News Karnataka Kannada
Saturday, April 20 2024
Cricket
ಚಿಕಮಗಳೂರು

ಚಿಕ್ಕಮಗಳೂರು: ಮಳೆ ಕೊರತೆ ಕಾಫಿಗೆ ಕಾಂಡ ಕೊರಕದ ಭೀತಿ

Chikkamagaluru: Lack of rain threatens coffee
Photo Credit : News Kannada

ಚಿಕ್ಕಮಗಳೂರು: ಮುಂಗಾರು ಆಗಮನ ವಿಳಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆ ಕಾಫಿಗೆ ಕಾಂಡಕೊರಕದ ಭೀತಿ ಆವರಿಸಿದ್ದು, ಬೆಳೆಗಾರರು ಚಿಂತಾ ಕ್ರಾಂತರಾಗಿದ್ದಾರೆ.

ಮಳೆ ಕೊರತೆಯಿಂದಾಗಿ ತೋಟಗಳಲ್ಲಿ ತೇವಾಂಶ ಕಡಿಮೆಯಾದಂತೆ ಕಾಂಡ ಕೊರಕ ಕೀಟಗಳು ಸಕ್ರೀಯ ವಾಗುತ್ತವೆ. ಕಾಫಿಗಿಡದ ಕಾಂಡಗಳನ್ನು ಕೊರೆದು ಮೊಟ್ಟೆ ಇಟ್ಟು ಮರಿ ಮಾಡಲಾರಂಭಿಸುತ್ತವೆ. ಜೂನ್ ಮಾಹೆ ಪೂರ್ತಿ ಮಲೆನಾಡಿನಲ್ಲಿ ಸರಿಯಾದ ಹದ ಮಳೆ ಆಗದಿರುವ ಹಿನ್ನೆಲೆಯಲ್ಲಿ ಈಗಾಗಲೇ ಅಲ್ಲಲ್ಲಿ ಕಾಂಡ ಕೊರಕಗಳು ಕಾಣಿಸಿಕೊಳ್ಳಲಾರಂಭಿಸಿವೆ.

ರಾಜ್ಯದ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಚಿಕ್ಕಮಗಳೂರು ತಾಲ್ಲೂಕಿನ ಗಿರಿತಪ್ಪಲಿನಲ್ಲಿ ಈ ವರ್ಷ ಮಳೆ ಪ್ರಮಾಣ ತೀವ್ರ ಪ್ರಮಾಣದಲ್ಲಿ ಕುಸಿದಿದೆ. ೨೦೨೨ ರಲ್ಲಿ ಜನವರಿಯಿಂದ ಜೂನ್ ೧೫ ರ ವೇಳೆಗೆ ಒಟ್ಟು ೩೪.೩೦ ಇಂಚಿನಷ್ಟು ಮಳೆ ಸುರಿದಿತ್ತು. ಆದರೆ ಈ ವರ್ಷ ಇದೇ ಅವಧಿಯಲ್ಲಿ ಅರ್ಧಕ್ಕಿಂತ ಕಡಿಮೆ ಅಂದರೆ ಕೇವಲ ೧೪.೨೮ ಇಂಚು ಮಳೆಯಾಗಿದೆ.

ಅಲ್ಲದೆ ಈ ವರ್ಷ ಸೂರ್ಯ ಕಿರಣಗಳ ಪ್ರಖರತೆಯೂ ಹೆಚ್ಚಾಗಿರುವ ಕಾರಣ ಗಿರಿ ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ವರ್ಷಾರಂಭದಿಂದ ಈ ವರೆಗೆ ಒಣಹವೆಯೇ ಮುಂದುವರಿದಿರುವುದು ಬೋರರ್‌ಗಳು ಸಕ್ರೀಯಗೊಳ್ಳಲು ಪೂರಕ ವಾತಾವರಣ ಸೃಷ್ಠಿಸಿದೆ.

ಇದಲ್ಲದೆ ಕಳೆದ ಮೂರ್‍ನಾಲ್ಕು ವರ್ಷಗಳ ಕಾಲ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ಇದೇ ನಿರೀಕ್ಷೆಯಲ್ಲಿದ್ದ ಬೆಳೆಗಾರರು ತೋಟದಲ್ಲಿ ವ್ಯಾಪಕವಾಗಿ ಮರಗಸಿ ಮಾಡಿಸಿದ್ದಾರೆ. ಇದರಿಂದ ನೆರಳು ಇಲ್ಲದಂತಾಗಿದ್ದು, ನೇರವಾಗಿ ಕಾಫಿ ಗಿಡಗಳಿಗೆ ಬಿಸಿಲು ಬೀಳುತ್ತಿರುವುದ ರಿಂದ ಇನ್ನಷು ತೇವಾಂಶ ಕಡಿಮೆಯಾಗಲು ಕಾರಣವಾಗುತ್ತಿದೆ. ಇನ್ನೊಂದು ವಾರದಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆ ಬಾರದೆ ಇದ್ದಲ್ಲಿ ಕಾಂಡಕೊರಕಗಳ ಹಾವಳಿ ಹೆಚ್ಚಾಗಲಿದೆ ಎನ್ನುವ ಆಂತಕವನ್ನು ಬೆಳೆಗಾರರು ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಜೂನ್ ಆರಂಭದಲ್ಲೇ ರೋಹಿಣಿ ಮಳೆ ಚೆನ್ನಾಗಿ ಸುರಿದು ತಿಂಗಳು ಪೂರ್ತಿ ಉತ್ತಮ ಪ್ರಮಾಣದಲ್ಲಿ ಮಳೆ ಯಾದರೆ ಬೋರರ್ ಕೀಟಗಳ ಹಾವಳಿ ನಿಯಂತ್ರಣಕ್ಕೆ ಬರುತ್ತದೆ. ಆದರೆ ಈ ಬಾರಿ ಈ ತಿಂಗಳು ಪೂರ್ತಿ ಮಳೆಯೇ ಆಗದಿರುವುದರಿಂದ ತೋಟಗಳನ್ನು ಕಾಪಾಡಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ.

ನಾಲ್ಕೈದು ವರ್ಷಗಳ ಹಿಂದೆ ಮಳೆ ಕೊರತೆಯಿಂದಾಗಿ ಕಾಂಡಕೊರಕಗಳು ತೋಟಗಳಿಗೆ ವ್ಯಾಪಕವಾಗಿ ಆವರಿಸಿ ಕೊಂಡಿದ್ದ ಹಿನ್ನೆಲೆಯಲ್ಲಿ ಲಕ್ಷಾಂತರ ಗಿಡಗಳನ್ನು ಕಿತ್ತು ಸುಡಲಾಗಿತ್ತು. ಇದರಿಂದ ಬೆಳೆಗಾರರು ಸೇರಿದಂತೆ ಸರ್ಕಾರದ ಬೊಕ್ಕಸಕ್ಕೂ ಸಾಕಷ್ಟು ನಷ್ಟ ಸಂಭವಿಸಿತ್ತು. ಮಳೆ ಬಾರದೇ ಇದ್ದಲ್ಲಿ ಮತ್ತದೇ ಪರಿಸ್ಥಿತಿ ಮರುಕಳಿಸಬಹುದು.

ಕಾಂಡಕೊರಕಗಳ ಭೀತಿ ಒಂದೆಡೆಯಾದರೆ, ಮಳೆಬಾರದೆ ಕಾಫಿತೋಟಗಳಿಗೆ ಗೊಬ್ಬರ ಹಾಕಲು ತೊಡಕಾಗಿದೆ. ಕೆಲವೇ ತೋಟಗಳಲ್ಲಿ ಕೃತಕ ನೀರು ಹಾಯಿಸಿಗೊಬ್ಬರ ಹಾಕಾಲಾಗುತ್ತಿದ್ದರೂ ಅದು ಪ್ರಾಕೃತಿಕವಾಗಿ ಸುರಿದ ಮಳೆಯಿಂದ ಸಿಗುವಷ್ಟು ಉತ್ತಮ ಫಲಿತಾಂಶ ಸಿಗುವುದಿಲ್ಲ. ಬಹುತೇಕ ಎಲ್ಲಾ ಬೆಳೆಗಾರರೂ ಗೊಬ್ಬರವನ್ನು ದಾಸ್ತಾನಿಟ್ಟುಕೊಂಡು ಮಳೆಗಾಗಿ ಮುಗಿಲು ನೋಡುತ್ತಾ ಕುಳಿತುಕೊಳ್ಳವ ಪರಿಸ್ಥಿತಿ ಬಂದೊದಗಿದೆ.

ಮಲೆನಾಡಿನ ಜೀವನಾಡಿಗಳಾದ ನದಿ, ಹಳ್ಳ, ಕೊಳ್ಳ, ತೊರೆಗಳೆಲ್ಲವೂ ಬತ್ತಿರುವುದರಿಂದ ಅಂತರ್ಜಲವೂ ಕುಸಿದಿದೆ. ಈ ಕಾರಣಕ್ಕೆ ಮೋಟಾರ್ ಗಳ ಮೂಲಕ ನೀರೆತ್ತಿ ಕೃತಕವಾಗಿ ನೀರುಣಿಸಲೂ ಸಹ ಸಾಧ್ಯವಿಲ್ಲ ಎನ್ನುವಂತಾಗಿದೆ. ಇದೆಲ್ಲದರ ಪರಿಣಾಮ ದಿಂದಾಗಿ ಈ ಬಾರಿಕಾಫಿ ಇಳುವರಿ ತೀವ್ರ ಕುಸಿಯುವ ಆತಂಕ ಎದುರಾಗಿದೆ.

ಉಷ್ಣಾಂಶ ಹೆಚ್ಚಾದಂತೆ ಕೀಟಗಳು ಗಾಳಿಯಲ್ಲಿ ವೇಗವಾಗಿ ಗಿಡದಿಂದ ಗಿಡಕ್ಕೆ ಆವರಿಸಿಕೊಳ್ಳಲಾರಂಭಿಸುತ್ತವೆ. ಬೋರರ್ ದಾಳಿಗೆ ತುತ್ತಾದ ಗಿಡಗಳು ಮತ್ತೆ ಚೇತರಿಕೊಳ್ಳಲು ಸಾಧ್ಯವೇ ಇಲ್ಲ. ಅದರ ನಿಯಂತ್ರಣಕ್ಕೆ ಹತ್ತಾರು ವರ್ಷ ಗಳಿಂದಲೂ ಸಂಶೋಧನೆಗಳು ನಡೆದರೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಈ ಕಾರಣಕ್ಕೆ ರೋಗಕ್ಕೆ ತುತ್ತಾದ ಗಿಡಗಳನ್ನು ಕಿತ್ತು ಸುಡುವುದೊಂದೇ ಮಾರ್ಗವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು