ಚಿಕ್ಕಮಗಳೂರು: ಎರಡನೇ ದಿನಕ್ಕೆ ಕಾಲಿಟ್ಟ ಗುತ್ತಿಗೆ ಪೌರಕಾರ್ಮಿಕರ ಪ್ರತಿಭಟನೆ

ಚಿಕ್ಕಮಗಳೂರು: ಮನೆ ಮನೆ ಕಸ ಸಂಗ್ರಹಕಾರರ ಪೌರಕಾರ್ಮಿಕರರಿಗೆ ಕನಿಷ್ಟ ವೇತನವನ್ನು ನೀಡದೇ ಹಾಗೂ ಸುರಕ್ಷತೆಯ ಕಿಟ್ ವ್ಯವಸ್ಥೆಯು ಕಲ್ಪಿಸದಿರುವ ಪರಿಣಾಮ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದಸಂಸ (ಪ್ರೋ.ಕೃಷ್ಣಪ್ಪ ಸ್ಥಾಪಿತ ಬಣ) ರಾಜ್ಯ ಸಂಚಾಲಕ ತರೀಕೆರೆ ವೆಂಕಟೇಶ್ ಹೇಳಿದರು.

ನಗರದ ಆಜಾದ್‌ಪಾರ್ಕ್‌ನಲ್ಲಿ ಎರಡನೇ ದಿನಕ್ಕೆ ಕಾಲಿಟ್ಟ ಗುತ್ತಿಗೆ ಪೌರಕಾರ್ಮಿಕರ ಸಂಘದ ಪ್ರತಿಭಟನೆ ಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿನಿತ್ಯ ಮನೆ ಮನೆಗಳಿಗೆ ಗಂಟೆಗಾಡಿಗಳ ಮೂಲಕ ಕಸ ಸಂಗ್ರಹಿಸುವವರಿಗೆ ಸೂಕ್ತ ಭದ್ರತೆಯಿಲ್ಲದೇ ಪರಿತಪಿಸುವಂತಾಗಿದೆ ಎಂದು ತಿಳಿಸಿದರು.

ಕಳೆದ ಹಲವಾರು ವರ್ಷಗಳಿಂದ ಕಸ ಸಂಗ್ರಹಣೆ ವೃತ್ತಿಯಲ್ಲಿ ಬದುಕುತ್ತಿರುವ ಪೌರಕಾರ್ಮಿಕರು ಅನೇಕ ರೋಗರುಜಿನಿಗಳಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆಂದು ತೆರಳಿದರೆ ಸಾವಿರಾರು ರೂ.ಗಳು ತಗುಲಲಿದೆ. ಇದರೊಂದಿಗೆ ವೃತ್ತಿಯಲ್ಲಿ ಕನಿಷ್ಟ ವೇತನವು ಸಿಗದ ಪರಿಣಾಮ ಊಟಕ್ಕಿದ್ದರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ ಊಟಕ್ಕಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ನಗರಸಭಾ ಆಡಳಿತವು ಗುತ್ತಿಗೆ ಪೌರ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಮಾಜ ದಲ್ಲಿ ಸದೃಢವಾಗಿ ಬದುಕಲು ಅವಕಾಶ ಮಾಡಿಕೊಡಬೇಕು.

ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿ ಮಾಹಿತಿ ತಿಳಿಸಿದ ತರೀಕೆರೆ ವೆಂಕಟೇಶ್ ಕೂಡಲೇ ಗುತ್ತಿಗೆ ಪೌರಕಾರ್ಮಿಕರ ಕನಿಷ್ಟ ವೇತನ, ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಕೀರ್ತಿ, ಸಂಘದ ಅಧ್ಯಕ್ಷ ನಾಗರಾಜ್, ಮುಖಂಡರುಗಳಾದ ಮೋಹನ್, ಆನಂದ್, ಶ್ರೀನಿವಾಸ್, ಎಸ್.ಪಿ.ಪವನ ಮತ್ತಿತರರು ಹಾಜರಿದ್ದರು.

Ashika S

Recent Posts

ಪುಷ್ಪ ಸಿನಿಮಾ ಮಾಡಿ ನನ್ನ ಜೀವನ ಬದಲಾಗಿಲ್ಲ ಎಂದ ಬಹುಭಾಷಾ ನಟ ಫಾಹದ್ ಫಾಸಿಲ್

ಬಹುಭಾಷಾ ನಟ ಫಾಹದ್ ಫಾಸಿಲ್ ಪುಷ್ಪ ಸಿನಿಮಾದಿಂದ ನನ್ನ ಜೀವನ ಬದಲಾಗಿಲ್ಲ, ಪುಷ್ಪ ಮಾಡಿದ್ದಕ್ಕೆ ನನಗೇನು ಸಿಕ್ತು ಅನ್ನೋದು ತಪ್ಪು…

14 mins ago

ಪಿತ್ರೋಡಾ ಅವರ ‘ಜನಾಂಗೀಯ’ ಹೇಳಿಕೆಗೆ ತಿರುಗೇಟು ನೀಡಿದ ಪ್ರಧಾನಿ

 ಸ್ಯಾಮ್ ಪಿತ್ರೋಡಾ ಅವರ ‘ಜನಾಂಗೀಯ’ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರನ್ನು ಅವರ ಬಣ್ಣದ ಆಧಾರದ ಮೇಲೆ…

15 mins ago

ʼಕೋವಿಶೀಲ್ಡ್ ಲಸಿಕೆ ಪಡೆದವರು ಡ್ಯಾನ್ಸ್ ಮಾಡುವಂತಿಲ್ಲʼ ಎಚ್ಚರಿಕೆ ನೀಡಿದ ಆಮಂತ್ರಣ ಪತ್ರಿಕೆ

ಕೊರೊನಾ ಲಸಿಕೆ ಕೋವಿಶೀಲ್ಡ್​ ಅಭಿವೃದ್ಧಿ ಪಡಿಸಿದ್ದ ದೈತ್ಯ ಫಾರ್ಮಾ ಕಂಪನಿ ಅಸ್ಟ್ರಝೆನೆಕಾ, ಕೋರ್ಟ್​ ಮುಂದೆ ಸತ್ಯವೊಂದನ್ನು ಒಪ್ಪಿಕೊಂಡಿದೆ. ಅದು ಏನೆಂದರೆ…

40 mins ago

ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ಹರಡಿದರೆ ಕಠಿಣ ಕ್ರಮ: ಪೊಲೀಸ್ ಇಲಾಖೆ

ಸಾಮಾಜಿಕ ಜಾಲತಾಣಗಳಲ್ಲಿ ಬೇರೆ-ಬೇರೆ ಸಮುದಾಯ, ಜಾತಿ, ಧರ್ಮ, ವ್ಯಕ್ತಿಗಳ ವಿರುದ್ಧ ಉದ್ದೇಶ  ಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡುವುದು ಹಾಗೂ ತಮಾಷೆಗಾಗಿ…

48 mins ago

ಮಗುವಿಗೆ ಜನ್ಮ ನೀಡಿದ 13 ವರ್ಷದ ಬಾಲಕಿ: ಇಬ್ಬರು ಪೊಲೀಸರ ವಶಕ್ಕೆ

13 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

58 mins ago

ನಾಳೆ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶಕ್ಕೆ ದಿನಾಂಕ ನಿಗದಿಯಾಗಿದ್ದು, ನಾಳೆ ಬೆಳಗ್ಗೆ 10.30ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

1 hour ago