Bengaluru 26°C
Ad

ಪುರಸಭೆ ಸದಸ್ಯನ ಸಮ್ಮುಖದಲ್ಲಿ ಪ್ರೇಮ ವಿವಾಹ

ತಾಲೂಕಿನ ಬನ್ನೂರು ಶುಭಾಷ್ ನಗರದ 20ನೇ ವಾರ್ಡ್ ನ ಪುರಸಭೆ ಸದಸ್ಯ ಬಿ.ಶಿವಣ್ಣ ಮತ್ತು ಗ್ರಾಮದ ಯಜಮಾನರ ಸಮ್ಮುಖದಲ್ಲಿ ಪ್ರೇಮಿಗಳಿಬ್ಬರ ವಿವಾಹವು ಸರಳವಾಗಿ ನೆರವೇರಿತು.

ತಿ. ನರಸೀಪುರ: ತಾಲೂಕಿನ ಬನ್ನೂರು ಶುಭಾಷ್ ನಗರದ 20ನೇ ವಾರ್ಡ್ ನ ಪುರಸಭೆ ಸದಸ್ಯ ಬಿ.ಶಿವಣ್ಣ ಮತ್ತು ಗ್ರಾಮದ ಯಜಮಾನರ ಸಮ್ಮುಖದಲ್ಲಿ ಪ್ರೇಮಿಗಳಿಬ್ಬರ ವಿವಾಹವು ಸರಳವಾಗಿ ನೆರವೇರಿತು.

Ad

ಕೆ ಎಸ್‌ ಆರ್‌ ಟಿಸಿ ನಿಲ್ದಾಣದಲ್ಲಿ ಬಳಿ ಇರುವ ಈಶ್ವರ ದೇಗುಲದಲ್ಲಿ ಶಾಸ್ತ್ರೋಕ್ತವಾಗಿ ಹಾಲುರೆದು, ತಾಳಿ ಕಟ್ಟಿಸಿ ಮದುವೆ ಕಾರ್ಯವನ್ನು ನಡೆಸಲಾಯಿತು. ಕೆಲ ವರ್ಷಗಳಿಂದ ಪರಸ್ಪರ ಪರಸ್ಪರ ಪ್ರೀತಿಸುತ್ತಿದ್ದ ಮಹಾಲಕ್ಷ್ಮೀ ಮತ್ತು ಜಗದೀಶ್ ಅವರ ಮನೆಯವರ ಜತೆ ಮಾತುಕತೆ ನಡೆಸಿ ಸರಳ ವಿವಾಹಕ್ಕೆ ಪೂರ್ವ ಸಮ್ಮತಿ ಪಡೆದು ಮದುವೆಯನ್ನು ಸರಳವಾಗಿ ನಡೆಸಲಾಯಿತು.

Ad

ಇದೇ ವೇಳೆ ಮಾತನಾಡಿದ ಪುರಸಭಾ ಸದಸ್ಯ ಶಿವಣ್ಣ, ವಧು-ವರರು ಪರಸ್ಪರ ಪ್ರೀತಿಸಿದ್ದರಿಂದ ಎರಡು ಕುಟುಂಬದವರ ಜತೆ ಚರ್ಚಿಸಿ ಹೆಚ್ಚು ಖರ್ಚು ವೆಚ್ಚವಿಲ್ಲದೆ ಸರಳ ವಿವಾಹ ಮಾಡಿಕೊಳ್ಳಲು ಒಪ್ಪಿಸಲಾಗಿತ್ತು. ಶನಿವಾರ ವಧು-ವರರ ಸಂಬಂಧಿಕರು, ಗ್ರಾಮಸ್ಥರ ಯಜಮಾನರ ಸಮ್ಮುಖದಲ್ಲಿ ಮದುವೆ ನೆರವೇರಿಸಲಾಗಿದೆ.

Ad

ಗ್ರಾಮೀಣ ಪ್ರದೇಶದಲ್ಲಿ ಸರಳ ವಿವಾಹ ಬಹಳ ಅತಿ ಮುಖ್ಯವಾಗಿದೆ. ಬಡ ಕುಟುಂಬಗಳು ಸಾಲ ಮಾಡಿ ಮದುವೆ ಕಾರ್ಯ ಮಾಡುವುದಕ್ಕಿಂತ ಸರಳ ವಿವಾಹಳತ್ತ ಹೆಚ್ಚು ಗಮನಹರಿಸಬೇಕು. ಇದರಿಂದ ಆರ್ಥಿಕ ಬಾಧೆ ಕಡಿಮೆಯಾಗುತ್ತದೆ ಎಂದರು. ಜಿಲ್ಲಾ ಕಾಂಗ್ರೆಸ್ ನ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ರವರು ವಧು ವರರಿಗೆ ತಾಳಿ ಮತ್ತು ಸಮವಸ್ತ್ರವನ್ನು ನೀಡಿದರು.

Ad

ಇದೇ ಸಂದರ್ಭದಲ್ಲಿ ಯಜಮಾನರಾದ ಸ್ವಾಮಿ, ರವಿ, ಮಾದೇಶ್, ಗಿರಿಯಪ್ಪ, ಚಿಕ್ಕಕಾಳಯ್ಯ, ಸ್ವಾಮಿ, ಶಿವಣ್ಣ, ನಾಗೇಂದ್ರ, ಸಿದ್ದಯ್ಯ, ಮಲ್ಲೇಶ್, ಕೃಷ್ಣ, ಉಮೇಶ್, ನಿಂಗರಾಜು, ಮಂಚಯ್ಯ, ಸೋಮಣ್ಣ ಮುಂತಾದವರು ಹಾಜರಿದ್ದರು

Ad
Ad
Ad
Nk Channel Final 21 09 2023