News Karnataka Kannada
Thursday, April 18 2024
Cricket
ಚಿಕಮಗಳೂರು

ಚಿಕ್ಕಮಗಳೂರು: ಕಾನನದೊಳಗೆ ಆಫ್ ರೋಡಿಂಗ್ ಈವೆಂಟ್ ಗಳಿಗೆ ವಿರೋಧ

Chikkamagaluru: Opposition to off-roading events inside the forest
Photo Credit : News Kannada

ಚಿಕ್ಕಮಗಳೂರು: ಜಿಲ್ಲೆಯ ಕಾನನದ ಒಳಗೆ ‘ಆಫ್ ರೋಡಿಂಗ್ ಈವೆಂಟ್ಗಳು ಹೆಚ್ಚಾ ಗುತ್ತಿದ್ದು, ವನ್ಯಪ್ರಾಣಿಗಳ ನಿರಾತಂಕ ಬದುಕಿಗೆ ಇದು ಕಂಟಕಪ್ರಾಯ ವಾಗುತ್ತಿದೆ ಎಂದು ವನ್ಯಜೀವಿ ಕ್ರಿಯಾ ತಂಡ ಆರೋಪಿಸಿದೆ.

ಭದ್ರಾ ವೈಲ್ಡ್‌ಲೈಫ್ ಕನ್ಸರ್ವೇಶನ್ ಟ್ರಸ್ಟ್‌ನ ಡಿ.ವಿ.ಗಿರೀಶ್, ರಾಜ್ಯ ವನ್ಯ ಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ, ವೈಲ್ಡ್ ಕ್ಯಾಟ್-ಸಿ.ನ ಶ್ರೀದೇವ್ ಹುಲಿಕೆರೆ ಪತ್ರಿಕಾ ಹೇಳಿಕೆ ಯಲ್ಲಿ ಆರೋಪಿಸಿದ್ದಾರೆ.

ಹಿಂದೆ ಖಾಸಗಿ ರಸ್ತೆ ಹಾಗೂ ಖಾಸಗಿ ಭೂಮಿಯಲ್ಲಿ ಮಾತ್ರ ನಡೆಯುತ್ತಿದ್ದ ಈ ವಾಹನ ಚಟುವಟಿಕೆ ಇತ್ತೀಚೆಗೆ ಮೋಜು-ಮಸ್ತಿಯಾಗಿ ಮಾರ್ಪಟ್ಟು ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಕೊಪ್ಪ, ಬಾಳೆಹೊನ್ನೂರು, ಚಿಕ್ಕಮಗಳೂರಿನ ಹಲವು ಅರಣ್ಯಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ.

ಈ ಕ್ರೀಡೆಗೆ ಜಿಪ್ಸಿ ಮತ್ತು ಜೀಪ್ ಗಳನ್ನು ಅದರ ಮೂಲರೂಪವನ್ನು ಮಾರ್ಪಾಡು ಮಾಡಿ, ಮಾಮೂಲು ಚಕ್ರಗಳನ್ನು ಬದಲಿಸಿ, ಬೃಹತ್ ಚಕ್ರಗಳ ನ್ನು ಅಳವಡಿಸಿ ಅರಣ್ಯ ಪ್ರದೇಶದೊಳಗೆ ವಾಹನ ಚಾಲನೆ ಮಾಡುತ್ತಾ ಸಂತೋ ಷಪಡುವ ಈ ಚಟುವಟಿಕೆ ನಿಸರ್ಗದ ಶಾಂತತೆಯನ್ನೇ ಕದಡುತ್ತಿದೆ.

ವಾಹನವೊಂದರ ಮೂಲ ರೂಪವನ್ನು ಯಾರೂ ಸಹ ತಮಗಿಷ್ಟ ಬಂದಂತೆ ಪ್ರಾದೇಶಿಕ ಸಾರಿಗೆ ಇಲಾಖೆ ಯ ಅನುಮತಿ ಇಲ್ಲದೆ ಬದಲಿಸಿ ಓಡಿ ಸುವ ಹಾಗಿಲ್ಲ; ಆದರೆ ಯಾವುದೇ ರೀತಿ ಅನುಮತಿ ಪಡೆಯದೆ ಕಾನೂನು ಉಲ್ಲಂಘಿಸಿ ಆಫ್ ರೋಡಿಂಗ್ ಆಟವನ್ನು ನಡೆಸಲಾಗುತ್ತಿದೆ. ಈ ಕ್ರೀಡೆ ಯನ್ನು ಪುಕ್ಕಟೆಯಾಗಿ ನಡೆಸುವುದಿಲ್ಲ. ಭಾಗವಹಿಸುವ ವಾಹನಕ್ಕೆ ಪ್ರತೀ ವ್ಯಕ್ತಿಗೆ ೧೦ ಸಾವಿರ ರೂ.ವರೆಗೂ ಶುಲ್ಕವನ್ನು ವಿಧಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಮೊದಲು ಖಾಸಗಿ ತೋಟಗಳಿಗೆ ಸೀಮಿತವಾಗಿದ್ದ ಈ ಕ್ರೀಡೆ ಈಗ ಸರ್ಕಾರಿ ಅರಣ್ಯಗಳಿಗೂ ವಿಸ್ತಾರಗೊಂ ಡಿದ್ದು, ಒಮ್ಮೆ ಅರಣ್ಯ ಹೊಕ್ಕ ವಾಹ ನಗಳು ಅತೀಯಾಗಿ ಶಬ್ದ ಮಾಡುತ್ತಾ ಅರಣ್ಯದೊಳಗೆ ಎರ್ರಾಬಿರಿ ಓಡಾಡು ತ್ತವೆ. ಆ ಫಲಭರಿತ ಮಣ್ಣು ಸಹ ಮೇ ಲೇಳುತ್ತದೆಯಲ್ಲದೆ, ನೀರಿನ ಮೂಲ ಗಳಲ್ಲೂ ವಾಹನಗಳು ಸಾಗುವುದರಿಂದ ಅದರಲ್ಲಿರುವ ಜಲಚರಗಳಿಗೂ ಅಪಾಯ ತರುತ್ತಿದೆ.

ಕಾಡಿನಲ್ಲಿರುವ ವನ್ಯಪ್ರಾಣಿಗಳ ನಿರಾತಂಕ ಬದುಕಿಗಂತೂ ಈ ಕ್ರೀಡೆ ತೀವ್ರ ಆತಂಕಕಾರಿಯಾಗಿದ್ದು, ಅನೇಕ ವೇಳೆ ಈ ಕ್ರೀಡೆಯ ಆರಂಭೋತ್ಸವಕ್ಕೆ ರಾಜಕೀಯ ಪ್ರಮುಖರನ್ನು ಕರೆಸಿ ಆ ಮೂಲಕ ಅಧಿಕಾರಿಗಳು ಕಾಡಿನಲ್ಲಿ ಈ ಕ್ರೀಡೆ ನಡೆಸದಂತೆ ನಿರ್ಬಂಧ ವಿಧಿ ಸಲು ಮುಂದಾಗದಂತೆ ನೋಡಿಕೊಳ್ಳಲಾಗುತ್ತಿದೆ.

ಈ ವಾಹನ ಓಡಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಅರಣ್ಯ ಪ್ರದೇಶದಲ್ಲಿ ಈ ಕ್ರೀಡೆ ನಡೆಯುತ್ತಿದ್ದರೂ ಅದನ್ನು ನೋಡಿಯೂ ನೋಡದಂತಿರುವ ಪರಿಸ್ಥಿತಿ ಉದ್ಭವಿಸಿದೆ.

ಕಾನೂನಿನಂತೆ ಸೂಕ್ತ ಅನುಮತಿಯನ್ನು ಪಡೆದು ಖಾಸಗಿ ಪ್ರದೇಶಗಳಲ್ಲಿ ಮಾತ್ರ ಈ ಕ್ರೀಡೆಯನ್ನು ನಡೆಸಲು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ.

ಈ ಕ್ರೀಡೆಗೆ ಬಳಸುವ ವಾಹನ ಗಳನ್ನು ಅದಕ್ಕೆ ಸೂಕ್ತವಾಗುವಂತೆ ಮಾರ್ಪಡಿಸುತ್ತಿರುವುದರ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಗಮನ ಹರಿಸಿ ಕಾನೂನಿನಂತೆ ಕ್ರಮ ಕೈಗೊಳ್ಳಬೇಕು. ಈ ಜಿಲ್ಲೆ ವನ್ಯಪ್ರಾಣಿಗಳ ಆವಾಸ ಸ್ಥಾನವೂ ಆಗಿರುವುದರಿಂದ ಅರಣ್ಯಗಳಲ್ಲಿ ಈ ಕ್ರೀಡೆಯನ್ನು ನಡೆಸ ದಂತೆ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು