ಚಿಕಮಗಳೂರು

ಚಿಕ್ಕಮಗಳೂರು: ವೃದ್ಧೆ ಬದುಕಿರುವಾಗಲೇ ಮರಣ ಪತ್ರ ನೀಡಿದ ಅಧಿಕಾರಿಗಳು

ಚಿಕ್ಕಮಗಳೂರು : ಆಸ್ತಿಗಾಗಿ ಬದುಕಿರುವಾಗಲೇ ವೃದ್ಧೆಯ ಹೆಸರಿನಲ್ಲಿ ಸಂಬಂಧಿಕರು ಮರಣ ಪತ್ರ ಸೃಷ್ಟಿ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಪಟ್ಟಣದಲ್ಲಿ ನಡೆದಿದೆ. ವೃದ್ಧೆಯ ಮರಣ ಪತ್ರ  ಸೃಷ್ಟಿಗೆ ಮುಂದಾದ ಸಂಬಂಧಿಕರನ್ನು ವಿಚಾರಿಸದೆ ಹಾಗೂ ವೃದ್ಧೆ ಬದುಕಿದ್ದಾರಾ ಅಥವಾ ಸಾವನ್ನಪ್ಪಿದ್ದಾರಾ ಎಂದು ಪರಿಶೀಲಿಸದೆ ತಾಲೂಕು ಅಧಿಕಾರಿಗಳು ಕೂಡ ಯಡವಟ್ಟು ಮಾಡಿದ್ದಾರೆ. ಬದುಕಿರುವಾಗಲೇ ವೃದ್ಧೆ ಹೆಸರಿಗೆ ಮರಣ ಪತ್ರ, ವಂಶವೃಕ್ಷ ನೀಡಿದ್ದಾರೆ.

ಮರಣ ಪತ್ರ, ವಂಶವೃಕ್ಷ ಸೃಷ್ಟಿ ಮಾಡಿ ಆಸ್ತಿ ಕಬಳಿಕೆಗೆ ಸಂಬಂಧಿಕರು ಯತ್ನಿಸಿದ್ದು, ಜಮೀನು ಕಳೆದುಕೊಂಡು ವೃದ್ಧೆ ಸಾರಮ್ಮ ಬೀದಿಗೆ ಬಿದ್ದಿದ್ದಾರೆ. ವೃದ್ಧೆ ಸತ್ತು ಹೋಗಿದ್ದಾರೆಂದು ಮರಣ ಪತ್ರ ಸೃಷ್ಟಿ ಮಾಡಿದ್ದು, ವೃದ್ಧೆಯ ಮರಣ ಪತ್ರ ಬಂದ ಕಾರಣ ರೇಷನ್ ಕಾರ್ಡ್ ಕೂಡ ಬಂದ್ ಆಗಿದೆ.

ಬಾಳೆಕೊಪ್ಪ ಸರ್ವೇ ನಂ 26 ರಲ್ಲಿರುವ ಒಂದು ಎಕರೆ 16 ಗುಂಟೆ ಜಮೀನಿಗಾಗಿ ಸಾರಮ್ಮ ಸಂಬಂಧಿಕರಾದ ಇ.ಟಿ.ಬಾಬು ಹಾಗೂ ಶ್ರೀಜಾ ಎಂಬುವರು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ಜಮೀನು ಕೊಡುವುದಿಲ್ಲ ಎಂದು ಇ.ಟಿ.ಬಾಬು ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸೂಕ್ತ ನ್ಯಾಯ ಒದಗಿಸುವಂತೆ ಟಿವಿ9 ಡಿಜಿಟಲ್​ ಬಳಿ ವೃದ್ಧೆ ತಮ್ಮ ಆಳಲು ತೋಡಿಕೊಂಡಿದ್ದಾರೆ.

ಈ ಹಿಂದೆಯೂ ಕೂಡ ಇಂತಹದ್ದೇ ಘಟನೆಯೊಂದು ಕೋಲಾರದಲ್ಲಿ ನಡೆದಿತ್ತು.

Gayathri SG

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

6 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

6 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

7 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

7 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

7 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

7 hours ago