ಅವರು ಅಲ್ಲಾಹುನನ್ನು ಕೂಗುವುದಾದರೆ ನಾವು ರಾಮನನ್ನು ಕೂಗುತ್ತೇವೆ; ಋಷಿಕುಮಾರ ಸ್ವಾಮೀಜಿ

ಚಿಕ್ಕಮಗಳೂರು : ಮುಲ್ಲಾ ನಮಾಜ್‌ ಮಾಡುವುದಾದರೆ ಯತಿಯಾಗಿರುವ ನನಗೂ ಕೂಗಲು ಅವಕಾಶ ಮಾಡಿಕೊಡಿ. ಅವರು ಅಲ್ಲಾಹುನನ್ನು ಕೂಗುವುದಾದರೆ ನಾವು ರಾಮನನ್ನು ಕೂಗುತ್ತೇವೆ. ಮುಸ್ಲಿಮರಿಗೆ ಒಂದು ನ್ಯಾಯ, ಹಿಂದೂಗಳಿಗೆ ಒಂದು ನ್ಯಾಯ ಎಷ್ಟು ಸರಿ ಎಂದು ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಪ್ರಶ್ನಿಸಿದರು.

ಸಖರಾಯಪಟ್ಟಣದಲ್ಲಿ ಮೈಕ್‌ ಬ್ಯಾನ್‌ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಶ್ರೀಗಳು, ನಮ್ಮ ಮಠದಲ್ಲಿ ಕಾಳಿ ಕೂಗು ಕೂಗುತ್ತಿದ್ದೇವೆ. ಮಸೀದಿಗಳಲ್ಲಿ ಐದು ಬಾರಿ ಕೂಗುವುದಕ್ಕೆ ನ್ಯಾಯಾಲಯ ನಿಷೇಧ ಹೇರಿದೆ.

ಆದರೂ ಅದನ್ನು ತಪ್ಪಿಸಲು ಆಗುತ್ತಿಲ್ಲ. ಹೀಗಾಗಿ ಈ ನೆಲದ ಕಾನೂನಿನ ಶಕ್ತಿ ಎಷ್ಟು ಎಂಬುದನ್ನು ತೋರಿಸಿಕೊಡುವ ದೃಷ್ಟಿಯಿಂದ ನಾವು ಕಾರ್ಯನಿರ್ವಹಿಸಬೇಕಿದೆ. ಈ ಬಗ್ಗೆ ಎಲ್ಲ ಹಿಂದೂ ಸಂಘಟಕರು ಒಂದಾಗಿ ಅಭಿಯಾನ ಆರಂಭಿಸಬೇಕು. ಜತೆಗೆ ಸರಕಾರ ಸೂಕ್ತ ತೀರ್ಮಾನ ತೆಗೆದುಕೊಂಡು ಮಸೀದಿಗಳಿಂದ ಮೈಕ್‌ ತೆಗೆಯಲು ಮುಂದಾಗಬೇಕು ಎಂದರು.

Gayathri SG

Recent Posts

ಪ್ರಜ್ವಲ್ ರೇವಣ್ಣ ಪ್ರಕರಣದ ನಂತರ ಬಿಜೆಪಿ ಮೈತ್ರಿ ಬಿಡಬೇಕಿತ್ತು: ಸಲೀಂ ಅಹಮ್ಮದ್‌

'ಹಾಸನದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣನವರ ಪೆನ್‌ಡ್ರೈವ್‌ ಘಟನೆ ನಂತರ ಬಿಜೆಪಿ, ಜೆಡಿಎಸ್‌ ಪಕ್ಷದೊಂದಿಗಿನ ಮೈತ್ರಿ ಬಿಡಬೇಕಿತ್ತು' ಎಂದು ಸರ್ಕಾರದ…

14 mins ago

ಲೈಂಗಿಕ ದೌರ್ಜನ್ಯ ಕೇಸ್; ಜಾಮೀನು ಕೋರಿ ಕೋರ್ಟ್​ ಮೆಟ್ಟಿಲೇರಿದ ರೇವಣ್ಣ

ಪ್ರಜ್ವಲ್ ರೇವಣ್ಣ ಮತ್ತು ಎಚ್​ಡಿ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಎಸ್ಐಟಿಯ ತನಿಖೆ ವೇಗಪಡೆದುಕೊಂಡಿದೆ.

21 mins ago

ಮೇ ತಿಂಗಳಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ

ಮೇ ತಿಂಗಳಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಗುಡ್​​ನ್ಯೂಸ್​ವೊಂದನ್ನು ನೀಡಿದೆ.

39 mins ago

ಪ್ರತ್ಯೇಕ ಭಾಗಗಳಲ್ಲಿ ಹುಲಿ ದರ್ಶನ: ನೀರಿನಲ್ಲಿ ವಿಶ್ರಮಿಸುತ್ತಿದ್ದ ಹುಲಿಯನ್ನ ಅಟ್ಟಾಡಿಸಿದ ಆನೆ

ತಾಲೂಕಿನ ಪ್ರತಿಷ್ಠಿತ ಹುಲಿ ಸಂರಕ್ಷಿತಾರಣ್ಯ ಬಂಡೀಪುರದ ಪ್ರತ್ಯೇಕ ಕಡೆಯಲ್ಲಿ ಹುಲಿ ದರ್ಶನವಾಗಿದೆ, ಇದರಲ್ಲಿ ಆನೆ ಹುಲಿಯನ್ನ ಹಿಮ್ಮೆಟ್ಟಿಸುವ ದೃಶ್ಯ ರೋಚಕವಾಗಿದೆ.

53 mins ago

ಮಾಸ್ ರೇಪಿಸ್ಟ್ ಪರ ಪ್ರಧಾನಿ ನರೇಂದ್ರ ಮೋದಿ ಮತಯಾಚಿಸಿದ್ದಾರೆ; ರಾಗಾ ಕಿಡಿ

ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

1 hour ago

ಕಾಂಗ್ರೆಸ್‌‌ಗೆ ಬೆಂಬಲ ಸೂಚಿಸಿ ಬೃಹತ್ ಬಂಜಾರಾ ಸ್ವಾಭಿಮಾನಿ ಸಮಾವೇಶ

ಬಂಜಾರಾ ಸಮುದಾಯದ ಒಗ್ಗಟ್ಟು ನೋಡಿ ಸಂತೋಷವಾಗಿದ್ದು, ನಿಮ್ಮ ಬದುಕನ್ನು ಕಟ್ಟಿಕೊಡುವ ಕೆಲಸ ನಾವು ಮಾಡಿದ್ದೇವೆ ಎಂದು ಬೃಹತ್ ಕೈಗಾರಿಕೆ ಹಾಗೂ…

1 hour ago