ರಣಾಳಿಕೆಯಲ್ಲಿ ನೀಡಿದಂತಹ ಎಲ್ಲಾ ಯೋಜ ನೆಗಳನ್ನು ನೀಡುವ ಮೂಲಕ ಸ್ಪಂದಿಸುವ ಕಾರ್ಯದಲ್ಲಿ ತೊಡಗಲಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಮಹಾಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಹಣವನ್ನು ಕೂಡಿಟ್ಟರೇ ಯಾವುದೇ ಪ್ರಯೋಜನವಾಗುವುದಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ಜನತೆಗೆ ಕೈಲಾದ ಮಟ್ಟಿಗೆ ಸಹಾಯ ಮಾಡ ಬೇಕು. ಆ ಸಾಲಿನಲ್ಲಿ ಸಿ.ಎನ್.ಅಕ್ಮಲ್ ಅವರು ಮೇಲುಗೈ ಸಾಧಿಸಿದ್ದಾರೆ. ಕೇವಲ ಹಬ್ಬಗಳಲ್ಲಿ ಮಾತ್ರ ದಿನಸಿ ವಿತರಿ ಸದೇ ವರ್ಷದ ೧೨ ತಿಂಗಳಲ್ಲೂ ಕಿಟ್ ವಿತರಿಸಿ ಸಹಾಯಹಸ್ತ ಕಲ್ಪಿಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರಾಜ್ಯದ ಯಾವೊಬ್ಬ ವ್ಯಕ್ತಿಯು ಹಸಿನಿಂದ ಸಾಯಬಾರದೆಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ಮಹತ್ತರ ವಾದ ನಿಲುವನ್ನು ಕೈಗೊಂಡಿದ್ದರು. ಈ ಯೋಜನೆಯಿಂದ ಲಕ್ಷಗಟ್ಟಲೇ ಮಂದಿ ಉಚಿತವಾಗಿ ಅಕ್ಕಿ ಪಡೆಯುವ ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರದ ಮಾಜಿ ಜನಪ್ರತಿನಿಧಿಗಳು, ಹಿರಿಯ ಮುತ್ಸದಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಮನಬಂದಂತೆ ಮಾತನಾಡಿರುವ ಪರಿಣಾಮದಿಂದ ಜನತೆ ಬೇಸತ್ತು ಬದಲಾವಣೆ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದಾರೆ. ಮುಂದಿನ ದಿನಗಳಲ್ಲಾದರೂ ಯಾವುದೇ ವ್ಯಕ್ತಿಯ ಬಗ್ಗೆ ಮಾತನಾಡುವ ಮುನ್ನ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅತೀಕ್ ಖೈಸರ್ ಮಾತನಾಡಿ ಸಾರ್ವಜನಿಕರಿಗೆ ಉಚಿತವಾಗಿ ನೀಡುವ ದಿನಸಿ ಗಳನ್ನು ಅಕ್ಮಲ್ ಅವರು ತಮ್ಮ ವೈಯಕ್ತಿಕವಾಗಿ ವ್ಯಯಿಸಿ ಅನುಕೂಲ ಕಲ್ಪಿಸುತ್ತಿದ್ದು ಇವರ ಸಮಾಜ ಸೇವೆಯ ಗುಣವನ್ನು ಇಂದಿನ ಯುವಪೀಳಿಗೆ ಜೀವನದಲ್ಲಿ ಅಳವಡಿಕೊಂಡು ಕೈಲಾದ ಮಟ್ಟಿಗೆ ಬಡವರಿಗೆ ಸಹಾಯಹಸ್ತ ಚಾಚಬೇಕು ಎಂದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಗೌಸಿಯಾ ಖಾನಂ, ಸಲ್ಮಾ ಸುಹೀಲ್, ಅಕ್ಮಲ್ ತಾಯಿ ಸಂಶಾದ್, ನೂರಾನಿ ನೌಜವಾನ್ ಚಾರಿಟೇಬಲ್ ಅಧ್ಯಕ್ಷ ನೂರ್‌ಅಹ್ಮದ್, ಮುಖಂಡರುಗಳಾದ ರಸೂಲ್‌ಖಾನ್, ರಿಜ್ವಾನ್, ಸಾದಿಕ್ ಮತ್ತಿತರರು ಉಪಸ್ಥಿತರಿದ್ದರು.

Gayathri SG

Recent Posts

ಅಂಜಲಿ ಹತ್ಯೆ ಪ್ರಕರಣ : ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ ಚೇತರಿಕೆ

ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಸಹೋದರಿಯ ಹತ್ಯೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಯಶೋದಾ…

10 mins ago

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ : ಬಿಜೆಪಿ ಮಾಜಿ ಸರಪಂಚ್ ಸಾವು

ಜಮ್ಮು-ಕಾಶ್ಮೀರದಲ್ಲಿ ಇನ್ನು ಎರಡು ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ನಿನ್ನೆ ಶನಿವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ…

21 mins ago

ವಿಮಾನ ಇಂಜಿನ್‌ನಲ್ಲಿ ಬೆಂಕಿ : ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

ಬೆಂಗಳೂರಿನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ಏರ್‌ ಇಂಡಿಯಾ ಎಕ್ಸಪ್ರೆಸ್‌ ವಿಮಾನವು ಶನಿವಾರ ತಡರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಿದೆ.…

28 mins ago

ಸಿಂಗಾಪುರದಲ್ಲಿ ಹೆಚ್ಚುತ್ತಿರುವ ಕೊರೊನಾ ಅಲೆ ಭೀತಿ : ಮಾಸ್ಕ್‌ ಧರಿಸುವಂತೆ ಆದೇಶ

ಸಿಂಗಾಪುರದಲ್ಲಿ ಕೊರೊನಾ ಸೋಂಕಿನ ಹೊಸ ಅಲೆ ಭೀತಿ ಎದುರಾಗಿದ್ದು, ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಜನರಿಗೆ ಮಾಸ್ಕ್‌…

31 mins ago

ಸುರತ್ಕಲ್: ಶಬರಿಮಲೆ ಹದಿನೆಂಟು ಮೆಟ್ಟಿಲು ಹತ್ತುವ ವೇಳೆ ಹೃದಯಾಘಾತ !

ಮಗನ ಹೆಸರಲ್ಲಿ ಹೇಳಿಕೊಂಡಿದ್ದ ಹರಕೆ ತೀರಿಸಲು ಶಬರಿಮಲೆಗೆ ತೆರಳಿದ್ದ ಸುರತ್ಕಲ್ ಕಾಟಿಪಳ್ಳ ನಿವಾಸಿ ಸಂದೀಪ್‌ ಶೆಟ್ಟಿ (37) ಅವರು ಹೃದಯಾಘಾತದಿಂದ…

42 mins ago

ಸಿಎಂ ಸಿದ್ದು ತವರು ಕ್ಷೇತ್ರದಲ್ಲಿ ವಾಂತಿ-ಬೇದಿಯಿಂದ ತತ್ತರಿಸಿದ ಗ್ರಾಮಸ್ಥರು ..!

ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿರುವ ಜನರಿಗೆ ತಂಪೆರೆಯುವ ಸಲುವಾಗಿ ಕಳೆದ ಒಂದು ವಾರಗಳಿಂದ ಮಳೆಯು ಧಾರಾಕಾರವಾಗಿ ಸುರಿಯುತ್ತಿದೆ ಇಂತಹ ಸಂದರ್ಭದಲ್ಲಿ ರಾಜ್ಯದ…

51 mins ago