Bengaluru 23°C

ಜ. 4 ರಂದು ಲಯನ್ಸ್ ಕ್ಲಬ್ 317ಸಿ ಪ್ರಾಂತ್ಯ 2ರ ಪ್ರಾಂತೀಯ ಸಮ್ಮೇಳನ

ಉಡುಪಿ, ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಕ್ಲಬ್ 317ಸಿ ಪ್ರಾಂತ್ಯ 2ರ ಪ್ರಾಂತೀಯ ಸಮ್ಮೇಳನ

ಉಡುಪಿ: ಉಡುಪಿ, ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಕ್ಲಬ್ 317ಸಿ ಪ್ರಾಂತ್ಯ 2ರ ಪ್ರಾಂತೀಯ ಸಮ್ಮೇಳನ ‘ಜಯವರೇಣ್ಯ’ ಜ.4ರಂದು ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಪ್ರಾಂತ್ಯಾಧ್ಯಕ್ಷ ವರುಣ್ ಕೆ. ಶೆಟ್ಟಿ ಹೇಳಿದರು.


ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯಿಂದ 500ಕ್ಕೂ ಅಧಿಕ ಪ್ರತಿನಿಧಿಗಳು ಮತ್ತು ಆಹ್ವಾನಿತ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಆಕರ್ಷಕ ಬ್ಯಾನರ್ ಪ್ರದರ್ಶನ ಜರುಗಲಿದೆ. ಈ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಜೀವರಕ್ಷಕ ಈಶ್ವರ ಮಲ್ಪೆ, ಧಾರ್ಮಿಕ ಕ್ಷೇತ್ರದ ಮುಖಂಡರಾದ ನಡಿಕೆರೆ ರತ್ನಾಕರ ಶೆಟ್ಟಿ ಹಾಗೂ ಕಳತ್ತೂರು ಅರುಣಾಕರ ಶೆಟ್ಟಿ ಮತ್ತು ಕ್ರೀಡಾ ಸಾಧಕ ಏಕನಾಥ ಭಟ್‌ ಅವರನ್ನು ಸನ್ಮಾನಿಸಲಾಗುವುದು.


ಅರ್ಹ ಫಲಾನುಭವಿಗಳಿಗೆ ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಕ್ಕೆ ಸಹಾಯ ಮೊದಲಾದ ಸೇವಾ ಚಟುವಟಿಕೆಗಳು, ಮುಲ್ಕಿ ರವೀಂದ್ರ ಪ್ರಭು ಬಳಗದವರಿಂದ ಸುಮಧುರ ಸಂಗೀತ ರಸಮಂಜರಿಗಳಿಂದ ಕಾರ್ಯಕ್ರಮ ನಡೆಯಲಿದೆ ಎಂದರು.


ಪ್ರಾಂತ್ಯದ ಪ್ರಥಮ ಮಹಿಳೆ ಶ್ವೇತಾ ವಿ. ಶೆಟ್ಟಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಪ್ರಾಂತ್ಯಾಧ್ಯಕ್ಷ ವರುಣ್ ಕೆ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನ ಪ್ರಸಂಗಕರ್ತ ಪ್ರೊ. ಪವನ್ ಕಿರಣಕೆರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದಿಕ್ಕೂಚಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಾಂತ್ಯ 2ರ ಸಮ್ಮೇಳನ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಲಯನ್ಸ್ ಕ್ಲಬ್ ಕಾಪು ಅಧ್ಯಕ್ಷ ಉದಯ್ ಆರ್. ಶೆಟ್ಟಿ, ಈಶ್ವರ್ ಶೆಟ್ಟಿ ಚಿಟ್ಪಾಡಿ ಉಪಸ್ಥಿತರಿದ್ದರು.


Nk Channel Final 21 09 2023