Bengaluru 28°C
Ad

ಚಿಕ್ಕಮಗಳೂರು ಧ್ವಜ ಹಾರಾಟ ಬೆನ್ನಲ್ಲೇ ಕೊಪ್ಪಳದಲ್ಲೂ ಫ್ರೀ ಪ್ಯಾಲೆಸ್ತೇನ್ ಬರಹ!

ಕೊಪ್ಪಳದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆ ವೇಳೆ ಬ್ಯಾನರ್‌ನಲ್ಲಿ 'ಫ್ರೀ ಪ್ಯಾಲೆಸ್ತೇನ್' ಬರಹ ಹಾಕಲಾಗಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಕೊಪ್ಪಳ :  ಕೊಪ್ಪಳದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆ ವೇಳೆ ಬ್ಯಾನರ್‌ನಲ್ಲಿ ‘ಫ್ರೀ ಪ್ಯಾಲೆಸ್ತೇನ್’ ಬರಹ ಹಾಕಲಾಗಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಈದ್ ಮಿಲಾದ್ ಹಬ್ಬ ಆಚರಣೆ ಹಿನ್ನೆಲೆ ಶುಭ ಕೋರುವ ಬ್ಯಾನರ್ ನಗರದಲ್ಲೆಲ್ಲ ಹಾಕಲಾಗಿದೆ. ಇನ್ನೊಂದು ಕಡೆ ಬ್ಯಾನರ್‌ನಲ್ಲಿ ಫ್ರೀಪ್ಯಾಲೆಸ್ತೇನ್ ಬರಹ ಬೆಳಕಿಗೆ ಬಂದಿದೆ. ಈ ವಿಚಾರ ಹಿಂದೂ ಸಂಘಟನೆಗಳಿಗೆ ತಿಳಿಯುತ್ತಿದ್ದಂತೆ ಜಮಾಯಿದ ಕಾರ್ಯಕರ್ತರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ ಬಳಿಕ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬ್ಯಾನರ್‌ಗೆ ಪ್ಯಾಚ್ ಹಾಕಿದ್ದಾರೆ.

 

Ad
Ad
Nk Channel Final 21 09 2023