Bengaluru 22°C
Ad

ಪೊಲೀಸರಿಂದ ಶಾಸಕರ ಹೋಟೆಲ್ ಪರಿಶೀಲನೆ ಆಗಲಿ: ರಾಜಶೇಖರ ಪಾಟೀಲ

ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರ ಇಬ್ಬರು ಸಹೋದರರು ಅನೇಕ ಜನರಿಗೆ ಬೆದರಿಕೆ ಹಾಕಿ ಹೊಡೆದಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ಮಾಡಬೇಕು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಒತ್ತಾಯಿಸಿದರು.

ಹುಮನಾಬಾದ್: ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರ ಇಬ್ಬರು ಸಹೋದರರು ಅನೇಕ ಜನರಿಗೆ ಬೆದರಿಕೆ ಹಾಕಿ ಹೊಡೆದಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ಮಾಡಬೇಕು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಒತ್ತಾಯಿಸಿದರು.

Ad
300x250 2

ಪಟ್ಟಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು, ಶಾಸಕರಿಗೆ ಸಂಬಂಧಿಸಿದ ನಾಗೇಶ್ವರಿ ಹೋಟೆಲ್‌ನಲ್ಲಿ ಪೊಲೀಸರು ತನಿಖೆ ಮಾಡಿದರೆ‌ ಇವರು ಇಲ್ಲಿಯವರೆಗೆ ಎಷ್ಟು ಜನರಿಗೆ ಹೊಡೆದಿದ್ದಾರೆ ಎಂಬ ಸತ್ಯ ಹೊರ ಬರಲಿದೆ ಎಂದರು.

ಕಠಳ್ಳಿ ಗ್ರಾಮದಲ್ಲಿ ರಾಜರೆಡ್ಡಿ ಎಂಬುವವರು ಜೆಜೆಎಂ ಕಾಮಗಾರಿ ಮಾಡುತ್ತಿದ್ದಾರೆ. ಇವರು ಹಳೇ ಟ್ಯಾಂಕರಿಗೆ ಹೊಸ ಟ್ಯಾಂಕರ್ ನಿರ್ಮಾಣ ಎಂದು ಹೇಗೆ ಬರೆದರು. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಪಕ್ಷದ ಕಾರ್ಯಕರ್ತ ಬಸವರಾಜ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ.

ಈ ಹಿಂದೆಯೂ ಸಹ ನಮ್ಮ ಪಕ್ಷದ ಯೂಥ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಉಮೇಶ್ ಜಮಗಿ‌ ಅವರ ಮೇಲೂ ಹಲ್ಲೆ ಮಾಡಿದ್ದರು. ಈ ಘಟನೆಗಳು ಮರುಕಳಿಸದಂತೆ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ನಾವು ಸಹ ಪ್ರತಿ ಉತ್ತರ ನೀಡುವುದು ಅನಿವಾರ್ಯವಾಗಲಿದೆ ಎಚ್ಚರಿಸಿದರು.

Ad
Ad
Nk Channel Final 21 09 2023
Ad