ಕೊಪ್ಪಳ: 17 ನೇ ದಿನದ ಗಣಪತಿ ವಿಸರ್ಜನೆ ವೇಳೆ ಗಲಾಟೆ ನಡೆದು ಯುವಕನಿಗೆ ಚಾಕು ಇರಿದು, ಮೂವರ ಮೇಲೆ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಗಂಗಾವತಿ ನಗರದ ಯಶೋದಾ ಆಸ್ಪತ್ರೆ ಎದುರು ನಿನ್ನೆ(ಸೋಮವಾರ) ತಡ ರಾತ್ರಿ ನಡೆದಿದೆ.
ಗಣಪತಿ ವಿಸರ್ಜನೆ ವೇಳೆ ಡಾನ್ಸ್ ಮಾಡುತ್ತಿದ್ದ ಯುವಕರ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಯುವಕನೊಬ್ಬನಿಗೆ ಚಾಕು ಇರಿದಿದ್ದಾರೆ. ಗುಂಡಮ್ಮ ಕ್ಯಾಂಪ್ ನ ಗಜಾನನ ಯುವಕರ ಸಂಘದ ಡಿಜೆ ಎದುರು ಯುವಕರು ಡಾನ್ಸ್ ಮಾಡುತ್ತಿದ್ದರು. ಈ ವೇಳೆ ಗಲಾಟೆ ನಡೆದಿದೆ. ಘಟನೆಯಲ್ಲಿ ಶಿವು (38) ಎಂಬಾತನಿಗೆ ಚಾಕು ಇರಿದಿದ್ದಾರೆ. ಗಣೇಶ, ಮಂಜು,ಸಾಗರ್ ಎಂಬುವವರ ಮೇಲೆ ಹಲ್ಲೆ ಮಾಡಲಾಗಿದೆ.
ಚಾಕು ಇರಿತಕ್ಕೊಳಗಾಗದ ಶಿವು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಾಯಾಳುಗಳಿಗೆ ಗಂಗಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Ad