ಚಿಕ್ಕಮಗಳೂರಿನ ಐದೂ ಕ್ಷೇತ್ರಗಳಲ್ಲಿ ಕೈ ಜಯಭೇರಿ, ಮುದುಡಿದ ಕಮಲ

ಚಿಕ್ಕಮಗಳೂರು: ೧೬ನೇ ವಿಧಾನ ಸಭೆ ರಚನೆಗೆ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಆಡಳಿತ ಪಕ್ಷದ ವಿರೋಧಿ ಅಲೆಗೆ ಜಿಲ್ಲೆಯಲ್ಲಿ ಬಿ.ಜೆ.ಪಿ. ಪಕ್ಷ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು ೨ ದಶಕಕ್ಕೂ ಹೆಚ್ಚು ಕಾಲ ಅಧಿಕಾರದಿಂದ ದೂರ ಇದ್ದ ಕಾಂಗ್ರೇಸ್ ಪಕ್ಷದ ಗತ ವೈಭವ ಮರು ಕಳಿಸುವಂತೆ ಜಿಲ್ಲೆಯ ಮತದಾರರು ತೀರ್ಪು ನೀಡಿದ್ದಾರೆ.

೨೦೨೩ ನೇ ಸಾಲಿನ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆಗೆ ಇದೇ ತಿಂಗಳ ೧೦ ರಂದು ನಡೆದ ಮತಗಳ ಏಣಿಕೆ ಇಂದು ನಡೆದು ಫಲಿತಾಂಶ ಹೊರ ಬಿದ್ದಿದ್ದು ಆಡಳಿತ ವಿರೋಧಿ ಅಲೆ ಹಾಗೂ ಕಾಂಗ್ರೇಸ್ ಪರವಾದ ಬಿರುಗಾಳಿಯಲ್ಲಿ ಈ ಜಿಲ್ಲೆ ಯ ೪ ವಿಧಾನ ಸಭಾ ಕ್ಷೇತ್ರಗಳಲ್ಲಿ ಅಧಿಕಾರದಲ್ಲಿದ್ದ ಆಡಳಿತ ಪಕ್ಷದ ಶಾಸಕರನ್ನು ತಿರಸ್ಕರಿಸಿರುವ ಜಿಲ್ಲೆಯ ಮತದಾರರು ಐದೂ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳನ್ನು ಆರಿಸುವ ಮೂಲಕ ೨೦ ವರ್ಷಗಳ ಇತಿಹಾಸವನ್ನು ಬದಲಾವಣೆ ಮಾಡಿ ಹೊಸ ಇತಿಹಾಸ ಬರೆದಂತಾಗಿದೆ.

ಈ ಭಾರಿಯ ಚುನಾವಣೆಯಲ್ಲಿ ಈ ಜಿಲ್ಲೆಯ ೫ ಕ್ಷೇತ್ರಗಳಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಹಾಲಿ ಶಾಸಕರನ್ನು ಮರು ಆಯ್ಕೆ ಮಾಡುವ ಮೂಲಕ ಕಾಂ ಗ್ರೇಸ್ ಪಕ್ಷದ ಅಸ್ಥಿತ್ವವನ್ನು ಸಾಭೀ ತು ಪಡಿಸಿ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಯಿಂದ ಆಯ್ಕೆಯಾಗಿದ್ದ ಶಾಸಕರುಗಳನ್ನು ಸೋಲಿಸಿ ಕಾಂ ಗ್ರೇಸ್ ಪಕ್ಷದ ಹೊಸ ಶಾಸಕರನ್ನು ಆಯ್ಕೆ ಮಾಡಿ ವಿಧಾನ ಸಭೆಗೆ ಕಳು ಹಿಸುವ ತೀರ್ಮಾನ ಮಾಡಿದ್ದಾರೆ.

ಪ್ರಸ್ತುತ ವಿಧಾನಸಭೆ ಚುನಾವಣೆಗೆ ಜಿಲ್ಲೆಯ ೫ ವಿಧಾನ ಸಭಾ ಕ್ಷೇತ್ರಗಳಲ್ಲಿ ಜಿದ್ದಾ ಜಿದ್ದಿ ಪೈಪೋಟಿ ಇದ್ದು ಅಂತಿಮವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಲ್ಲಿ ಶಾಸಕರಾಗಿದ್ದ ಟಿ.ಡಿ. ರಾಜೇ ಗೌಡರಿಗೆ ಆಡಳಿತ ಪಕ್ಷದ ಪರವಾಗಿ ಸ್ಪರ್ಧಿಸಿದ್ದ ಮುಖ್ಯಮಂತ್ರಿಗಳ ರಾಜ ಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಅವರು ತೀವ್ರ ಪೈ ಪೋಟಿ ನೀಡಿ ಕೇವಲ ೧೩೫ ಮತ ಗಳ ಅಂತರದಲ್ಲಿ ಟಿ.ಡಿ. ರಾಜೇ ಗೌಡರು ಪ್ರಯಾಸದ ಗೆಲುವು ಸಾದಿ ಸುವ ಮೂಲಕ ವಿಧಾನ ಸಭೆ ಶಾಸಕರಾಗಿ ಮರು ಆಯ್ಕೆಯಾಗಿದ್ದಾರೆ.

ಈ ಕ್ಷೇತ್ರದಲ್ಲಿ ಜಯ ಶೀಲರಾ ಗಿರುವ ಟಿ.ಡಿ.ರಾಜೇಗೌಡರಿಗೆ ೫೯೧೭೧ ಜೀವರಾಜ್ ಅವರಿಗೆ ೫೮೯೭೦ ಹಾಗೂ ಜೆ.ಡಿ.ಎಸ್. ನಿಂದ ಸ್ಪರ್ಧಿಸಿದ್ದ ಸುಧಾಕರ್ ಶೆಟ್ಟಿಯವರಿಗೆ ೧೯೪೧೭ ಮತಗಳು ಬಿದ್ದಿದೆ.

ಮೂಡಿಗೆರೆ ವಿಧಾನ ಸಭಾ ಕ್ಷೇತ್ರವೂ ಜಿದ್ದಾ ಜಿದ್ದಿಯ ಕ್ಷೇತ್ರವಾ ಗಿದ್ದು ಬಿ.ಜೆ.ಪಿ. ಪಕ್ಷದಲ್ಲಿ ಶಾಸಕರಾಗಿ ಪಕ್ಷದಲ್ಲಿ ಹಾಗೂ ಜನರಿಂದಲೂ ವಿರೋಧ ಕಟ್ಟಿಕೊಂಡಿದ್ದ ಶಾಸಕ ಎಂ.ಪಿ.ಕುಮಾರಸ್ವಾಮಿಯವರು ಬಿ.ಜೆ.ಪಿ.ಯಲ್ಲಿ ಟಿಕೇಟ್ ಕೈ ತಪ್ಪಿ ಜೆ.ಡಿ.ಎಸ್. ಪಕ್ಷಕ್ಕೆ ಅಲ್ಲಿ ಅಭ್ಯರ್ಥಿ ಯಾಗಿ ಚುನಾವಣೆಗೆ ಸ್ಪರ್ಧಿಸಿದ್ದು, ತಮ್ಮ ಎದುರಾಳಿ ನಯನಾ ಮೋ ಟಮ್ಮ ಅವರ ವಿರುದ್ಧ ೨೬೦೩೮ ಮತ ಗಳನ್ನು ಪಡೆದು ಮೂರನೇ ಸ್ಥಾನ ಕ್ಕೀಳಿದು ಪರಾಭವಗೊಂಡಿದ್ದಾರೆ.

ಈ ಕ್ಷೇತ್ರದಲ್ಲಿ ಬಿ.ಜೆ.ಪಿ.ಯಿಂದ ಸ್ಪರ್ಧಿಸಿದ್ದ ದೀಪಕ್ ದೊಡ್ಡಯ್ಯ ಅವರು ತೀವ್ರ ಸ್ಪರ್ಧೆ ನೀಡಿ ೫೦೧೨೧ ಮತಗಳನ್ನು ಪಡೆದು ಪರಾಭವ ಗೊಂಡರೆ ಕಾಂಗ್ರೇಸ್ ಪಕ್ಷದ ಅಭ್ಯ ರ್ಥಿಯಾಗಿ ಸ್ಪರ್ಧಿಸಿದ್ದ ನಯನಾ ಮೋಟಮ್ಮ ಅವರು ೫೦೮೪೩ ಮತಗಳನ್ನು ಪಡೆದು ಜಯಗಳಿಸುವ ಮೂಲಕ ಮೊದಲ ಭಾರಿಗೆ ವಿಧಾನ ಸಭೆ ಪ್ರವೇಶಿಸಿದ್ದಾರೆ.

ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರ ರಾಜ್ಯ ಹಾಗೂ ದೇಶದ ಗಮ ನ ಸೆಳೆದ ಹೈ ವೋಲ್ಟೇಜ್ ಕ್ಷೇತ್ರ ವೆಂದು ಬಿಂಭಿತವಾಗಿದ್ದು, ಕಳೆದ ೨೦ ವರ್ಷಗಳಿಂದ ಪಾರು ಪತ್ಯ ಮೆರೆ ದ ಸೋಲಿಲ್ಲದ ಸರದಾರ ಎನಿಸಿ ಕೊಂಡಿದ್ದ ಬಿ.ಜೆ.ಪಿ.ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿಯವರ ವಿರುದ್ಧ ಬಿ.ಜೆ.ಪಿ.ಯಿಂದಹೊರ ಹೋಗಿ ಕಾಂಗ್ರೇಸ್ ಪಕ್ಷದಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದ ಎಚ್.ಡಿ. ತಮ್ಮ ಯ್ಯ ಅವರು ೫೯೨೬ ಮತಗಳ ಅಂತರದಲ್ಲಿ ಸಿ.ಟಿ.ರವಿಯರನ್ನು ಸೋ ಲಿಸುವ ಮೂಲಕ ತಮ್ಮಯ್ಯ ಅವರು ಮೊದಲ ಭಾರಿಗೆ ವಿಧಾನಸಭೆಗೆ ಪ್ರವೇಶಿಸಿದ್ದಾರೆ.

ಈ ಕ್ಷೇತ್ರದಲ್ಲಿ ಎಚ್.ಡಿ. ತಮ್ಮ ಯ್ಯ ಅವರು ೮೫೦೫೪ ಮತಗಳನ್ನು ಪಡೆದು ಜಯಗಳಿಸಿದರೆ ಇವರಿಗೆ ತೀವ್ರ ಎದುರಾಳಿಯಾಗಿದ್ದ ಶಾಸಕ ಸಿ.ಟಿ.ರವಿಯವರು ೭೯೧೨೮ ಮತಗ ಳನ್ನು ಪಡೆದು ಪರಾಭವಗೊಂಡಿ ದ್ದಾರೆ. ಜೆ.ಡಿ.ಎಸ್. ಅಭ್ಯರ್ಥಿಯಾ ಗಿದ್ದ ತಿಮ್ಮಶೆಟ್ಟಿ ಅವರು ೧೭೬೩ ಮತ ಗಳನ್ನು ಪಡೆದು ಮೂರನೇ ಸ್ಥಾನಕ್ಕೆ ನಿಂತಿದ್ದಾರೆ.

ಕಡೂರು ವಿಧಾನ ಸಭಾ ಕ್ಷೇತ್ರ ದಲ್ಲಿ ಸ್ಪರ್ಧಿಸಿದ್ದ ಬೆಳ್ಳಿ ಪ್ರಕಾಶ್ ಅವ ರನ್ನು ೧೨೦೦೭ ಮತಗಳಿಂದ ಸೋಲಿ ಸುವ ಮೂಲಕ ಕಾಂಗ್ರೇಸ್ ನಿಂದ ಸ್ಪರ್ಧಿಸಿದ್ದ ಕೆ.ಎಸ್. ಆನಂದ್ ೭೫೪ ೭೬ ಪಡೆದು ಕಡೂರು ಶಾಸಕರಾಗಿ ಆಯ್ಕೆಯಾಗುವ ಮೂಲಕ ಮೊದಲ ಭಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ ಹಾಲಿ ಶಾಸಕರಾಗಿದ್ದ ಬೆಳ್ಳಿ ಪ್ರಕಾಶ್ ೬೩೪೬೯ ಮತಗಳು ಬಂದಿದ್ದು, ಕೊನೆ ಗಳಿಗೆಯಲ್ಲಿ ಜೆ.ಡಿ.ಎಸ್ ಪಕ್ಷಕ್ಕೆ ಮರು ಸೇರ್ಪಡೆಯಾಗಿ ಸ್ಪರ್ಧಿಸಿದ್ದ ವೈ.ಎಸ್. ವಿ ದತ್ತ ಅವರು ೨೬೮೩೭ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ತರೀಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಡಿ.ಎಸ್. ಸುರೇಶ್ ಅವರು ವಿರುದ್ಧ ಸ್ಪರ್ಧಿಸಿದ್ದ ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್ ಸುಮಾ ರು ೧೨೧೩೧ಮತಗಳ ಅಂತರದಲ್ಲಿ ಹಾಲಿ ಶಾಸಕರನ್ನು ಸೋಲಿಸಿ ಗೆಲು ವಿನ ನಗೆ ಭೀರಿ ಮತ್ತೊಮ್ಮೆ ವಿಧಾನ ಸಭೆಗೆ ಪ್ರವೇಶಿಸಿದ್ದಾರೆ ಈ ಕ್ಷೇತ್ರದಲ್ಲಿ ಜಯಭೇರಿ ಭಾರಿಸಿದ ಜಿ.ಎಚ್.ಶ್ರೀನಿ ವಾಸ್ ಅವರಿಗೆ ೬೩೦೮೬ ಮತಗಳು ಬಿ.ಜೆ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಿದ ಡಿ.ಎಸ್.ಸುರೇಶ್ ಅವರಿಗೆ ೫೦೯೫೫ ಮತಗಳು ಬಿದ್ದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೋಪಿ ಕೃಷ್ಣ ಅವರು ೩೫೪೬೮ಮತಗಳನ್ನು ಪಡೆದು ಕಣದಲ್ಲಿ ರಾರಾಜಿಸಿ ಪರಾಭವಗೊಂಡಿದ್ದಾರೆ.

ಜಿಲ್ಲೆಯಿಂದ ಈ ಭಾರಿ ಇಬ್ಬರು ಹೊಸ ಶಾಸಕರನ್ನು ಆರಿಸಿ ಕಳುಹಿ ಸುವ ಐದೂ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳು ಜಯಭೇರಿ ಹೊಡೆ ದಿದ್ದು ಅಧಿಕಾರವಿಲ್ಲದೆ ಸಂಪೂರ್ಣ ವಾಗಿ ನೆಲಕಚ್ಚಿದ್ದ ಕಾಂಗ್ರೇಸ್ ಪಕ್ಷಕ್ಕೆ ಮತ್ತೊಮ್ಮೆ ತನ್ನ ಭದ್ರ ಕೋಟೆಯನ್ನು ಮರು ನಿರ್ಮಾಣ ಮಾಡಿ ಕೊಂಡು ಗತ ವೈಭವ ಮರುಕಳಿಸಿದಂತಾಗಿದೆ.

ಚುನಾವಣೆಯ ತೀರ್ಪು ಹೊರ ಬಿದ್ದು ಜಿಲ್ಲೆಯಲ್ಲಿ ಬಿ.ಜೆ.ಪಿ. ಧೂಳಿ ಪಟವಾಗಿ ಕಾಂಗ್ರೇಸ್ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ ಹಿನ್ನಲೆಯಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಸಂಭ್ರಮ ಎಲ್ಲೆ ಮೀರಿದಂತಿತ್ತು. ಐ.ಡಿ.ಎಸ್.ಜಿ. ಕಾಲೇಜಿನಲ್ಲಿ ಅಂತಿಮ ಫಲಿತಾಂಶ ಪ್ರಕಟಿಸುತಿದ್ದಂತೆ ಗೆಲುವಿನ ನಗೆ ಬೀರಿ ಹೊರ ಬಂದ ಶಾಸಕರುಗ ಳನ್ನು ಹೊತ್ತೊಯ್ದ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ನಗರದಾಧ್ಯಂತ ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳ ಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆ ಸಿದರು.ಮತ ಏಣಿಕೆಯ ಹಿನ್ನಲೆಯ ಲ್ಲಿ ಜಿಲ್ಲಾಧ್ಯಂತ ೧೪೪ ಸೆಕ್ಷನ್ ಜಾರಿ ಗೊಳಿಸುವ ಮೂಲಕ ಮುಂಜಾಗೃತ ಕ್ರಮ ಕೈಗೊಳ್ಳಲಾಗಿತ್ತು ಎಲ್ಲಾ ಕಡೆ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Sneha Gowda

Recent Posts

ಚಾಮರಾಜನಗರ: ಸಿಡಿಲು ಬಡಿದು ಮೂರು ಜಾನುವಾರುಗಳು ಸಾವು

ಸಿಡಿಲು ಬಡಿದು ಮೂರು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹನೂರು ತಾಲ್ಲೂಕಿನ ಚೆನ್ನೂರು ಗ್ರಾಮದಲ್ಲಿ ನಡೆದಿದೆ.

6 mins ago

ರಾಯ್‌ಬರೇರಿಯಲ್ಲಿ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ; ಕಿಶೋರಿ ಶರ್ಮಾ ಪಾಲಾದ ಅಮೇಥಿ

ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿರು ಕಾಂಗ್ರೆಸ್‌ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಕಡೆಗೂ ತೆರೆ ಬಿದ್ದಿದ್ದು, ರಾಹುಲ್‌ ಗಾಂಧಿ ತಮ್ಮ…

12 mins ago

ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ

ಕಾರ್ಕಳದಲ್ಲಿ ಕಳೆದ ವರ್ಷದಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಪರಶುರಾಮ ಮೂರ್ತಿ ಮತ್ತೆ ಹಲವಾರು ಊಹಾಪೋಹಗಳಿಗೆ ಕಾರಣವಾಗುತ್ತಿದೆ. ನಿನ್ನೆಯಿಂದ ಮೂರ್ತಿಯ ಉಳಿದ…

36 mins ago

ಅನ್ನದಾತರ ಕನಸಿಗೆ ಬರೆ ಎಳೆದ ಗಾಳಿ ಮಳೆ: ಎಕರೆಗಟ್ಟಲೇ ಬಾಳೆ ಫಸಲು ನಾಶ

ಬಿಸಿಲಿನ ತಾಪಮಾನದಿಂದ ಬಸವಳಿದ್ದ ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ವರುಣಾಗಮನದಿಂದಾಗಿ ತಂಪಿನ…

36 mins ago

ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳಿಸಿದ್ದೆ ಸಿಎಂ: ಆರ್ ಅಶೋಕ್ ಆಕ್ರೋಶ

ಎಲ್ಲಾ ಎಪಿಸೋಡ್‌ಗಳನ್ನ ನೋಡಿದಾಗ ಸಿದ್ದರಾಮಯ್ಯನವರೇ ಪ್ರಜ್ವಲ್ ರೇವಣ್ಣ ನನ್ನು ವಿದೇಶಕ್ಕೆ ಕಳಿಸಿದಾರೆ ಅನಿಸುತ್ತೆ ಎಂದು ಬೀದರ್‌ನಲ್ಲಿ ವಿಪಕ್ಷ ನಾಯಕ ಆರ್…

55 mins ago

ಇಂದು ಮಧ್ಯಾಹ್ನದಿಂದಲೇ ಸಿಲಿಕಾನ್​ ಸಿಟಿಯಲ್ಲಿ ಭರ್ಜರಿ ಮಳೆ

ಬರೋಬ್ಬರಿ 6 ತಿಂಗಳ ಬಳಿಕ ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಭರ್ಜರಿ ಮಳೆಯಾಗಿದೆ. ಇಂದು ಮಧ್ಯಾಹ್ನದಿಂದಲೇ ಬೆಂಗಳೂರಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ನಗರದ…

1 hour ago