ಚಿಕಮಗಳೂರು

ಬೀರೂರು ನಾಡಕಚೇರಿಯಲ್ಲಿ ಮರೀಚಿಕೆಯಾದ ಮೂಲ ಸೌಕರ್ಯ

ಬೀರೂರು: ಸರ್ಕಾರ ರೈತರು ಮತ್ತು ಸಾರ್ವಜನಿಕರಿಗಾಗಿ ಎಲ್ಲಾ ಸರ್ಕಾರಿ ಸೌಲಭ್ಯಗಳು ಒಂದೇ ಸೂರಿನಡಿ ಸಿಗಲು ನಾಡಕಚೇರಿ ಪ್ರಾರಂಭಿಸಿದೆ. ಆದರೆ ಕೂಡ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಾತ್ಸರ ಮನೋಭಾವದಿಂದ ಇಲ್ಲಿನ ಕಟ್ಟಡ ಬೀಳುವ ಹಂತ ತಲುಪಿದ್ದು, ಮೂಲಭೂತ ಸೌಕರ್ಯ ಮರೀಚಿಕೆಯಾಗಿದೆ. ಹಾಗಾಗಿ ಪ್ರತಿನಿತ್ಯ ಜನ ಸಂಕಟ ಅನುಭವಿಸುವಂತಾಗಿದೆ.

ಇದು ಬೀರೂರಿನ ರಾಷ್ಟ್ರೀಯ ಹೆದ್ದಾರಿಯ ಹೃದಯ ಭಾಗದಲ್ಲಿರುವ ನಾಡಕಚೇರಿ ದುರಂತ ಕಥೆ. ಅಂದಿನ ಬ್ರಿಟಿಷ್ ಸರ್ಕಾರ ೧೮೯೯ರಲ್ಲಿ ಮುಸಾಪುರ್ ಖಾನ್ ಯೋಜನೆಯಡಿ ಸಾರ್ವಜನಿಕರಿಗೆ ವಸತಿ ಕಲ್ಪಿಸುವ ಮಂದಿರವಾಗಿ ಈ ಕಟ್ಟಡ ನಿರ್ಮಾಣವಾಗಿತ್ತು.

ನಂತರದ ದಿನಗಳಲ್ಲಿ ಮಹಿಳಾ ಹಾಸ್ಟೆಲ್, ಪೊಲೀಸ್ ಠಾಣೆ, ಬಿಇಒ ಕಚೇರಿ, ರೈಲ್ವೆ ನಿಲಾ,ಕಂದಾಯ ಇಲಾಖೆ ನಂತರ ಸರ್ಕಾರ ಹೊಸ ಯೋಜನೆ ಆರಂಭಿಸಿದಾಗ ಅಟಲ್ ಜಿ ಜನಸ್ನೇಹಿ ಕೇಂದ್ರವೂ ಇಲ್ಲಿ ಆರಂಭ ವಾಯಿತು.

೧೮೯೯ರಲ್ಲಿ ಕಟ್ಟಿದ ಈ ಕಟ್ಟಡ ಸದ್ಯ೧೨೪ವರ್ಷ ಪೂರೈಸಿ, ಕಟ್ಟಡ ಸೋರುತ್ತದ್ದು,ಬೀಳುವ ಹಂತ ತಲುಪಿದೆ. ಅಧಿಕಾರಿಗಳು ಮತ್ತು ಸರ್ಕಾರ ಮಾತ್ರ ಇತ್ತ ಗಮನ ಕೂಡ ಹರಿಸಿಲ್ಲ. ಈ ನಾಡಕಛೇರಿಯಲ್ಲಿ ಬೀರೂರು ಹೋಬಳಿಯ ಹುಲ್ಲೇಹಳ್ಳಿ, ಬಿ.ಕೋಡಿಹಳ್ಳಿ, ಚಿಕ್ಕಿಂಗಳ, ಜೋಡಿ ತಿಮ್ಮಾಪುರ, ಎಮ್ಮೆದೊಡ್ಡಿಗೆ ಗ್ರಾಮ ಪಂಚಾಯಿತಿಗಳ ಗ್ರಾಮ ಲೆಕ್ಕಿಗ, ಕಂದಾಯ ಅಧಿಕಾರಿ, ವಿಷಯ ನಿರ್ವಾಹಕ ಕೊಠಡಿ, ಗಣಕಯಂತ್ರ ಕೊಠಡಿ ಸೇರಿದಂತೆ ಉಪತಹಸೀಲ್ದಾರ್ ಕಚೇರಿಯ ಪುಟ್ಟಕೊಠಡಿಗಳಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಇದೆ.

ನಾಡಕಚೇರಿಯಲ್ಲಿ ಸರ್ಕಾರ ಸಾರ್ವಜನಿಕರು ಮತ್ತು ರೈತರಿಗೆ ಬೇಕಾದ ೪೮-೫೦ ಸೇವೆಗಳು ಪಿಂಚಣಿಯಿಂದ ಪಹಣಿವರೆಗೆ ಸೌಲಭ್ಯ ಪಡೆಯಲು ಪ್ರತಿನಿತ್ಯ ಅರ್ಜಿ ಸಲ್ಲಿಸಲು ಬರುತ್ತಾರೆ. ಇಲ್ಲಿಗೆ ಬರುವ ಹಿರಿಯರು, ವೃದ್ಧರು ಅರ್ಜಿ ಸಲ್ಲಿಸುವುದು ತಡವಾದರೆ ಕುಡಿಯಲು ನೀರು ಇಲ್ಲದೆ, ಶೌಚಾಲಯವೂ ಇಲ್ಲದೆ ಜನ ಬಯಲು ಶೌಚವನ್ನೆ ಆಶ್ರಹಿಸಬೇಕಾದ ಸ್ಥಿತಿ ಇದೆ.

ಹೆಣ್ಣುಮಕ್ಕಳಿಗಂತು ತೊಂದರೆ ತಪ್ಪಿದ್ದಲ್ಲ. ಕಸವನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಸ್ವಚ್ಚ ಭಾರತಕ್ಕೆ ಅವಮಾನವಾಗುವಂತಿದೆ ಇಲ್ಲಿನ ಸ್ಥಿತಿ. ಈ ಕಚೇರಿಯಲ್ಲಿ ಸರಿಯಾದ ಕಪಾಟುಗಳಿಲ್ಲದೆ ಕಡತಗಳು ನೆಲದ ಮೇಲೆಯೆ ಧೂಳು ಹಿಡಿದು ಬಿದ್ದಿವೆ.

ಒಟ್ಟಾರೆ ಏನಾದರೂ ಆಗಲಿ ಪ್ರತಿನಿತ್ಯ ಅತ್ಯವಶ್ಯಕ ದಾಖಲೆ ಮತ್ತು ಸರ್ಕಾರಿ ಕಡತ ಹಾಗೂ ಅರ್ಜಿ ಸಲ್ಲಿಕೆ ಮಾಡುವವ ಕಚೇರಿಗಳಿಗೆ ಉತ್ತಮ ಸುಸಜ್ಜಿತ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡಿದಾಗ ಮಾತ್ರ ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎನ್ನುತ್ತಾರೆ ನಾಗರೀಕರು. ಜಿಲ್ಲಾಧಿಕಾರಿಗಳು ಕೂಡಲೇ ಈ ಸಮಸ್ಯೆ ಬಗ್ಗೆ ಬಗೆಹರಿಸುವಿರಾ ಎನ್ನುವುದನ್ನು ಕಾದು ನೋಡಬೇಕಿದೆ.

Ashika S

Recent Posts

ಚಾರ್ ಧಾಮ್​ ಯಾತ್ರೆ, ದೇವಸ್ಥಾನಗಳ ಬಳಿ ರೀಲ್ಸ್​ಗೆ ನಿಷೇಧ

ಚಾರ್​ ಧಾಮ್ ಯಾತ್ರೆ ಶುರುವಾಗಿದ್ದು, ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ…

15 mins ago

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ !

ಭಾರತದ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…

1 hour ago

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಅಬ್ಬರ

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ,…

2 hours ago

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.…

2 hours ago

ಚಿತ್ರದುರ್ಗ: ಮನೆಯೊಂದರಲ್ಲಿ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ…

2 hours ago

ಬಿರುಗಾಳಿ ಸಹಿತ ಮಳೆಗೆ ಕುಸಿದ ಮಹಾದ್ವಾರ

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ…

3 hours ago