ಚಿಕ್ಕಮಗಳೂರು: ಅಡಿಕೆ ಬೆಳೆಗಾರರ ನೆರವಿಗೆ ಕೇಂದ್ರ ಬದ್ಧ- ಜೆ.ಪಿ.ನಡ್ಡಾ

ಚಿಕ್ಕಮಗಳೂರು: ಅಡಿಕೆ ಬಗ್ಗೆ ಕಾಂಗ್ರೆಸ್ ಪಕ್ಷದ ಮೊಸಳೆ ಕಣ್ಣೀರು, ನಕಲಿ ಅನುಕಂಪದ ಬಗ್ಗೆ ಬೆಳೆಗಾರರು ಅರ್ಥಮಾಡಿ ಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀ ಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಅವರು ಇಂದು ಕೊಪ್ಪ ಪಟ್ಟಣದ ಬಾಳಗಡಿಯಲ್ಲಿ ಶೃಂಗೇರಿ ಕ್ಷೇತ್ರ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ಅಡಿಕೆ ಬೆಳೆಗಾರರ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದ ಅಡಿಕೆ ಬೆಳೆಗಾರರಿಗೆ ಬಿಜೆಪಿ ಸರ್ಕಾರ ಸಾಕಷ್ಟು ಕೊಡುಗೆ ನೀಡಿದೆ. ಅಡಿಕೆ ಬೆಳೆಗಾರರ ಪರವಾದ ತೀರ್ಮಾನ ತೆಗೆದುಕೊಂಡ ಸರ್ಕಾರ ಇದ್ದರೆ ಅದು ಬಿಜೆಪಿ ಸರ್ಕಾರ ಮಾತ್ರ. ಈ ಸಂಬಂಧ ಯಾವುದೇ ಚರ್ಚೆಗೆ ಸಿದ್ಧ ಎಂದರು.

೧೯೮೨ ರಲ್ಲಿ ಯಡಿಯೂರಪ್ಪ ಅವರು ಅಡಿಕೆ ಬೆಳೆಗಾರರಗೆ ನ್ಯಾಯ ಒದಗಿಸಲು ಪಾದಯಾತ್ರೆ ಮಾಡಿ ದ್ದರು. ಆದರೆ ಕಾಂಗ್ರೆಸ್‌ನ ಬಹಳಷ್ಟು ಜನ ನಾವು ರೈತರ ಮುಖಂಡ, ನಾಯಕರು ಎಂದು ಹೇಳಿಕೊ ಳ್ಳುತ್ತಾರೆ. ಆದರೆ ರೈತರಿಗಾಗಿ ಏನನ್ನೂ ಮಾಡಲಿಲ್ಲ ಎಂದು ದೂರಿದರು.

ದೇಶದಲ್ಲಿ ೨೨ ಮೆಗಾ ಪಾರ್ಕ್ ಗಳನ್ನು ಕೃಷಿ ಮತ್ತು ತೋಟಗಾರಿಕೆ ಬೆಳೆಗೆ ಪ್ರೋತ್ಸಾಹ ಕೊಡಲೆಂದೇ ಸ್ಥಾಪಿಸಿದ್ದೇವೆ. ಹಿಂದೆ ಕೇವಲ ೨ ಪಾರ್ಕ್‌ಗಳು ಮಾತ್ರ ಇತ್ತು. ಅಡಿಕೆಗೆ ಪೂರಕ ವಾತಾವರಣವನ್ನು ನಮ್ಮ ಸರ್ಕಾರಗಳು ಸೃಷ್ಠಿಸಿವೆ. ೨೦೧೭ ರಲ್ಲಿ ೨.೭೯ ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಇಂದು ಅದು ೫.೪೯ ಲಕ್ಷ ಹೆಕ್ಟರ್ ಪ್ರದೇಶಕ್ಕೆ ವಿಸ್ತರಿ ಸಲಾಗಿದೆ. ೨೦೧೭ ರಲ್ಲಿ ಪ್ರಿ ಕ್ವಿಂಟಾಲ್ ಅಡಿಕೆಗೆ ೧೭ ಸಾವಿರ ರೂ.ಬೆಲೆ ಇತ್ತು. ೨೦೨೧-೨೨ ಅದು ೨೫ ರಿಂದ ೩೦ ಸಾವಿರಕ್ಕೆ ಏರಿಕೆಯಾಯಿತು. ಚಾಲಿ ಅಡಿಕೆ ಬೆಲೆಯಲ್ಲಿ ಹೆಚ್ಚಳವಾಗಿದೆ. ರಾಜ್ಯದ ಸಾಗರ ಅಡಿಕೆ ಮಂಡಿಯಲ್ಲಿ ಇಂದು ಸುಮಾರು ೪೦ ಸಾವಿರ ರೂ. ಬೆಲೆ ಇದೆ ಎಂದರು.

ಅಡಿಕೆ ಬೆಳೆಗಾರರು ಆಮದು ನೀತಿಯಿಂದ ಸಮಸ್ಯೆ ಅನುಭವಿಸುತ್ತಿ ರುವುದು ನಮ್ಮ ಗಮನದಲ್ಲಿದೆ. ಈ ಕಾರಣಕ್ಕೆ ಬಿಜೆಪಿ ಸರ್ಕಾರ ಆಮದು ಶುಲ್ಕ ಹೆಚ್ಚಿಸಿದೆ. ಕಳಪೆ ಅಡಿಕೆ ಆಮದಾಗುವುದನ್ನು ತಡೆಯುವ ಉದ್ದೇಶದಿಂದ ಮೂರು ಪಟ್ಟು ಆಮದು ಶುಲ್ಕ ವಿಧಿಸಲಾಗುತ್ತಿದೆ. ಹಳದಿ ಎಲೆ ಮತ್ತು ಕಪ್ಪು ಚುಕ್ಕೆ ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲು ತೀರ್ಮಾನಿಸಿದೆ ಎಂದರು.

ಹಳದಿ ಎಲೆ ನಿಯಂತ್ರಣ ಸಂಬ ಂಧ ರಾಷ್ಟ್ರಮಟ್ಟದಲ್ಲಿ ತಜ್ಞರ ಸಮಿತಿ ರಚಿಸಲಾಗುತ್ತಿದೆ. ಇತ್ತ ಕರ್ನಾಟಕ ಸರ್ಕಾರವೂ ಈ ವಿಚಾರದಲ್ಲಿ ಕಾಳಜಿ ತೋರಿದೆ. ಇದಕ್ಕಾಗಿ ತೀರ್ಥಹಳ್ಳಿ ಸಂಶೋಧನಾ ಕೇಂದ್ರಕ್ಕೆ ೧೦ ಕೊಟಿ ರೂ. ಮೀಸಲಿಟ್ಟಿದೆ. ಒಂದೆಡೆ ರೋಗ ನಿಯಂತ್ರಣ ಮತ್ತೊಂದೆಡೆ ಅಡಿಕೆ ಉತ್ಪಾದನೆ ಹೆಚ್ಚಳದ ಬಗ್ಗೆ ಹಲವು ಕ್ರಮಗಳನ್ನು ಏಕ ಕಾಲದಲ್ಲಿ ತೆಗೆದುಕೊಳ್ಳುತ್ತಿದ್ದೇವೆ ಎಂದರು.

ನಮ್ಮ ಸರ್ಕಾರ ಕಾಪರ್ ಸಲ್ಫೇಟ್ ಮತ್ತು ಇತರೆ ರಾಸಾಯನಿಕಗಳ ಬಳಕೆಗೆ ಸಾಮಾನ್ಯ ವರ್ಗದ ಬೆಳೆಗಾ ರರಿಗೆ ಶೇ.೭೫ ರಷ್ಟು ಸಹಾಯಧನ ಹಾಗೂ ಪರಿಶಿಷ್ಠ ಜಾತಿ, ಪಂಗಡಕ್ಕೆ ಶೇ.೯೦ ರಷ್ಟು ಸಹಾಯಧನ ನೀಡುತ್ತಿದೆ. ಅಡಿಕೆ ಬೆಳೆಹಾನಿಗೆ ಬಜೆಟ್‌ನಲ್ಲಿ ಅನುದಾನ ಘೋಷಿಸಿದೆ ಎಂದರು.

ರಾಜ್ಯ ಬಿಜೆಪಿ ಉಸ್ತುವಾರಿ ಅರು ಣ್ ಸಿಂಗ್, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ವಿಭಾಗ ಪ್ರಭಾರಿ ಗಿರೀಶ್ ಕಾರಂತ್, ಜಿಲ್ಲಾ ಪ್ರಭಾರಿ ಚನ್ನಬಸಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಜಿ.ಪಂ. ಮಾಜಿ ಅಧ್ಯಕ್ಷ ಶೆಟ್ಟಿಗದ್ದೆ ರಾಮಸ್ವಾಮಿ, ಸತೀಶ್, ಅರುಣ್ ಕುಮಾರ್, ಉಮೇಶ್, ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಬಿ.ರಾಜಪ್ಪ, ಕ್ಷೇತ್ರದ ಮೂರೂ ಮಂಡಲಗಳ ಅಧ್ಯಕ್ಷರು ಇತರರು ಇದ್ದರು.

Gayathri SG

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

17 mins ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

35 mins ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

55 mins ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

1 hour ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

2 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

2 hours ago